ದೇವರಹಿಪ್ಪರಗಿ: ಸಕಲ ಪ್ರಕೃತಿ ಆ ದೇವರು ನಮಗೆ ಕೊಟ್ಟ ಅಮೂಲ್ಯ ಕೊಡುಗೆಗಳಾಗಿವೆ. ಆದ್ದರಿಂದ ನಾವು ದೇವರನ್ನು ಸದಾ ಸ್ಮರಿಸುವುದರ ಮೂಲಕ ಚಿರಋಣಿಯಾಗಿರಬೇಕು. ಎಂದು ಮೌಲಾನಾ ಇಸ್ಮಾಯಿಲ್ ಚಟ್ಟರಕಿ ಹೇಳಿದರು.
ಪಟ್ಟಣದ ಈದಗಾ ಮೈದಾನದಲ್ಲಿ ಶನಿವಾರ ರಮಜಾನ್ ನಿಮಿತ್ಯ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರ ಪ್ರಾಮಾಣಿಕತೆಯಿಂದ ಸಾಗಬೇಕು. ಪ್ರತಿಯೊಂದು ಧರ್ಮದ ಸಾರವು ಒಂದೇ ಆಗಿದ್ದು, ಇಡೀ ಜಗತ್ತು ದೇವರು ನೀಡಿದ ಕೊಡುಗೆಯಾಗಿದೆ . ಈ ಕೊಡುಗೆಯನ್ನು ಸ್ಮರಣೆ ಮಾಡುವುದರ ಜೊತೆ ನಮ್ಮ ಕಾಯಕದೊಂದಿಗೆ ದೇವರ ಧ್ಯಾನ ಮಾಡಲು ಆ ದೇವರೇ ಸದಾವಕಾಶ ಕಲ್ಪಿಸಿಕೊಟ್ಟಿದ್ದಾನೆ. ಅದುವೇ ಪವಿತ್ರ ರಮಜಾನ್ ಮಾಸ. ಈ ಪವಿತ್ರ ಮಾಸವನ್ನು ಉತ್ತಮ ರೀತಿಯಲ್ಲಿ ಆಚರಿಸಿ ಪಾವನರಾಗಬೇಕಾಗಿದೆ ಎಂದರು.
ಪಟ್ಟಣದ ಸಮಸ್ತ ಮುಸ್ಲಿಂ ಸಮುದಾಯ ಈದಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಪರಸ್ಪರ ಆಲಂಗಿಸಿಕೊAಡು ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯನ್ನು ಮೌಲ್ವಿ ಇಸ್ಮಾಯಿಲ್‌ಸಾಬ್ ಲಾಳಸಂಗಿ ನಡೆಸಿಕೊಟ್ಟರು.
ಪ್ರಾರ್ಥನೆಯಲ್ಲಿ ಮೌಲಾನಾ ರಫೀಕ್ ಪಾನಪರೋಷ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ ಯಲಗಾರ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹಿಬೂಬ್ ಮನಿಯಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ, ನಜೀರ್ ಕಲಕೇರಿ, ಅಬ್ದುಲ್ ಜಬ್ಬಾರ ಮೊಮೀನ, ಹಸನ್ ವಡ್ಡೋಡಗಿ, ಅಮೀರಹಮ್ಜಾನ ಚೌಧರಿ, ಎ.ಡಿ. ಮುಲ್ಲಾ, ಮಹಮ್ಮದ್ ರಫೀಕ ಮೊಮೀನ, ರಿಯಾಜ ನಾಯ್ಕೋಡಿ, ಲಾಲಾಸಾಬ್ ಮಳಖೇಡ, ಅಬುಬ್ಕರ್ ಕಲಕೇರಿ, ಮುರ್ತುಜಾ ತಾಂಬೋಳಿ, ಅಯಾಜ ತಾಂಬೋಳಿ, ಅಕ್ಬರ ಬಾಗವಾನ, ಡಾ.ಜಿಲಾನಿ ಆಳಂದ, ರಶೀದ್ ಚೌಧರಿ, ಅಬ್ದುಲ್ ಅಜೀಜ ಹಿಪ್ಪರಗಿ, ಇಮ್ತಿಯಾಜ್ ಮುಲ್ಲಾ, ಅಮೀನಸಾಬ್ ಹಾದಿಮನಿ, ದಾವಲ್‌ಸಾಬ್ ಯರಗಲ್, ಲಾಡ್ಲೇ ಮಶಾಕ್ ರೂಗಿ, ಹಸನ್ ನದಾಫ್ ಇದ್ದರು.
Related Posts
Add A Comment