ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶನಿವಾರ ಮುಸ್ಲಿಂ ಬಾಂಧವರು ಈದ್‌ಉಲ್ ಫಿತ್ರ ಹಬ್ಬವನ್ನು (ರಂಜಾನ್) ಸಡಗರ,ಸಂಭ್ರಮದಿಂದ ಆಚರಿಸಿದರು. ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೊಸ ಬಟ್ಟೆ ತೊಟ್ಟು ಬೆಳಗ್ಗೆ ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಜಾಮೀಯಾ ಮಸೀದಿಯ ಹಾಫೀಜ್ ಮಹ್ಮದಅಲಿ ಮಿಲಿ ಮಾತನಾಡಿ, ರಂಜಾನ ತಿಂಗಳಲ್ಲಿ ಒಂದು ತಿಂಗಳ ಕಾಲ ನಮ್ಮ ಬಾಂಧವರು ಉಪವಾಸ ಇರುವದು ಒಂದು ತರಬೇತಿಯಿದ್ದಂತೆ ಈ ಅವಽಯಲ್ಲಿ ತಮ್ಮ ಆತ್ಮವನ್ನು ಶುದ್ಧಿ ಮಾಡಿಕೊಂಡಂತೆ ಉಳಿದ ಅವಽಯಲ್ಲಿ ಇದೇ ಮನಸ್ಥಿತಿಯಲ್ಲಿ ಇದ್ದು ಎಲ್ಲ ಬಾಂಧವರು ಉತ್ತಮ ಜೀವನ ನಡೆಸುವಂತಾಗಬೇಕು. ದೀನ-ದಲಿತ ಬಡವರ ನಿರ್ಗತಿಕರ, ನಿರಾಶ್ರಿತರ, ವಿಧವೆಯರ ಸ್ಥಿತಿಗತಿ ಅರಿತು ಅವರಿಗೆ ಸಹಾಯಧನ ನೀಡಬೇಕು. ದೇಶದಲ್ಲಿ ಹಬ್ಬದ ಆಚರಣೆ ಎಲ್ಲ ಧರ್ಮದಂತೆ ಆಚರಣೆ ಮಾಡಬೇಕು. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಸೌಹಾರ್ದ, ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಬೇಕು. ಎಲ್ಲರೂ ಸಂತಸದ ಜೀವನ ತಮ್ಮದಾಗಿಸಿಕೊಳ್ಳಬೇಕೆಂದರು.
ಎಂ.ಡಿ.ಬಳಗಾನೂರ, ಅಲ್ತಾಫ್ ಮುದ್ದೇಬಿಹಾಳ ಮಾತನಾಡಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಶಬ್ಬಿರಅಹ್ಮದ ನದಾಫ್, ಕಮಲಸಾಬ ಕೊರಬು, ರಿಯಾಜ ಕೆರೂರ, ರಮಜಾನ ಹೆಬ್ಬಾಳ, ಜಾಕೀರ ನದಾಫ್, ಚಾಂದಭಾಷಾ ಕೊರಬು, ಸಲೀಂ ಸೈಯದ್, ಮೀರಾಸಾಬ ಕೊರಬು, ರಫೀಕ್ ಹೊಕ್ರಾಣಿ, ದಸ್ತಗೀರಸಾಬ ಮುಲ್ಲಾ, ಲಾಲಸಾಬ ಜಮಖಾನಿ, ಅಲ್ಲಾಭಕ್ಷ ಕೊರಬು, ಎಚ್.ಆರ್.ಬಾಗವಾನ, ಶಬ್ಬೀರ ನದಾಫ್, ಅಬ್ದುಲರಜಾಕ ಬಾಗವಾನ, ಅಬ್ದುಲ್ ಕೊರಬು, ರಹಿಮಾನ ಕೊರಬು, ನಜೀರ ಗಣಿ, ನಿಸಾರ ಚೌಧರಿ, ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment