ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮದಲ್ಲಿ ರಂಜಾನ್ ಪ್ರಯುಕ್ತ ಮಲ್ಲಿಕಾರ್ಜುನ ದೇವಸ್ಥಾನ ಕಮೀಟಿ ಪದಾಧಿಕಾರಿಗಳು ಮುಸ್ಲಿಂ ಬಾಂಧವರಿಗೆ ಪ್ರಸಾದ, ತಂಪುಪಾನೀಯ, ಮಜ್ಜಿU,ೆ ಬಾಳೆಹಣ್ಣು ನೀಡಿ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮ ಹಜರತ್ ಮತಾಬ್ ಸಾಹೇಬ್ ದರ್ಗಾ ಉರುಸ್ ಹಾಗೂ ಮಲ್ಲಯ್ಯ ದೇವಸ್ಥಾನ ಐದೇಶಿ ಹಾಗೂ ಜಾತ್ರೆಗೆ ಹೆಸರಾಗಿದ್ದು, ಸೌಹಾರ್ದತೆಗೆ ಮಾದರಿಯಾಗಿದೆ. ಇಲ್ಲಿ ಹಿಂದೂ ಮುಸ್ಲಿಂರೆಲ್ಲರೂ ಸೇರಿ ಹಬ್ಬ ಆಚರಿಸಿರುವುದು ವಿಶೇಷ. ಅಂತೆಯೇ ರಂಜಾನ್ ಹಬ್ಬದ ನಿಮಿತ್ಯ ಗ್ರಾಮದ ಮುಸ್ಲಿಂ ಜನತೆಗೆÉ ಪ್ರಸಾದ ವ್ಯವಸ್ಥೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದರು.
ಕಳೆದ ವಾರವಷ್ಟೆ ಮಲ್ಲಯ್ಯನ ಕಂಬಿ ಹಾಗೂ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮುದಾಯ ಮುಂದೆ ನಿಂತು ಹಿಂದೂ ಜನತೆಗೆ ಪ್ರಸಾದ, ತಂಪುಪಾನೀಯ ವಿತರಿಸಿ ಸಾಮರಸ್ಯಕ್ಕೆ ನಾಂದಿ ಹಾಡಿದ್ದರು. ಇದೇ ದಾರಿಯಲ್ಲಿ ಹಿಂದೂ ಸಮುದಾಯದವರು ರಂಜಾನ್ ಹಬ್ಬದಲ್ಲಿ ಪ್ರಸಾದ ವಿತರಿಸಿ ಒಬ್ಬರಿಗೊಬ್ಬರೂ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಲಕಪ್ಪ ಸುರಗಿಹಳ್ಳಿ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಶರಣಗೌಡ ಪಾಟೀಲ, ಜಿ.ಪಿ.ಬಿರಾದಾರ, ವಿರುಪಾಕ್ಷಿ ರೋಡಗಿ, ಶ್ರೀಶೈಲ ಮಠಪತಿ, ಗುರುಸಂಗ ನಾಗರಳ್ಳಿ, ಶಿವು ಹೊನ್ನಳ್ಳಿ, ಬಂದೇನವಾಜ ಮುಲ್ಲಾ, ಪೈಗಂಬರ ಮುಜಾವರ, ಲಾಲಾಸಾಬ್ ಕೋರಬು, ಆಯೂಬ್ ಮಕಾಂದಾರ್, ಅಲ್ಲಾಭಕ್ಷ ಮಕಾನದಾರ, ದಾವಲಸಾಬ ಗಂಗೂರ, ಜಾವೀದ್ ಮಕಾನದಾರ, ಜಾಕೀರ ಮುಲ್ಲಾ, ಬಸಪ್ಪ ಸಾತಿಹಾಳ, ಸುರೇಶ ಉಕುಮನಾಳ, ಭೀಮರಾಯ ಬಸರಕೋಡ, ಸಿದ್ದು ಹದರಿ, ಶ್ರೀಕಾಂತ ಗಬ್ಬೂರ, ವಿಶ್ವನಾಥ ಸರಬಡಗಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment