ಉದಯರಶ್ಮಿ ದಿನಪತ್ರಿಕೆ
ಹೊನವಾಡ: ಗ್ರಾಮದ ಒಂದಿಂಚು ರೈತರ ಭೂಮಿಯನ್ನು ವಕ್ಪಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಮೋದಿಯು ಇದಕ್ಕೊಂದು ಇತಿಶ್ರೀ ಹಾಡಿಯಾಗಿದೆ. ಯಾರೂ ಭಯಪಡುವ ಅಗತ್ಯವೇ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮಕ್ಕೆ ಬಿಜೆಪಿ ರಾಜ್ಯ ತಂಡದೊಂದಿಗೆ ಭೇಟಿ ನೀಡಿ, ಗ್ರಾಮಸ್ಥರಿಂದ ಮನವಿ ಪತ್ರಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಹೊನವಾಡ ಗ್ರಾಮದ ಸುಮಾರು 1470 ಎಕರೆ ಸಾಗುವಳಿ ಹೊಲವು ವಕ್ಪಗೆ ಸೇರಿಸಲಾಗಿರುತ್ತದೆ. ಇದನ್ನು ಸರಿಪಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾದ ಮಾಹಿತಿ ನೀಡುತ್ತಿಲ್ಲ, ಇದಕ್ಕೆ ಕಾಂಗ್ರೆಸ್ ಸರಕಾರದ ಕೈವಾಡವಿದೆ, ಮುಸ್ಲಿಂಮರು ಕೂಡ ಸಹೋದರತೆಯಿಂದ ಇರಬೇಕು ಎಂದು ಬಿಜೆಪಿ ಮುಖಂಡ ವಿಜೂಗೌಡ ಪಾಟೀಲ ಹೇಳಿದರು.
ಹಿಂದೂ ಸಮಾಜ ಒಂದಾಗಬೇಕಾಗಿದೆ. ಹಿಂದೂಗಳು ಜಾಗೃತಗೊಳ್ಳಬೇಕಾಗಿದೆ. ಮುಸ್ಲಿಂರು ಹಿಂದೂಗಳ ಭೂಮಿಯನ್ನು ತೆಗೆದುಕೊಳ್ಳುವುದಿಲ್ಲ, ಇದು ಅವರ ಪ್ರಕಾರ ಹರಾಮ್ ಆಗಿದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಹೇಳಿದರು
ಈ ಸಮಯದಲ್ಲಿ ವೇದಿಕೆಯ ಮೇಲೆ ಹುಬ್ಬಳ್ಳಿಯ ಶಾಸಕ ಮಹೇಶ್ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಸಂಜಯ್ ಪಾಟೀಲ ಕನಮಡಿ, ಗುರುಲಿಂಗಪ್ಪ ಅಂಗಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಲ್ಮುರುಡಪ್ಪಾ, ಹಿರಿಯರಾದ ಮಾಳಪ್ಪ ಗುಗ್ಗರಿ, ಲಿಂಗರಾಜ್ ಪಾಟೀಲ, ಚನ್ನಪ್ಪ ಕೋಟಿ, ಆನಂದ ಕೋರಬು, ಗೋವಿಂದ ರಜಪೂತ, ರಾಜಕುಮಾರ ತಿವಾರಿ, ತುಕಾರಾಮ ನಲವಡೆ ಸೇರಿದಂತೆ ಮತ್ತಿತರರು ಇದ್ದರು.

