ಕೊಲ್ಹಾರದಲ್ಲಿ ಬಿ.ವೈ.ವಿಜಯೇಂದ್ರ ರೋಡ್ ಶೋ | ಅಪಾರ ಜನಸ್ತೋಮ
ಕೊಲ್ಹಾರ: ವಿಧಾನಸಭಾ ಚುನಾವಣೆ ನಿಮಿತ್ಯವಾಗಿ ಪಟ್ಟಣದಲ್ಲಿ ಸೋಮವಾರ ಭಾರತೀಯ ಜನತಾಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವಾಯ್.ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ನಾಯಕರ ಬೃಹತ್ ಮೆರವಣಿಗೆಯು ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಬಿ.ವಾಯ್.ವಿಜಯೇಂದ್ರ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಎಸ್.ಕೆ.ಬೆಳ್ಳುಬ್ಬಿಯವರನ್ನು ತಾವುಗಳು ಗೆಲ್ಲಿಸಿ ಕಳಿಸಿದ್ದೇ ಆದರೆ ನನ್ನ ತಂದೆ, ನಿಮ್ಮೆಲ್ಲರ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನೇ ಗೆಲ್ಲಿಸಿದಂತಾಗುತ್ತದೆ. ಮೇ ೧೦ರಂದು ನಡೆಯುವ ಮತದಾನದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತಗಳು ದೊರಕುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯನವರು ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡುತ್ತಾ ಲಿಂಗಾಯತ ಧರ್ಮದ ವ್ಯಕ್ತಿಗಳನ್ನು ಹಾಗೂ ನಾಯಕರನ್ನು ಟೀಕೆ ಮಾಡುತ್ತಿರುವದನ್ನು ನಾನು ಖಂಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ವಂಚಿತ ಪರಮಾನಂದ ತನಿಖೆದಾರ ಅವರು ಜೆಡಿಎಸ್ ಪಕ್ಷವನ್ನು ತೊರೆದು ವಿಜಯೆಂದ್ರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡು ಮಾತನಾಡಿ, ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಎಸ್.ಕೆ.ಬೆಳ್ಳುಬ್ಬಿಯವರನ್ನು ೩೦ ಸಾವಿರ ಮತಗಳ ಅಂತರದಿAದ ಗೆಲ್ಲಿಸಿಕೊಂಡು ಬರುತ್ತೇವೆ. ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರವಿಡುವುದೇ ನಮ್ಮೆಲ್ಲರ ಧ್ಯೇಯವಾಗಿದೆ ಎಂದರು.
ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕಳೆದ ೧೦ ವರ್ಷಗಳಿಂದ ಅಧಿಕಾರದಲ್ಲಿರುವ ಶಾಸಕರ ವರ್ತನೆಯಿಂದ ಬೇಸತ್ತಿರುವ ಜನರು ಸಾಗರೋಪಾದಿಯಲ್ಲಿ ತಾವೇ ಖುದ್ದಾಗಿ ಬಂದು ನನ್ನ ಗೆಲುವಿಗಾಗಿ ಹೋರಾಡುತ್ತಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಇಂತಹ ಭರಾಟೆಯನ್ನು ನೋಡಿದರೆ ಬಿಜೆಪಿ ಪಕ್ಷಕ್ಕೆ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಒಂದು ಲಕ್ಷ ಇಪಪತ್ತೆöÊದು ಸಾವಿರ ಮತಗಳು ಬರುವ ನಿರೀಕ್ಷೆಯಿದೆ ಎಂದರು.
ಈ ಸಂರ್ಭದಲ್ಲಿ ಅವಳಿ ಜಿಲ್ಲೆಯ ವಿದಾನ ಪರಿಷತ್ ಸದಸ್ಯ ಪಿ.ಎಸ್.ಪೂಜಾರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೀರಪ್ಪ ಸಾಸನೂರ, ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಚಂದ್ರಶೇಖರಯ್ಯ ಗಣಕುಮಾರ, ವಿನೀತಕುಮಾರ ದೇಸಾಯಿ, ಇಸ್ಮಾಯಿಲಸಾಬ ತಹಶೀಲ್ದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.