ಮುದ್ದೇಬಿಹಾಳ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಸುವ ಮೂಲಕ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಜಾರ್ ನ ದ್ಯಾಮವ್ವನ ಕಟ್ಟೆಗೆ ಮೆರವಣಿಗೆ ಆಗಮಿಸಿದಾಗ ಮುಸ್ಲಿಂ ಬಾಂಧವರು ಸುರಕುರಮಾ ವಿತರಿಸಿ ಸೌಹಾರ್ದತೆಗೆ ಸಾಕ್ಷಿಯಾದರು. ಬಸವೇಶ್ವರ ವೃತ್ತದಲ್ಲಿ ನೂರಾರು ಬಸವಾಭಿಮಾನಿಗಳ ಸಮ್ಮುಖದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಪು.ಮಾಜಿ ಸದಸ್ಯ ಕಾಮರಾಜ ಬಿರಾದಾರ, ಪ್ರಮುಖರಾದ ಜಗದೀಶ ಲಕ್ಷಟ್ಟಿ, ರಾಜು ರಾಯಗೊಂಡ, ಸಂಗಣ್ಣ ಜಿಟಿಸಿ, ರಾಜಶೇಖರ ಮ್ಯಾಗೇರಿ, ಸದಾಶಿವ ಮಠ, ಗೌರಿಶಂಕರ ಪುರಾಣಿಕಮಠ, ಭೋವಿ ಸಮಾಜದ ಮಾಜಿ ಅಧ್ಯಕ್ಷ ಪರಶುರಾಮ ನಾಲತವಾಡ, ಸಿ.ಪಿ.ಸಜ್ಜನ, ಶಂಕರ ಡಮನಾಳ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಬಾಂಧವರು, ಬಸವಾಭಿಮಾನಿಗಳು, ಅಕ್ಕನ ಬಳಗ, ಸಾಧನಾ ಮಹಿಳಾ ಒಕ್ಕೂಟದ ಸದಸ್ಯರು ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment