ಕಲಕೇರಿ: ಕಳೆದ ೧೦ ವರ್ಷಗಳಿಂದ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಹಗಲು ರಾತ್ರಿ ಎನ್ನದೇ ಪ್ರತಿಯೊಂದು ಮನೆ-ಮನಗಳನ್ನು ಮುಟ್ಟಿರುವ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಅವರಿಗೆ ಮತ ಚಲಾಯಿಸಿ ಅವರನ್ನು ವಿಧಾನಸಭೆಗೆ ಆರಿಸಿ ಕಳಿಸಲು ಜನತೆ ತುದಿಗಾಲಲ್ಲಿ ನಿಂತಿರುವುದನ್ನು ನೋಡಿದರೆ ತುಂಬಾ ಸಂತೋಷ ಆಗುತ್ತಿದೆ ಎಂದು ರಾಜುಗೌಡ ಪಾಟೀಲ ಅವರ ಧರ್ಮಪತ್ನಿಯ ಜಯಶ್ರೀ ಪಾಟೀಲ ಹೇಳಿದರು.
ಕಲಕೇರಿ ಗ್ರಾಮದಲ್ಲಿ ಪತಿಯ ಪರವಾಗಿ ಪ್ರಚಾರ ಮಾಡಲು ಆಗಮಿಸಿರುವ ವೇಳೆ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗ ಬರ್ತಿರಾ, ನಿಮ್ಮ ಜೊತೆಗೆ ಗ್ರಾಮದ ಪ್ರತಿ ಮನೆಮನೆಗೆ ನಾವು ತಿರುಗಾಡುತ್ತೇವೆ. ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಚುನಾವಣೆಯವರಿಗೂ ಸದಾಕಾಲವೂ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಉತ್ಸಾಹದಿಂದ ಮಾತನಾಡುತ್ತಿದ್ದಾರೆ. ಇಂದು ಕಲಕೇರಿ ಗ್ರಾಮದಲ್ಲಿ ಪ್ರಚಾರಕ್ಕೆ ಹೋದಾಗ ಯಾವ ಮಹಿಳೆಯರು ಕೂಡ ಮನೆಯಲ್ಲಿ ಕೂಡದೇ ರಾಜುಗೌಡರೆಂಬ ಶಾಂತಿಧೂತ ದೇವರಹಿಪ್ಪರಗಿ ಕ್ಷೇತ್ರದ ಶಾಸಕರಾಗಲೆಂದು ಹಾರೈಸುತ್ತಿದ್ದಾರೆ ಎಂದರು.
ಈ ವೇಳೆ ಜೆಡಿಎಸ್ ಪಕ್ಷದ ಚಿನ್ಹೆಯಾದ ಭತ್ತದ ಹೊರೆಯನ್ನು ತಲೆಯ ಮೇಲೆ ಹೊತ್ತು ಪ್ರಚಾರಕ್ಕೆ ಮೆರುಗನ್ನು ತಂದರು.
ಸ್ಥಳೀಯ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಹಾಗೂ ಪಂಚರAಗ ಸಂಸ್ಥಾನ ಗದ್ದಗೆಮಠದ ಮಡಿವಾಳೇಶ್ವರ ಶಿವಾಚಾರ್ಯರಿಂದ ಆಶೀರ್ವಾದ ಪಡೆದು ಪ್ರಚಾರ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಡಾ|| ಎಂ ಎಂ ಗುಡ್ನಾಳ, ಆನಂದ ಅಡಕಿ, ಸುನೀಲಗೌಡ ಪಾಟೀಲ, ಯಲಪ್ಪ ಹೊಸಮನಿ, ರಾಜು ಅಡಕಿ, ನಿತ್ಯಾನಂದ ಕತ್ತಿ, ಲಕ್ಷ್ಮಣ ರಾಗೇರಿ, ಮಂಜು ಆಲಗೂರ, ಹಾಜಿಪಾಷಾ ಇನಾಮದಾರ, ಮುನ್ನಾ ಸಿರಸಗಿ, ರಮೇಶ ಹೆಂಡಿ, ಹಣಮಂತ ವಡ್ಡರ, ನವೀನ ಗುಡಗುಂಟಿ, ಶರಣು ಕೌದಿ, ಈರಣ್ಣ ಗುಮಶೆಟ್ಟಿ, ಪ್ರವೀಣ ಜಗಶೆಟ್ಟಿ, ಉಮೇಶ ಹೆಗ್ಗಣದೊಡ್ಡಿ, ಸೇರಿದಂತೆ ಕಲಕೇರಿ ಗ್ರಾಮದ ನೂರಾರು ಅಭಿಮಾನಿಗಳು, ಮಹಿಳೆಯರು ಇದ್ದರು.
Related Posts
Add A Comment