ಚಡಚಣ: ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಕೊಡುಗೆಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ, ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.
ತಾಲೂಕಿನ ಏಳಗಿ ಪಿ ಎಚ್ ಗ್ರಾಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಸಮ್ಮಿಶ್ರ ಸರಕಾರದ ಸಮಯದಲ್ಲಿ ಮತಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ತಂದಿರುವ ಸಾವಿರಾರು ಕೋಟಿ ಅನುದಾನವನ್ನು ನಂತರ ಆಗಮಿಸಿದ ಬಿಜೆಪಿ ಸರಕಾರದ ಸಚಿವರು ಅನುದಾನವನ್ನು ಹಿಂಪಡೆದಿರುವುದನ್ನು ಮತಕ್ಷೇತ್ರದ ಜನ ಮರೆತಿಲ್ಲ. ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದಲ್ಲದೆ ನನ್ನ ಮಾನಸಿಕ ನೆಮ್ಮದಿ ಹಾಳುಮಾಡಿದ್ದಾರೆ. ಇದೆಲ್ಲವನ್ನು ಅರಿತ ಮತಕ್ಷೇತ್ರದ ಜನ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ
ಸುಭಾಷಗೌಡ ಪಾಟೀಲ್, ಅಮಸಿದ್ದ ವಾಬಳೆ, ಬಸವರಾಜ ಪೂಜಾರಿ, ಅಪ್ಪಣ್ಣ ಪೂಜಾರಿ, ಪ್ರಭಾಕರ ಗುಮತೆ, ಶ್ರೀ.ಸಾತಣ್ಣ ವಾಲಿ, ಜಗನ್ನಾಥ ಗೌಡ ಬಿರಾದಾರ, ದಯಾನಂದ ಕಸಮೋಳೆ, ಸಂಗಪ್ಪ ಸುಸಲಾಧಿ, ಬಸವರಾಜ ವಾಲಿಕಾರ, ಲಕ್ಷ್ಮಿ ಕಾಂತ, ವಿಕಾಸ ಗೌಡ ಬಿರಾದಾರ ಕಾರ್ಯಕರ್ತರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Related Posts
Add A Comment