ತಾಳಿಕೋಟಿ: ಮೇ ೧೦ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ನಿಮಿತ್ತ ಸೋಮವಾರ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಗಡಿಸೋಮನಾಳ, ಕ್ಯಾತನಾಳ, ಮೈಲೇಶ್ವರ, ಬಿಳೇಭಾವಿ, ಮಸ್ಕನಾಳ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಪರ ಸಹೋದರ ಸಾಹೇಬಗೌಡ ಪಾಟೀಲ ಅವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ ಅವರು ಮನೆಮನೆಗೆ ತೆರಳಿ ಮತ ಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ ಅವರು, ಶಾಸಕ ಸೋಮನಗೌಡರು ತಮಗೆ ಸಿಕ್ಕ ಈ ೫ ವರ್ಷಗಳ ಅವಧಿಯಲ್ಲಿ ಹಿಂದೆAದೂ ಆಗದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮತಕ್ಷೇತ್ರದ ೧೨೦ ಗ್ರಾಮಗಳಿಗೂ ಅನುದಾನವನ್ನು ಕೊಟ್ಟು ಮೂಲಭೂತ ಸೌಕರ್ಯಗಳನ್ನು ಕೊಡಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಈ ಭಾಗದಲ್ಲಿ ಹಲವಾರು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಅವರೆಂದೂ ರಾಜಕಾರಣ ಮಾಡಿಲ್ಲ. ಮತ್ತೊಮ್ಮೆ ಅವರಿಗೆ ಅವಕಾಶ ನೀಡಿದರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ, ನೀವು ಮತ್ತೊಮ್ಮೆ ಅವರಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.
ಈ ಸಮಯದಲ್ಲಿ ಕಾರ್ಯಕÀರ್ತೆಯರಾದ ಸುನಂದಾ ರಾಮನಗೌಡ ನಾವದಗಿ, ಗುರುಬಾಯಿ ಭೀ. ಹೊಸಮನಿ, ಸುಮಿತ್ರಾ ಸಾಸನೂರ, ಜಯಶ್ರೀ ವಡಗೇರಿ, ನೀಲಮ್ಮ ಪಡೇಕನೂರ, ಬಸಮ್ಮ ವಡವಡಗಿ, ಶಾರದಾ ಬಿರಾದಾರ, ಬಸಮ್ಮ ಮಾದರ, ಕಸ್ತೂರಿಬಾಯಿ ಕಾಚಾಪೂರ, ಚನ್ನಮ್ಮ ಮಾದರ, ಲಲೀತಾ ಮಾದರ, ಗುರುಬಾಯಿ ನಾವದಗಿ, ಪುಟ್ಟಕ್ಕ ಸಾಸನೂರ, ಬಸಮ್ಮ ಮಾದರ, ಮುಖಂಡರಾದ ಪ್ರಶಾಂತ ಹಾವರಗಿ, ಶಂಕರಗೌಡ ದೇಸಾಯಿ, ರಾಜುಗೌಡ ಇಬ್ರಾಹಿಂಪೂರ, ಶೇಖುಗೌಡ ಬಿರಾದಾರ, ಮುತ್ತುಗೌಡ ಮಾಳಿ, ಶರಣಗೌಡ ಅಮಲ್ಯಾಳ, ಶರಣಗೌಡ ಬಿರಾದಾರ, ನಾನಾಗೌಡ ಗೊಟಖಂಡ್ಕಿ, ಮತ್ತಿತರರು ಉಪಸ್ಥಿತರಿದ್ದರು.
Related Posts
Add A Comment