ಇಂಡಿ: ಬರುವ ಮೇ ೧೦ ರಂದು ನಡೆಯುವ ಇಂಡಿ ವಿಧಾನಸಭಾ ಮತಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಅಭ್ಯರ್ಥಿ ಮಹಿಬೂಬ ಅರಬ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಮಹಿಬೂಬ ಅರಬ, ಪಕ್ಷದ ನೇತಾರ ಜನಾರ್ಧನ ರೆಡ್ಡಿಯವರು ಯುವಕರಿಗೆ ಅನುಕೂಲವಾಗುವ ಉದ್ಯೋಗ ದೊರಕಿಸಿಕೊಡುವ ಪ್ರಣಾಳಿಕೆ ಮಾಡಿದ್ದು, ಅವರ ಕೈ ಬಲಪಡಿಸಲು ಯುವಕರು ಮುಂದಾಗಬೇಕೆಂದು ಕೇಳಿಕೊಂಡರು.
ಮಿನಿ ವಿಧಾನಸೌಧದಲ್ಲಿ ಚುನಾವಣೆ ಅಧಿಕಾರಿ ರಾಮಚಂದ್ರ ಗಡದೆ ಇವರಿಗೆ ನಾಮಪತ್ರ ಸಲ್ಲಿಸಿದರು.
ಅಲ್ತಾಫ ಹುಸೇನ ಅಳ್ಳಗಿ, ತೌಶೀಫ್ ಶೇಖ, ನಿಸಾರ ಶೇಖ, ತೌಷಿಫ ರಿಸಾಲದಾರ, ಶಬ್ಬೀರ ಡಾಂಗೆ, ಪಪ್ಪು ಮೋಮೀನ, ಪ್ರೇಮಾ ಸಿಂಘೆ, ಯಶವಂತ ಪಾರಸಿ,
ಮಹಮ್ಮದ ಫಾರುಕಿ ಬೋರಾಮಣಿ, ಅಜರುದ್ದೀನ ಮಕಾನದಾರ, ಮುಸ್ತಾಕ ನಾಗೂರ, ಮಹಮ್ಮದ ರಫೀಕ ದಡೇದ, ಮಹಮ್ಮದ ಹುಸೇವ ಚುನ್ನೆವಾಲೆ, ಜಾಕೀರ ಅರಬ, ಅಬುಬಕರ ಶೇಖ ಮತ್ತಿತರಿದ್ದರು.
Related Posts
Add A Comment