ಮುದ್ದೇಬಿಹಾಳ: ಬಡವರ, ರೈತರ, ಹಿಂದುಳಿದವರ, ದೀನ ದಲಿತರ ಪಾಲಿನ ಬೆಳಕಾಗಿರುವ ಜೆಡಿಎಸ್ ಪಕ್ಷ ಈ ಬಾರಿ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದು ವಿಜಯಶಾಲಿಯಾಗಲಿದೆ ಎಂದು ಅಭ್ಯರ್ಥಿ ಬಸವರಾಜ ಭಜಂತ್ರಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಎದುರು ತಮ್ಮ ಬೆಂಬಲಿಗರೊAದಿಗೆ ನಾಮಪತ್ರ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ಈ ಬಾರಿಯ ಅಧಿಕಾರದ ಚುಕ್ಕಾಣಿ ಹಿಡಿಯುವ ದಿನಗಳು ಬಹಳÀ ದೂರ ಇಲ್ಲ. ಮುದ್ದೇಬಿಹಾಳ ಮತಕ್ಷೇತ್ರ ಸಾಮಾನ್ಯ ಮತಕ್ಷೇತ್ರವಾಗಿದ್ದು ಇಲ್ಲಿ ಕುಮಾರಸ್ವಾಮಿಯವರು ಹಿಂದುಳಿದ ವರ್ಗದವನಾದ ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿದ್ದು ಅಪಾರ ಅಭಿಮಾನಿಗಳಿಗೆ ಸಂತಸ ತಂದಿದೆ. ಮತಕ್ಷೇತ್ರದ ಜನತೆ ನನ್ನನ್ನು ನಿಮ್ಮ ಮಗನೆಂದು ಭಾವಿಸಿ ಅಮೂಲ್ಯ ಮತಗಳನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು ಎಂದರು.
ತಾಲೂಕು ಅಧ್ಯಕ್ಷ ಪವಾಡೆಪ್ಪ ಹವಾಲ್ದಾರ ಮಾತನಾಡಿ, ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು.
ಪ್ರಮುಖರಾದ ಅರವಿಂದ ಕಾಶಿನಕುಂಟಿ, ಸಂತೋಷ ಶಿವಯೋಗಿಮಠ, ಬುಡ್ಡಾ ನಾಯ್ಕೋಡಿ, ನೂರ ಅಹಮ್ಮದ ಹಡಗಲಿ, ಶಿವು ಹೊಸಮನಿ, ಗುರು ಹಿರೇಮಠ, ರಾಜುಗೌಡ ಲಿಂಗದಳ್ಳಿ, ಶರಣಗೌಡ ಬಿರಾದಾರ, ಹರ್ಷದ ಮೋಮಿನ, ಜಲಾಲ್ ಮುದ್ನಾಳ, ಅಬ್ದುಲ್ ಮಜೀದ್ ಶಿರೋಳ ಸೇರಿದಂತೆ ಮತ್ತಿತರರು ಇದ್ದರು.
ಮುದ್ದೇಬಿಹಾಳ: ಜೆಡಿಎಸ್ ಅಭ್ಯರ್ಥಿ ಬಸವರಾಜ ಭಜಂತ್ರಿ ನಾಮಪತ್ರ ಸಲ್ಲಿಕೆ
Related Posts
Add A Comment