ಲೇಖನ
– ಡಾ.ಶಶಿಕಾಂತ ಪಟ್ಟಣ
ಸಾಹಿತಿ ಮತ್ತು ಸಂಶೋಧಕರು
ರಾಮದುರ್ಗ – ಪುಣೆ
ಉದಯರಶ್ಮಿ ದಿನಪತ್ರಿಕೆ
ಮಾನವೀಯ ಮೌಲ್ಯಗಳ ಜೊತೆಗೆ ಸದಾ ಸಹೃದಯದ ಸ್ನೇಹ ಜೀವಿ ಶ್ರೀ ಜಿ ಬಿ ಸಾಲಕ್ಕಿ ಅವರದ್ದು. ಮಾತು ಕಠೋರ ಮನಸ್ಸು ಮೃದು ಬದುಕನ್ನು ಅತ್ಯಂತ ಗಾಢವಾಗಿ ಪ್ರೀತಿಸುವ ಸೃಜನಶೀಲ ಮನಸ್ಸಿನವರು. ಬಿಎಸೆನ್ನೆಲ್ ನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಕಾರ್ಮಿಕ ಸಂಘಟನೆ ಸಂಘರ್ಷ ಹೋರಾಟದ ಜೊತೆಗೆ ಸಾಹಿತ್ಯ ಪ್ರೇಮ ಆಧ್ಯಾತ್ಮಿಕ ಚಿಂತನೆ ಸಾಮಾಜಿಕ ಸೇವೆ ಅಗಮ್ಯವಾದದ್ದು. ಆಧ್ಯಾತ್ಮಿಕ ಚಿಂತನೆಯು ಆತ್ಮ, ಆತ್ಮ ಅಥವಾ ಆತ್ಮವನ್ನು ಆಲೋಚಿಸುತ್ತಿದೆ. ನಾವು ಈ ದೇಹವಲ್ಲ ಎಂದು ನಾವು ಅರಿತುಕೊಳ್ಳುತ್ತೇವೆ, ದೇಹವು ನಿರಂತರವಾಗಿ ಬದಲಾಗುತ್ತಿರುತ್ತದೆ. ಮೊದಲು ನಾವು ಹುಟ್ಟಿದಾಗ ಮಗು, ನಂತರ ನಾವು ಬೆಳೆಯುತ್ತೇವೆ, ನಾಳೆ ನಾವು ವಯಸ್ಸಾಗುತ್ತೇವೆ ಮತ್ತು ಅಂತಿಮವಾಗಿ ದೇಹವು ಸಾಯುತ್ತದೆ. ನಾವು ಆಲೋಚಿಸಿದಾಗ, ನಾವು ಈ ದೇಹವಲ್ಲ ಎಂದು ಆತ್ಮಾವಲೋಕನ ಮಾಡಿದಾಗ, ನಾವು ಆತ್ಮ ಎಂಬ ದಿವ್ಯ ಸತ್ಯವನ್ನು ತಿಳಿದುಕೊಳ್ಳುತ್ತೇವೆ. ಇದು ಆಧ್ಯಾತ್ಮಿಕ ಚಿಂತನೆ. ನೀವು ಏನಲ್ಲ, ನೀವು ದೇಹವಲ್ಲ, ನೀವು ಮನಸ್ಸು ಕೂಡ ಅಲ್ಲ ಏಕೆಂದರೆ ನೀವು ಮನಸ್ಸನ್ನು ಹುಡುಕಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡು ನೀವು ಅದನ್ನು ಮಾಡುತ್ತೀರಿ. ಆದರೆ ನೀನಿರುವೆ, ನೀನಿರುವೆ – ಇರುವವನು ಯಾರು? ಇದು ಸಾವಿನ ಸಮಯದಲ್ಲಿ ನಿರ್ಗಮಿಸುವ ಆತ್ಮ, ನಂತರ ಉಸಿರು ಇಲ್ಲ. ನಾವು ಆ ಜೀವ ಶಕ್ತಿ, ಶಕ್ತಿ, ಇದು ಆಧ್ಯಾತ್ಮಿಕ ಚಿಂತನೆ. ಇಂತಹ ಗಂಭೀರ ಚಿಂತನೆಯಲ್ಲಿ ವಿಜಯಪುರದ ಪುಣ್ಯ ಪುರುಷ ಶ್ರೀ ಸಿದ್ದೇಶ್ವರ ಸ್ವಾಮಿಗಳ ಗರಡಿಯಲ್ಲಿ ಬೆಳೆದ ಜಿ ಬಿ ಸಾಲಕ್ಕಿ ಅವರು ತಮ್ಮ ಬದುಕಿಗೆ ತಾವೇ ಶಿಲ್ಪಿ ಎಂದರೆ ತಪ್ಪಾಗಲಾರದು.
ಸಾಹಿತ್ಯದ ಓದು ಅಪಾರ. ಎಲ್ಲ ಬಗೆಯ ಸಾಹಿತ್ಯವನ್ನು ಓದುತ್ತಾ ಬರೆಯುತ್ತಾ ಬೆಳೆದವರು.
ಎಲ್ಲಾ ಸಾಹಿತ್ಯವು ಸಿಂಹಾವಲೋಕನವಾಗಿದೆ ಮತ್ತು ಲೇಖಕರು ಅನುಭವಿಸಿದ ಅಥವಾ ಊಹಿಸಿದಂತೆ ಹಿಂದಿನದನ್ನು ದಾಖಲಿಸುತ್ತದೆ. ಅತ್ಯಂತ ಕಾಲ್ಪನಿಕ ಸಾಹಿತ್ಯವೂ (ನೀತಿಕಥೆಗಳು, ವೈಜ್ಞಾನಿಕ ಕಾದಂಬರಿಗಳು, ಕಾವ್ಯಗಳು) ಹಿಂದಿನ ಅನುಭವದ ಸಂಶ್ಲೇಷಿತ ಸಂಯೋಜನೆಗಳಾಗಿವೆ. ನಾವು ನೋಡಿರದ ಹೊಸ ಬಣ್ಣವನ್ನು ನಾವು ಊಹಿಸಲು ಸಾಧ್ಯವಿಲ್ಲ ಅಥವಾ ನಾವು ಅನುಭವಿಸಿದ ಪ್ರಾಣಿಗಳ ಭಾಗಗಳಿಂದ ಮಾಡದ ಕಾಲ್ಪನಿಕ ದೈತ್ಯಾಕಾರದ ನಿರ್ಮಾಣವನ್ನು ನಾವು ಮಾಡಲಾಗುವುದಿಲ್ಲ. ಓದುಗನ ಶಬ್ದಕೋಶ, ಬುದ್ಧಿವಂತಿಕೆ ಮತ್ತು ಸಂಚಿತ ಅನುಭವದ ಪರಿಭಾಷೆಯಲ್ಲಿ ಸಾಮರ್ಥ್ಯದಿಂದ ಸಾಹಿತ್ಯಕ್ಕೆ ಅರ್ಥವನ್ನು ನೀಡಲಾಗುತ್ತದೆ ಮತ್ತು ಸುತ್ತುವರಿಯಲಾಗುತ್ತದೆ. ನಾವು ಒಂದೇ ನದಿಗೆ ಎರಡು ಬಾರಿ ಕಾಲಿಡಲು ಸಾಧ್ಯವಿಲ್ಲ. ನದಿ ಎಂದಿಗೂ ಒಂದೇ ಆಗಿರುವುದಿಲ್ಲ ಮತ್ತು ನಾವು ಎರಡನೇ ಬಾರಿಗೆ ಒಂದೇ ಆಗಿರುವುದಿಲ್ಲ. ಒಬ್ಬ ಪುರುಷನು ಹೆಣ್ಣಿನ ಮೊದಲ ಪ್ರೇಮವಾಗುವುದು ಅದೃಷ್ಟ ಆದರೆ ಮಹಿಳೆಯು ಪುರುಷನ ಕೊನೆಯ ಪ್ರೇಮವಾಗುವುದು ಅದೃಷ್ಟ. ಕೆಲವು ಹಂತಗಳಲ್ಲಿ ಕ್ಲಾಸಿಕ್ ಎಂದು ಪರಿಗಣಿಸಲಾದ ನಿರಂತರತೆಯ ಸಾಹಿತ್ಯವು ಮಾನವ ಜೀವನದ ಸಾರ್ವತ್ರಿಕ ವಿಷಯಗಳೊಂದಿಗೆ ಅನುರಣಿಸುತ್ತದೆ. ವೈಯಕ್ತಿಕ ಓದುಗನಿಗೆ ಮಂಚೂಣಿಯಲ್ಲಿರುವ ಸಾಹಿತ್ಯವು ಓದುಗರ ಅನುಭವವನ್ನು ದೃಢೀಕರಿಸುತ್ತದೆ ಮತ್ತು ಮೌಲ್ಯಗಳು.