ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ಶನಿವಾರ ರಂಜಾನ ಹಬ್ಬದ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಶುಕ್ರವಾರ ಮಾರುಕಟ್ಟೆಯಲ್ಲಿ ಮುಸ್ಲಿಂ ಬಾಂಧವರ ಖರೀದಿ ಭರಾಟೆ ಜೋರಾಗಿತ್ತು.
ಪಟ್ಟಣದ ಬಹುತೇಕ ಕಿರಾಣಿ ಅಂಗಡಿಗಳ ಮುಂದೆ, ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು.
ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿರುವ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ-ಮುಂಗಟ್ಟುಗಳು ತುಂಬಿ ಹೋಗಿದ್ದು. ಖರೀದಿ ಭರಾಟೆ ಜೋರಾಗಿದೆ. ಸಂಪ್ರದಾಯದಂತೆ ಪವಿತ್ರ ಹಬ್ಬ ಇದಾಗಿರುವದರಿಂದಾಗಿ ಮುಸ್ಲಿಂ ಬಾಂಧವರು ಪ್ರತಿಯೊಬ್ಬರು ದಾನ, ಧರ್ಮ ಮಾಡುವುದರ ಜೊತೆಗೆ ಹೊಸ ಬಟ್ಟೆಗಳ ಖರೀದಿಗೆ ಮುಂದಾಗುವುದು ಸಹಜ. ಪಟ್ಟಣದ ಪ್ರಮುಖ ಅಂಗಡಿಗಳಲ್ಲಿ ಬಟ್ಟೆ ಖರೀದಿ ಹೆಚ್ಚಾಗಿರುವುದು ಕಂಡುಬಂದಿತ್ತು. ಮಹಿಳೆಯರು, ಮಕ್ಕಳು, ಯುವಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯ ಮೊರೆ ಹೋಗಿದ್ದಾರೆ. ತಾಲೂಕಿನ ಕೆಲವೆಡೆಗಳಿಂದ ಹೆಚ್ಚಿನ ಜನರು ಬಂದಿದ್ದರಿಂದಾಗಿ ಜನಸಂದಣಿ ಹೆಚ್ಚಿತ್ತು. ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಮಹಿಳೆಯರು ತಮಗೆ ಬೇಕಾದ ಬಳೆ, ರಿಬ್ಬನ್ ಇತ್ಯಾದಿ ಖರೀದಿ ಮಾಡಿದರು. ಬಟ್ಟೆಗಳನ್ನು ಖರೀದಿಸುವ ಜೊತೆಗೆ ಚಪ್ಪಲಿ ಮತ್ತಿತರ ದಿನಬಳಕೆ ವಸ್ತುಗಳನ್ನು ಖರೀಧಿಸುವುದು ಸಾಮಾನ್ಯವಾಗಿತ್ತು.
ರಂಜಾನ ಹಬ್ಬದಲ್ಲಿ ತಯಾರಿಸುವ ಸುರಕಮ್ ತಯಾರಿಸಲು ಬೇಕಾದ ಡ್ರೈಪುಡ್ಸ್ , ಹಣ್ಣು ಖರೀದಿ ಭರಾಟೆಯು ಜೋರಾಗಿತ್ತು. ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಒಂದು ತಿಂಗಳ ಕಾಲ ಉಪವಾಸ ಇದ್ದು, ಒಂದು ತಿಂಗಳ ಕಾಲ ಉಪವಾಸ ಬಿಡುವ ಪವಿತ್ರ ಹಬ್ಬ ಇದಾಗಿದೆ.
ನಮ್ಮ ಬಾಂಧವರಿಗೆ ರಂಜಾನ್ ಹಬ್ಬ ಬಹಳ ಪವಿತ್ರ ಹಬ್ಬವಾಗಿದೆ. ರಂಜಾನ್ ಹಬ್ಬದಂಗವಾಗಿ ಒಂದು ತಿಂಗಳ ಕಾಲ ರೋಜಾ ಮಾಡುವ ಮೂಲಕ ಭಗವಂತನಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ರೋಜಾ ಕೊನೆಯ ದಿನ ರಂಜಾನ ಹಬ್ಬವನ್ನು ಆಚರಿಸುವ ಮೂಲಕ ಉಪವಾಸ ಮುಕ್ತಾಯಗೊಳಿಸಲಾಗುವುದು. ಇಂದು ಸೌದಿ ಅರೇಬಿಯಾದಲ್ಲಿ ರಂಜಾನ್ ಹಬ್ಬ ಆಚರಣೆಯಾಗಿದೆ. ನಾಳೆ ಶನಿವಾರ ಎಲ್ಲೆಡೆ ರಂಜಾನ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಖರೀದಿಗೆ ಆಗಮಿಸಿದ್ದ ಬಂದೇನವಾಜ ವಾಲೀಕಾರ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment