ದೇವರಹಿಪ್ಪರಗಿ: ಶಾಸಕ ಸೋಮನಗೌಡ ಪಾಟೀಲ ಅವರು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊAಡು ಈ ಬಾರಿಯ ಚುನಾವಣೆ ಎದುರಿಸುತ್ತೇವೆ ಎಂದು ಬಿಜೆಪಿ ಧುರೀಣ ಸುರೇಶಗೌಡ ಪಾಟೀಲ ಸಾಸನೂರ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಲಾಗಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಸಿ.ಸಿ ರಸ್ತೆಗಳು, ರೈತರ ಅನುಕೂಲಕ್ಕಾಗಿ ಕಾಲುವೆಗಳ ಮೂಲಕ ಕೆರೆಗಳ ಭರ್ತಿ ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಮಾಡಲಾಗಿದೆ. ಮುಖ್ಯವಾಗಿ ಬಿಜೆಪಿ ಕಾರ್ಯಕರ್ತರು ತಲೆತಗ್ಗಿಸುವ ಯಾವುದೇ ಕಾರ್ಯ ಮಾಡದೇ ತಲೆ ಎತ್ತಿ ಮತ ಕೇಳುವಂತೆ ನಡೆದುಕೊಂಡಿದ್ದೇವೆ. ಈ ಚುನಾವಣೆಯಲ್ಲಿ ೨೦ ಸಾವಿರಕ್ಕೂ ಅಧಿಕ ಮತಗಳಿಂದ ಎರಡನೆಯ ಬಾರಿಗೆ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದರು.
ಉತ್ತರಪ್ರದೇಶದ ಮಾಜಿ ಶಾಸಕ ಆನಂದ ಸ್ವರೂಪ ಶುಕ್ಲಾ, ಬಿಜೆಪಿ ಮುಖಂಡರಾದ ಸುರೇಶಗೌಡ ಪಾಟೀಲ(ಜಿಡ್ಡಿಮನಿ), ಶಂಕರಗೌಡ ಕೋಟಿಖಾನಿ(ಹರನಾಳ), ದಲಿತ ಸುಧಾರಣಾ ಸಮಿತಿ ಅಧ್ಯಕ್ಷ ಕಾಶೀನಾಥ ತಳಕೇರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಮಾತನಾಡಿದರು.
ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ರಾವುತಪ್ಪ ಮೂಲಿಮನಿ(ಮುಳಸಾವಳಗಿ), ಶ್ರೀಮಂತ ತಳವಾರ(ನಿವಾಳಖೇಡ), ರಾಜುಗೌಡ ನಾಡಗೌಡ್ರ, ಸುರೇಶಗೌಡ ನಾಡಗೌಡ್ರ, ಮಂಗಳೇಶ ಕಡ್ಲೇವಾಡ, ರಮೇಶ ಮ್ಯಾಕೇರಿ, ಸೋಮಶೇಖರ ಹಿರೇಮಠ, ರಾವುತ ಅಗಸರ, ರಮೇಶ ಈಳಗೇರ, ಸೋಮನಾಥ ದೇವೂರ, ಮಂಜುನಾಥ ಮಲ್ಲಿಕಾರ್ಜುನಮಠ, ಹುಸೇನ್ ಗೌಂಡಿ, ಈರಣ್ಣ ವಸ್ತçದ ಸೇರಿದಂತೆ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment