ವಿಜಯಪುರ: ನಗರದಲ್ಲಿ ಹಲವು ವರ್ಷಗಳಿಂದ ಅಭಿವೃದ್ಧಿ ಮಾಡದೇ ಉಳಿದುಕೊಂಡಿದ್ದ ಸಮಸ್ಯೆಗಳಿಗೆ ಐದು ವರ್ಷದಲ್ಲಿ ಪರಿಹಾರ ಕೊಡಿಸಲು ಶ್ರಮಿಸಿರುವ ತಂದೆಯವರಿಗೆ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.
ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ಲಿಂಗೇಶ್ವರ ಕಾಲೊನಿ, ಮಂಜುನಾಥ ನಗರ, ಕರ್ಪೂರಮಠ ಕಾಲೊನಿಗಳಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಪರವಾಗಿ ಮತಯಾಚನೆ ನಡೆಸಿ ಅವರು ಮಾತನಾಡಿದರು.
ನಗರದ ಪ್ರತಿಯೊಂದು ಆಂತರಿಕ ಹಾಗೂ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನೂರಾರು ಕಡೆಗೆ ಬೆಳಕಿಗಾಗಿ ಹೈಮಾಸ್ಕ್ ಅಳವಡಿಸಲಾಗಿದೆ. ಉದ್ಯಾನಗಳ ಅಭಿವೃದ್ಧಿ, ಓಪನ್ ಜಿಮ್, ಚಿಲ್ಡ್ರನ್ ಪಾರ್ಕ ಗಳನ್ನು ಮಾಡಲಾಗಿದೆ. ಇಲಾಖೆ ಹಾಗೂ ಸಿದ್ದಸಿರಿ ಸಂಸ್ಥೆ ಯಿಂದಲೂ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಕಸ ವಿಲೇವಾರಿಗಾಗಿ ಹೊಸ ವಾಹನಗಳ ಖರೀದಿ ಮಾಡಲಾಗಿದ್ದು, ಇದರಿಂದ ನಗರದ ನೋಟ ಅಂದಗೊಳ್ಳುವ ಜೊತೆಗೆ ಜನರು ಸಮಸ್ಯೆಯಿಂದ ಮುಕ್ತವಾಗಿದ್ದಾರೆ ಎಂದು ತಿಳಿಸಿದರು.
ಔದ್ಯೋಗಿಕ ನಗರವನ್ನಾಗಿ ಮಾಡುವ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಹೇಳಿದರು.
ಮುಖಂಡರಾದ ಆನಂದ ಹುಲಿಮನಿ, ಸಾಯಿಬಣ್ಣ ಭೋವಿ, ಪ್ರಶಾಂತ ಬಡಿಗೇರ, ರಾಹುಲ ಔರಂಗಬಾದ, ಪ್ರವೀಣ ಕಾಮಗೊಂಡ, ಸಂತೋಷ ಕೌಟೀಕರ, ವಿನಾಯಕ ಶಾಹಪೂರ, ಶ್ರೀಶೈಲ ಗಬಸಾವಳಗಿ, ಬಿ.ಎಸ್.ಶೆಟ್ಟಿ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಕಾಲೊನಿಯ ನಿವಾಸಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment