ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಜೈ ಕರ್ನಾಟಕ ರಕ್ಷಣಾ ವೇದಿಕೆ ಸಭೆಯಲ್ಲಿ ಜೈ ಕರವೇ ತಾಲೂಕ ಅಧ್ಯಕ್ಷ ಅಮರನಾಥ ಸಾಹು ಕುಳಗೇರಿ ಅವರ ನೇತ್ರತ್ವದಲ್ಲಿ ಯಡ್ರಾಮಿ ನಗರ ಘಟಕದ ಅಧ್ಯಕ್ಷರನ್ನಾಗಿ ಕೃಷ್ಣಕುಮಾರ ತಳವಾರ, ನಗರ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಡಿವಾಳ ಮೇಲಿನಮನಿ ಹಾಗೂ ನಗರ ಸಂಚಾಲಕರನ್ನಾಗಿ ಮುತ್ತು ಮುಳ್ಳೋಳ್ಳಿ ಅವರನ್ನು ನೇಮಿಸಿ ಆದೇಶ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅದ್ದೂರಿ ಕನ್ನಡಿಗರ ಸಮಾವೇಶವನ್ನು ತಾಲೂಕಿನಲ್ಲಿ ಐತಿಹಾಸಿಕವಾಗಿ ಆಯೋಜಿಸುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಇದೇ ಸಮಯದಲ್ಲಿ ಶಫೀವುಲ್ಲಾ ದಖನಿ, ಜೈ ಕರವೇ ತಾಲೂಕ ಸಂಚಾಲಕರಾದ ರಾಚೋಟಯ್ಯ ಹೀರೆಮಠ, ಲಾಳೇಸಾಬ ಮನಿಯಾರ, ಜೈ ಕರವೇ ತಾಲೂಕಯುವ ಘಟಕದ ಅಧ್ಯಕ್ಷರಾದ ಪ್ರಭುರಾವ ದೊರೆ ಸುಂಬಡˌಕಾಚಾಪೂರ ಗ್ರಾಮ ಘಟಕದ ಅಧ್ಯಕ್ಷ ಜಗದೀಶ ದ್ಯಾಮ್, ಸಂತೋಷ ಕುಲಕರ್ಣಿ, ಬಸವರಾಜ ಮಾಲಿಪಾಟೀಲ, ಅಕ್ಷಯಕುಮಾರ ಯಡ್ರಾಮಿ ಸೇರಿದಂತೆ ಜೈ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.

