ಇಂಡಿ: ಮುಸ್ಲಿಂ ಬಾಂಧವರು ಪವಿತ್ರ ಹಬ್ಬ ರಂಜಾನ್ ಹಬ್ಬದ ಅಂಗವಾಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಹಬ್ಬವನ್ನು ಆಚರಿಸಿದರು.
ಶನಿವಾರ ಪಟ್ಟಣದ ಹಂಜಗಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಶಾಕೀರ ಮೌಲಾನಾ ಕಾಸ್ಮಿ ಹಾಗೂ ಮುಕ್ತಿ ಅಬ್ದುಲ್ ರಹಿಮಾನ ಮತ್ತು ಅಂಜುಮನ್ ಮೈದಾನದಲ್ಲಿ ಮೌಲಾನಾ ಝಿಲಾ ಉಲ್ಲ ಹಕ್ ನಮಾಜ ಬೋಧಿಸಿದರು.
ಒಂದು ತಿಂಗಳ ಪರ್ಯಂತ ಉಪವಾಸ ವೃತಾಚರಣೆ ಮಾಡಿ ಇಂದು ಹಬ್ಬದಂದು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಒಬ್ಬರಿಗೊಬ್ಬರು ಶುಭಾಶಯ ಕೋರುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಲಾಯಿತು.
ಈದ್ಗಾ ಮೈದಾನದಲ್ಲಿ ಹಾಲಿ ಶಾಸಕ ಯಶವಂತಗೌಡ ಪಾಟೀಲ, ಜೆಡಿಎಸ್ ನ ಬಿ.ಡಿ. ಪಾಟೀಲ, ಬಿಜೆಪಿಯ ಕಾಸುಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಜಾವೇದ ಮೋಮೀನ್, ಫಯಾಜ ಬಾಗವಾನ, ಜಮೀರ ಬಾಗವಾನ, ಅಂಜುಮನ ಸಂಸ್ಥೆಯ ಅಧ್ಯಕ್ಷ ಅಪಝಲ ಹವಾಲದಾರ, ಮುದಸರ್ ಬಳಗಾನೂರ, ಹಪೀಜ್ ಬಾಷಾ, ಪುರಸಭೆ ಸದಸ್ಯರಾದ ಅಯೂಬ ಬಾಗವಾನ, ಶಬ್ಬೀರ ಖಾಜಿ, ಸದ್ದಾಂ ಅರಬ, ಕೆಆರ್‌ಪಿಪಿ ಯ ಮಹಿಬೂಬ ಅರಬ ಮತ್ತಿತರಿದ್ದರು.
ಅಂಜುಮನ್ ಮೈದಾನದಲ್ಲಿ ಸತ್ತಾರ ಬಾಗವಾನ, ಇಲಿಯಾಸ ಬೊರಾಮಣಿ, ಇಲಿಯಾಸ ಸುರ್ತಿ, ಶಿಕ್ಷಕ ಮಹಿಬೂಬ ಮಾಶ್ಯಾಳಕರ, ಹುಸೇನ ಬೇಪಾರಿ, ಚಾಂದಸಾಬ ಸೌದಾಗರ, ಉಮರಶೇಖ, ಜಬ್ಬಾರ ಅರಬ ಮತ್ತಿತರಿದ್ದರು.