ಐಟಿ ಸಹ ಕಡಿಮೆ ಮೌಲ್ಯಯುತ ಅಥವಾ ಬೋಧಪ್ರದವಾಗಿದೆ. ಮತ್ತು ಲೇಖಕರ ಉದ್ದೇಶಗಳನ್ನು ವಿವೇಚಿಸಲು ಪರಿಗಣಿಸಬೇಕು: ತಿಳಿಸಲು (ಪುಸ್ತಕಗಳು, ನೀತಿಬೋಧಕ ಕೃತಿಗಳು, ಅಡುಗೆಪುಸ್ತಕಗಳು ಬಿ) ನಿರ್ದೇಶಿಸಲು ವಚನ ಸಾಹಿತ್ಯ , ಬಸವ ತತ್ವ ಪ್ರಸಾರ ಪ್ರಚಾರ) ಮನರಂಜನೆಗಾಗಿ ಹಾಸ್ಯ ಲಘು ಸಾಹಿತ್ಯ. ಆದರೆ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಮಾಹಿತಿ, ನಿರ್ದೇಶನ ಅಥವಾ ಮನರಂಜನೆಯ ಅತಿಕ್ರಮಣ ಮತ್ತು ಮಿಶ್ರಣದ ಬಗ್ಗೆ ಒಬ್ಬರು ಎಚ್ಚರವಾಗಿರಬೇಕು. ವಾಸ್ತವಕ್ಕೆ ಹೊಸ ಪ್ರವೇಶವನ್ನು ಬಯಸಿದವರು ಶ್ರೀ ಸಾಲಕ್ಕಿ , ಜ್ಞಾನ (ವಿಕಸನೀಯ) ಮತ್ತು 7 ವರ್ಷಗಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ (ಬಾಲ್ಯದ ಮೆದುಳು ತೊಳೆಯುವುದು) ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ಅರಿತುಕೊಳ್ಳಿ ಮತ್ತು ವಾಸ್ತವಕ್ಕೆ ತಾಜಾ ಪ್ರವೇಶವನ್ನು ಕುಂಠಿತಗೊಳಿಸುವುದು. ಸಾಮಾಜಿಕ ಸ್ವಾಸ್ಥ್ಯ ಆರೋಗ್ಯದ ಬಗ್ಗೆ ಹಲವಾರು ಯೋಜನೆಗಳನ್ನು ಹಾಕಿ ಕೊಂಡಿದ್ದಾರೆ. ಬುದ್ಧ ಬಸವರ ಆಶಯದಂತೆ ಸಮ ಸಮಾಜವನ್ನು ಕಟ್ಟಬೇಕೆನ್ನುವ ಸುಂದರ ಹೃದಯ ವೈಶಾಲ್ಯತೆ ಇವರದ್ದು.
ಗಣಾಚಾರಿ ಸಂಘಟನಾ ಚತುರರು
ಶ್ರೀ ಜಿ ಬಿ ಸಾಲಕ್ಕಿಯವರು ಸಂಘಟನಾ ಚತುರರು. ಅವರ ಅದ್ಭುತ ಪ್ರತಿಭೆಯಲ್ಲಿ ಅವರ ಸಂಘಟನಾ ಚಾತುರ‍್ಯ ಒಂದು. ಪಕ್ಷಾತೀತವಾಗಿ, ಜಾತ್ಯತೀತವಾಗಿ ಅವರು ಸಾವಿರಾರು ಜನರನ್ನು ಯಾವುದೇ ಹೋರಾಟದಲ್ಲಿ ಸೇರಿಸುತ್ತಾರೆ. ವಿಜಯಪುರದ ಲಿಂಗಾಯತ ಧಾರ್ಮ ಮಾನ್ಯತೆ ಹೋರಾಟ, ರೈತರ ಪರ ಕಾಳಜಿ ಕಾರ್ಮಿಕರ ಸಮಸ್ಯೆಗೆ ಗಟ್ಟಿಯಾಗಿ ಗುಡುಗು ಹಾಕುವ ಶ್ರೀಮಂತಿಕೆ ಅವರನ್ನು ಎತ್ತರಕ್ಕೆ ಒಯ್ದ ಸತ್ಯ ಸಂಗತಿ.
ನಿತ್ಯ ವ್ಯಾಯಾಮ ಆರೋಗ್ಯದ ಗುಟ್ಟು
ನಿಯಮಿತ ವ್ಯಾಯಾಮವು ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ತಮಾ ಮತ್ತು ಬೆನ್ನು ಅಥವಾ ಕೀಲು ನೋವಿನಂತಹ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸುಧಾರಿಸಬಹುದು. ಕೆಲವು ರೋಗಗಳು ಜಂಟಿ ಅಥವಾ ದೇಹದ ನೋವನ್ನು ಅಭಿವೃದ್ಧಿಪಡಿಸಲು ಅಪಾಯಕಾರಿ ಅಂಶಗಳಾಗಿರಬಹುದು, ಇದು ನೋವು ಕಡಿತದ ದೃಷ್ಟಿಕೋನದಿಂದ ವ್ಯಾಯಾಮದ ಪ್ರಮುಖ ಪ್ರಯೋಜನವಾಗಿದೆ ಎಂದು ಮನಗಂಡು ಜಿ ಬಿ ಸಾಲಕ್ಕಿಯವರು ನಿತ್ಯ ಕನಿಷ್ಠ 10 ಕಿಲೋಮೀಟರು ವಾಕಿಂಗ್ ಮಾಡುತ್ತಾರೆ. ವಾಕಿಂಗ್ ಸಂದರ್ಭದಲ್ಲಿ ಸ್ನೇಹಿತರಾದ ಶಿವಲಿಂಗಪ್ಪಣ್ಣ ಕಲಬುರ್ಗಿ ಮತ್ತಿತರ ಜೊತೆಗೆ ದೇಶ ನಾಡು ಭಾಷೆ ಸಂಸ್ಕೃತಿ ಸಾಹಿತ್ಯದ ಬಗ್ಗೆ ಚರ್ಚಿಸುತ್ತಾರೆ.
ದಾಸೋಹಿ ಉದ್ಯಮಿ ಶರಣ ಸಂಸ್ಕೃತಿಯ ರಾಯಭಾರಿ
ಸಾಮಾಜಿಕ ಸಮಾನತೆ, ಮರ್ತ್ಯ ಲೋಕದ ಹಿರಿಮೆ, ಆತ್ಮವಿಮರ್ಶೆ, ನಡೆ-ನುಡಿಯಲ್ಲಿ ಒಂದಾಗುವಿಕೆ, ಸಂಸಾರದಲ್ಲಿ ಸಹಿಷ್ಣುತೆ, ಸಾಮಾಜಿಕ ಬದ್ಧತೆ, ವೈಚಾರಿಕತೆ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದನ್ನು ಶರಣ ಸಂಸ್ಕೃತಿ ಪ್ರತಿಪಾದಿಸುತ್ತದೆ. ವಿಶ್ವಕ್ಕೆ ಮಾದರಿಯಾಗಿ ನಿಲ್ಲಬಲ್ಲ ಸಂಸ್ಕೃತಿ ಇದ್ದರೆ ಅದು ಶರಣ ಸಂಸ್ಕೃತಿ. ಹನ್ನೆರಡನೆಯ ಶತಮಾನದ ಶರಣರು ಸುಂದರ, ಸದೃಢ ಸಮಾಜ ನಿರ್ಮಾಣದಲ್ಲಿ ಕಾಯಕ ದಾಸೋಹ ಮಹತ್ವವನ್ನು ಆಚರಿಸುವ ಮೂಲಕ ಸರ್ವರಿಗೂ ಮಾರ್ಗದರ್ಶಿ ಸೂತ್ರಗಳನ್ನು ವಚನಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ ಎಂದೆನ್ನುವ ಹಿರಿಯ ಸ್ನೇಹಿತರಾದ ಸಾಲಕ್ಕಿಯವರು ಅಂತಹ ಬಸವ ತತ್ವಗಳನ್ನು ಅಧ್ಯಯಿಸುವ ಪ್ರಾಮಾಣಿಕ ಉದ್ಯಮಿ ದಾಸೋಹಿ ಸ್ನೇಹ ಜೀವಿ.
