ವಿಜಯಪುರ: ನಗರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಪರವಾಗಿ, ಪುತ್ರ ಹಾಗೂ ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರು, ಭಾನುವಾರ ನಗರ ಮತಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಪಾದಯಾತ್ರೆ ಹಾಗೂ ಸಭೆ ನಡೆಸಿ ಮತಯಾಚನೆ ಮಾಡಿದರು.
ಬೆಳಿಗ್ಗೆ ವಾರ್ಡ್ ನಂ.4ರ ಚಾಲುಕ್ಯ ನಗರ ಪೂರ್ವ ಭಾಗದ ಐಟಿಐ ಕಾಲೇಜು ಬಳಿಯ ಗಾರ್ಡನ್ ದಲ್ಲಿ ವಾಕಿಂಗ್ ಟಿಂ ಭೇಟಿ ಮಾಡಿ ಕೆಲಹೊತ್ತು ಚರ್ಚಿಸಿ, ನಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ.
ಸಂಜೆ ತೊರವಿ ಗ್ರಾಮ ವ್ಯಾಪ್ತಿಯ ನವರಸಪುರ ಕಾಲೊನಿಯ ಸಿದ್ಧಾರ್ಥ ನಗರದ ಉದ್ಯಾನವನದ ಹತ್ತಿರ ಸಭೆ ನಡೆಸಿದ ಬಳಿಕ ಸೇನಾ ನಗರದ ಶಾಲೆ ನಂ.61ರ ಪಕ್ಕದ ಉದ್ಯಾನವನದಲ್ಲಿ ಹಾಗೂ ಬಾಗಲಕೋಟ ಲೇಔಟ್ ಶಿವಾಲಯ ದೇವಸ್ಥಾನ ಹತ್ತಿರ ಸಭೆ ನಡೆಸಿ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಅಭಿವೃದ್ಧಿಗೆ ಜನ ಬೆಂಬಲ ನಿಶ್ಚಿತ ಎಂಬುವುದಕ್ಕೆ ಪ್ರಚಾರಕ್ಕೆ ಆಗಮಿಸಿದಾಗ ಜನ ತೋರಿಸುತ್ತಿರುವ ಅಭೂತಪೂರ್ವ ಬೆಂಬಲವೇ ಸಾಕ್ಷಿ. ಪ್ರತಿ ಕಾಲೊನಿ/ಬಡಾವಣೆಗಳ ಜನರು, ಮೂಲಸೌಕರ್ಯ ಕಲ್ಪಿಸುವ ಜೊತೆಗೆ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟ ಗೌಡರಿಗೆ ನಮ್ಮ ಮತ ಮೀಸಲು ಎಂಬ ಭರವಸೆ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ನಮ್ಮ ತಂದೆ ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಕಾಲೊನಿಗಳ ಹಿರಿಯರು, ಮಹಿಳೆಯರು, ಯುವಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.