ವಿಜಯಪುರ: ನಾಗಠಾಣ ಮೀಸಲು ಮತಕ್ಷೇತ್ರದ ಬಿಜೆಪಿಯ ಟಿಕೆಟ್ ಬಯಸಿ ನಾಮಪತ್ರ ಸಲ್ಲಿಸಿದ್ದೆ, ಆದರೆ ಪಕ್ಷದ ಒಂದಿಬ್ಬರು ನಾಯಕರ ಪ್ರಭಾವದಿಂದ ನನಗೆ ಟಿಕೆಟ್ ಸಿಗಲಿಲ್ಲ, ಆದರೂ ಪಕ್ಷದ ಹಿರಿಯ ನಾಯಕರ ಸಲಹೆಯಂತೆ ಇಂದು ನಾನು ನಾಮಪತ್ರ ವಾಪಸ್ಸು ಪಡೆದು ಪಕ್ಷದ ಅಭ್ಯರ್ಥಿ ಸಂಜೀವ. ಐಹೊಳಿಗೆ ಬೆಂಬಲಿಸುವುದಾಗಿ ಮಹೇಂದ್ರಸಿಂಗ್ ನಾಯಕ ಹೇಳಿದರು.
ಸೋಮವಾರ ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನನಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇತ್ತು. ಆದರೆ ಕಾರಣಾಂತರಗಳಿಂದ ನನಗೆ ಟಿಕೆಟ್ ಸಿಗಲಿಲ್ಲ. ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿದ ನಂತರ ನಡೆದ ಕೆಲವು ಅನಿರೀಕ್ಷಿತ ಬೆಳವಣಿಗೆಗಳ ಕಾರಣದಿಂದ ನಮ್ಮ ಪಕ್ಷದ ಹಿರಿಯರು ಕರೆ ಮಾಡಿ ನನಗೂ ನಾಮಪತ್ರ ಸಲ್ಲಿಸುವಂತೆ ಸೂಚಿಸಿದ್ದರಿಂದ ಸಿ ಫಾರ್ಮ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ವರಿಷ್ಠರ ಸೂಚನೆಯಂತೆ ನಾನು ಏ.20 ರಂದು ನಾಮಪತ್ರ ಸಲ್ಲಿಸಿದ್ದೆ. ಆದರೆ ನಿನ್ನೆ ಪಕ್ಷದ ವರಿಷ್ಠರು ನನಗೆ ಕರೆ ಮಾಡಿ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಪಕ್ಷದ ವರಿಷ್ಠರ ಅಣತಿಯಂತೆ ನಾನು
ಇವತ್ತು ನಾನು ಸಲ್ಲಿಸಿದ ನಾಮಪತ್ರವನ್ನು ಹಿಂದೆ ತೆಗೆದುಕೊಳ್ಳತ್ತಿದ್ದೇನೆ ಎಂದರು.
ಪಕ್ಷ ನನಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ.ನನ್ನ ಮೇಲೆ ನಂಬಿಕೆ ಇಟ್ಟು ಕೊನೆರ ಗಳಿಗೆರವರೆಗೂ ನನ್ನ ಹೆಸರು ಪ್ರಸ್ತಾಪಿಸಿತ್ತು. ಆದರೆ ಪಕ್ಷದಲ್ಲಿರುವ ಇಬ್ಬರು ಪ್ರಭಾವಿ ನಾಯಕರ ಕುತಂತ್ರದಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ನಾಗಠಾಣ ಮತಕ್ಷೇತ್ರದ ಪಕ್ಷದ ಅಭ್ಯರ್ಥಿ ಸಂಜೀವ ಐಹೊಳಿ ಅವರನ್ನು ಹೆಚ್ಚಿನ ಅಂತರದ
ಮತಗಳಿಂದ ಗೆಲ್ಲಿಸಲು ನಾನು ಮತ್ತು ನನ್ನ ಬೆಂಬಲಿಗರು, ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Subscribe to Updates
Get the latest creative news from FooBar about art, design and business.
ನಾಮಪತ್ರ ವಾಪಸು: ಬಿಜೆಪಿ ಅಭ್ಯರ್ಥಿಗೆ ಬೆಂಬಲ :ಮಹೇಂದ್ರಸಿಂಗ್ ನಾಯಕ
Related Posts
Add A Comment