ಮನೆಗೆ ಬಂದವರಿಗೆ ವಚನಗಳ ಪುಸ್ತಕವನ್ನು ಉಡುಗೊರೆಯಾಗಿ ಕೊಡುತ್ತಾರೆ.
ಬಸವ ಗಂಗಾ ಉದ್ಯಮ ಸ್ಥಾಪಿಸಿ 25 ವರುಷ ಮದುವೆಯಾಗಿ 50 ವರುಷ 75 ರ ಗಡಿ ಅಂಚಿನಲ್ಲಿದ್ದರೂ ಸಹಿತ ನವಯುವಕರಂತೆ ಅತ್ಯಂತ ಸ್ಫೂರ್ತಿ ಪ್ರೀತಿಯಿಂದ ಓಡಾಡುತ್ತಾರೆ. ಇವರಿಗೆ ಬಸವಾದಿ ಶರಣರು ಆಯುಷ್ಯ ಮತ್ತು ಆರೋಗ್ಯವನ್ನು ಕಲ್ಪಿಸಲಿ ಎಂದು ಬೇಡಿಕೊಳ್ಳುತ್ತಾ ಸದಾ ನಗುಮುಖದ ಜಿ ಬಿ ಸಾಲಕ್ಕಿಯವರು ಇನ್ನೂ ಹೆಚ್ಚಿನ ಸಮಾಜ ಸೇವೆಯನ್ನು ಮಾಡಲಿ ಎಂದು ಹಾರೈಸುತ್ತೇನೆ.
ಶ್ರೀ ಜಿ ಬಿ ಸಾಲಕ್ಕಿ ನನ್ನ ಸ್ನೇಹಕ್ಕೆ ಹತ್ತು ವರುಷ
ಶ್ರೀ ಸಾಲಕ್ಕಿಯವರು ನಾನು ಮೊದ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರು. ನನ್ನ ಲೇಖನ ಕವನ ಟೀಕಿಸುವ ರೀತಿ ವಿಮರ್ಶೆಗೆ ಸ್ಪಂದಿಸುತ್ತಾ ಶರಣರ ಬದುಕಿನ ಅನೇಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಶ್ರೀಮಂತಿಕೆ ಆಸ್ತಿ ಓದು ಬರಹ ಎಲ್ಲವೂ ಇದ್ದರೂ ಅತ್ಯಂತ ವಿನಮ್ರ ಭಾವದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸಾಕಾರಮೂರ್ತಿ. ಹಾವಿನಾಳ ಕಲ್ಲಯ್ಯ ಮತ್ತು ನುಲಿಯ ಚಂದಯ್ಯನವರ ಬಗ್ಗೆ ನನಗೆ ಹೇಳುತ್ತಾ ಅವರಿಬ್ಬರೂ ಶಿವುನಗಿಯವರು ಸರ್ ನಮ್ಮ ಊರು ಎಂದು ಅಭಿಮಾನದಿಂದ ಹೇಳುತ್ತಿದ್ದರು. ಅವರಲ್ಲಿರುವ ಕನ್ನಡ ಮತ್ತು ಬಸವ ಪ್ರೇಮ ಅಗಾಧವಾದದ್ದು.
