ದೇವರಹಿಪ್ಪರಗಿ: ಮತಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಈ ಸಲ ಬಹುಮತದಿಂದ ಗೆಲುವು ಸಾಧಿಸುವುದರ ಜೊತೆಗೆ ಪದಾಧಿಕಾರಿಗಳು ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತೇನೆ. ಪ್ರತಿಯೊಬ್ಬರೂ ಮತ ನೀಡಿ ಬೆಂಬಲಿಸಿ ಆಶೀರ್ವಾದ ಮಾಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಮನವಿ ಮಾಡಿದರು.
ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ಸಾತಿಹಾಳ, ಬೈರವಾಡಗಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಂಚರಿಸಿ ಕಾಂಗ್ರೆಸ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ನಮ್ಮ ಕಾರ್ಯಕರ್ತರು ರೋಸಿ ಹೋಗಿದ್ದಾರೆ. ರಾಜ್ಯ ಸರಕಾರದ ಮಂತ್ರಿಗಳು ೪೦% ಕಮೀಷನ್ ಪಡೆದು ರಾಜ್ಯದ ಬೊಕ್ಕಸವನ್ನೆಲ್ಲ ಕೊಳ್ಳೆ ಹೊಡೆದಿದ್ದಾರೆ. ಬಿಜೆಪಿಯ ಅಧಿಕಾರ ದಾಹ ದುರಾಡಳಿತ, ನಿರುಪಯುಕ್ತ ಯೋಜನೆಗಳು, ಸಾಮಾಜಿಕ ಸಾಮರಸ್ಯವಿಲ್ಲದಿರುವುದು ಸರಕಾರಿ ಯೋಜನೆಗಳ ದುರುಪಯೋಗ ಇವುಗಳಿಂದ ಬೇಸತ್ತು ಹೋಗಿದ್ದಾರೆ. ಅದಕ್ಕಾಗಿ ಜನಪರ ಕಾಳಜಿ ಇರುವ ಕಾಂಗ್ರೆಸ್ ಸರಕಾರ ಬಯಸುತ್ತಿದ್ದು, ಸ್ವಯಂಪ್ರೇರಿತರಾಗಿ ನಮ್ಮ ಪರ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಯೊಂದು ಗ್ರಾಮಗಳಲ್ಲಿ ನೂರಾರು ಜನ ಸೇರುವುದು ಸಾಕ್ಷಿಯಾಗಿದೆ. ಈ ಬಾರಿ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲುವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿದರು.
ಯಾಳವಾರ, ಜಯವಾಡಗಿ, ರೆಬಿನಾಳ, ದಿಂಡವಾರ, ಸಾತಿಹಾಳ, ಮಣೂರ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮನೆ ಮನೆಗೆ ಭೇಟಿ ನೀಡಿ ರೋಡಶೋ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮನಾಥ ಕಳ್ಳಿಮನಿ, ಸಂತೋಷಗೌಡ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರಅಹಮ್ಮದ ಬೇಪಾರಿ, ಬಾಳಾಸಾಹೇಬಗೌಡ ಪಾಟೀಲ ಸಾತಿಹಾಳ, ರಮೀಜಾ ನದಾಫ, ಸರಿತಾ ನಾಯಕ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment