ದೇವರಹಿಪ್ಪರಗಿ: ಪಕ್ಷದ ಕಾರ್ಯಕರ್ತರನ್ನು ಸಮಾನ ಮನಸ್ಸಿನಿಂದ ಕಾಣಲಾಗುವುದು ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಹೇಳಿದರು.
ಪಟ್ಟಣದಲ್ಲಿ ಶನಿವಾರ ಪಕ್ಷದ ಕಾರ್ಯಾಲಯದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೆ ಆದ ಘಟನೆಗಳನ್ನು ಮರೆಯೋಣ. ನಾವೆಲ್ಲ ಒಂದಾಗಿ ಜಯಕ್ಕಾಗಿ ಶ್ರಮಿಸೋಣ. ಪಕ್ಷ ಸೇರ್ಪಡೆಗೊಂಡ ಕಾರ್ಯಕರ್ತರಲ್ಲಿ ಇವರು ಹಳಬರು, ಹೊಸಬರು ಎಂಬ ಭೇಧಭಾವ ಬೇಡ ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣೋಣ ಎಂದರು.
ಪಕ್ಷಕ್ಕೆ ಸೇರದೇ ಬಾಹ್ಯ ಬೆಂಬಲ ನೀಡಿದ ಡಾ.ಆರ್.ಆರ್.ನಾಯಿಕ್, ರಾಜು ಗುತ್ತೇದಾರ ಹಾಗೂ ಪಕ್ಷ ಸೇರ್ಪಡೆಗೊಂಡ ವಿನೋದ ಪಾಟೀಲ, ಶಿವಾನಂದ ಯಾಳಗಿ ಮಾತನಾಡಿ, ಈ ಬಾರಿ ಸೌಮ್ಯ ಸ್ವಭಾವದ ರಾಜುಗೌಡರನ್ನು ಬೆಂಬಲಿಸಿ ಗೆಲ್ಲಿಸೋಣ ಎಲ್ಲರೂ ಕೈಜೋಡಿಸಿ ಎಂದರು.
ನಂತರ ಪಕ್ಷಕ್ಕೆ ಸೇರ್ಪಡೆಗೊಂಡ ಗುರು ಜಡಗೊಂಡ, ಮಹಾಂತೇಶ ವಂದಾಲ, ನಾಗೇಂದ್ರ ಇಂಡಿ, ಮಲ್ಲು ಹಳಿಮನಿ, ರಾಜು ಠಾಕೂರ್, ಸದಾನಂದ ಮಣೂರ, ಸಂಗು ಹಳಿಮನಿ, ಪ್ರಭು ರತ್ನಾಕರ ಸೇರಿದಂತೆ ಹಲವರನ್ನು ಪಕ್ಷದ ಧ್ವಜ ನೀಡಿ ಸ್ವಾಗತಿಸಲಾಯಿತು.
ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ಮುನೀರ್ ಅಹ್ಮದ ಮಳಖೇಡ, ಕಾಶೀಪತಿ ಕುದರಿ, ಜಬ್ಬರ ಮೋಮಿನ್, ರಿಯಾಜ್ ನಾಯ್ಕೋಡಿ, ಕಲ್ಲನಗೌಡ ಪಾಟೀಲ(ಜಿಡ್ಡಿಮನಿ), ಸುಭಾಸ್ ಜಾಧವ, ಬಂದೇನವಾಜ್ ಕತ್ನಳ್ಳಿ, ಉಮೇಶ ಇಂಗಳಗಿ, ಅಜೀತ ರಾಠೋಡ ಇದ್ದರು.