ಒಂದೊಮ್ಮೆ ವಿಜಯಪುರದ ಆಗಿನ ಭಾರಿ ನೀರಾವರಿ ಮಂತ್ರಿ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಡಾ ಎಂ.ಬಿ.ಪಾಟೀಲರ ಭೇಟಿಗೆ ನಾವು ಪುಣೆಯಿಂದ ಐದಾರು ಜನರು ವಿಜಯಪುರಕ್ಕೆ ಹೋದೆವು. ಎರಡು ಮೂರು ದಿನ ಅಲ್ಲಿಯೇ ವಾಸ್ತವ್ಯವಿದ್ದೆವು. ಹೇಗೋ ನನ್ನ ಬರುವನ್ನು ಗಮನಿಸಿ ಮರುದಿನ ಸಂಜೆ ನನ್ನ ಭೇಟಿಗೆ ಅತಿಥಿಗೃಹಕ್ಕೆ ಬಂದರು. ಅಲ್ಲದೆ ಸಂಜೆ ತಮ್ಮ ಮನೆಗೆ ಉಪಹಾರಕ್ಕೆ ಆಮಂತ್ರಿಸಿದರು. ಶ್ರೀ ಶಿವು ಹತ್ತಿಕಾಳ ಅವರನ್ನು ಕರೆಯಿಸಿ ಅವರ ಕಾರಿನಲ್ಲಿ ನಮ್ಮನ್ನು ಕರೆದುಕೊಂಡು ಹೋಗಲು ಹೇಳಿದರು. ಶಿವಣ್ಣ ಹತ್ತಿಕಾಳ ಕಾರಿನಲ್ಲಿ ಕರೆದುಕೊಂಡು ಒಂದು ದೊಡ್ಡ ಕಲ್ಯಾಣ ಮಂಟಪ
ತೋರಿಸಿದರು. ಸರ್, ಇದು ಕಿತ್ತೂರು ಚೆನ್ನಮ್ಮನ ಕಲ್ಯಾಣ ಮಂಟಪ ಎಂದು ಹೇಳಿದರು. ಚರ್ಚೆ ಮುಂದುವರೆಸಿ ಸರ್ ಕಿತ್ತೂರು ಚೆನ್ನಮ್ಮ ಯಾವ ಸಮಾಜದವರು ಎಂದು ಕೇಳಿದರು. ಆಗ ನಾನು ಲಿಂಗಾಯತ ಎಂದೆ. ಅದಕ್ಕೆ ಅವರು ನಕ್ಕು, ಸರ್ ಲಿಂಗಾಯತ ಸಮಾಜದ ಯಾವ ಒಳಪಂಗಡವೆಂದು ಮತ್ತೆ ಕೇಳಿದರು. ಆಗ ನಾನು ಲಿಂಗಾಯತ ಬಣಜಿಗ ಎಂದೆ. ಅತ್ಯಂತ ಖುಷಿಯಿಂದ ಶಿವಣ್ಣ ಹೌದೇ ಸರ್ ಎನ್ನುತ್ತಾ ಕೂಡಲೇ ಜಿ ಬಿ ಸಾಲಕ್ಕಿ ಅವರಿಗೆ ಫೋನ್ ಮಾಡಿ, ನಮ್ಮಿಬ್ಬರ ಚರ್ಚೆಯ ಫಲಶೃತಿಯ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದರು. ಶ್ರೀ ಸಾಲಕ್ಕಿ ಅವರ ಮನೆಗೆ ಹೋದರೆ ಅಲ್ಲಿ ಹಿರಿಯ ಪ್ರಾಧ್ಯಾಪಕರು, ಸಂಶೋಧಕರು ಸೇರಿದ್ದರು. ಸೂಕ್ಷ್ಮ ಮತಿಗಳಾದ ಶ್ರೀ ಸಾಲಕ್ಕಿಯವರು ನನ್ನಿಂದ ಕಿತ್ತೂರು ಸಂಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಆತುರರಾಗಿದ್ದರು. ಅವರ ಮನೆಗೆ ಹೋದಾಗ ಸಮಯ ಸಂಜೆ 7 ಚರ್ಚೆ 11 ಆದರೂ ಮುಗಿಯಲಿಲ್ಲ. ಕೊನೆಗೆ ಶ್ರೀ ಸಾಲಕ್ಕಿಯವರು ಮತ್ತು ಶ್ರೀ ಶಿವಾನಂದ ಹತ್ತಿಕಾಳ ಇವರಿಬ್ಬರ ಒತ್ತಾಯ ಆಗ್ರಹದ ಮೇರೆಗೆ ನನಗೆ ಬಣಜಿಗ ಬಂಧು ಪತ್ರಿಕೆಯಲ್ಲಿ ಕಿತ್ತೋರು ಸಂಸ್ಥಾನದ ಸತ್ಯ ಸಂಗತಿಗಳ ಒಟ್ಟು ಎಂಟು ಲೇಖನವನ್ನು ಬರೆಯಲು ಬರೆಸಲು ಕಾರಣವಾಯಿತು.