ಜಿಗಜೀವಣಗಿ: ನಿಮ್ಮ ಗ್ರಾಮಕ್ಕೆ ಅನ್ಯಾಯ ಮಾಡಿದವರೇ ನಿಮ್ಮ ಮತ ಕೇಳಲು ಬರುತ್ತಾರೆ ಎಚ್ಚರವಾಗಿರಿ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಹೇಳಿದರು.
ಗುರುವಾರ ಇಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಗ್ರಾಮದ ದೊಡ್ಡ ಕೆರೆಯನ್ನು ತುಂಬಲು ಟೆಂಡರ್ ಕರೆಯದೇ ಅನ್ಯಾಯ ಮಾಡಿದರು. ಕಾರಜೋಳರು ನೀರಾವರಿ ಸಚಿವರಾಗಿಯೂ ಇದನ್ನು ಮಾಡದೇ ಯಾವ ಮುಖ ಇಟ್ಟುಕೊಂಡು ತಮ್ಮ ಮಗನಿಗೆ ಚುನಾವಣೆಗೆ ನಿಲ್ಲಿಸಲು ಹೊರಟಿದ್ದರೋ ಗೊತ್ತಿಲ್ಲ. ನಿಮ್ಮ ಮಕ್ಕಳಿಗೆ ಉದ್ಯೋಗ ಸೃಷ್ಟಿಯಾದರೆ ತೀರಿ ಹೋಗಿರುವ ನನ್ನ ಮಕ್ಕಳಿಗೆ ಸಿಕ್ಕಂತೆ. ನಾನು ಜೀವನದಲ್ಲಿ ಬಹಳ ಕಳೆದುಕೊಂಡಿದ್ದೇನೆ. ಕ್ಷೇತ್ರ ಮತ್ತು ಮತದಾರರೇ ನನ್ನ ಬದುಕಿನ ಜೀವ. ನಿಮ್ಮ ಅಭಿವೃದ್ಧಿಗಾಗಿ ನನಗೆ ಮತ ನೀಡಿ ಎಂದು ವಿನಂತಿಸಿದರು.
ಮುಖಂಡ ಎಂ.ಆರ್. ಪಾಟೀಲ ಮಾತನಾಡಿ, ಕಟಕದೊಂಡರಿಗೆ ಯಾವುದೇ ಆಸೆ ಇಲ್ಲ. ಇದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡು ಅನಾಥರಾಗಿರುವ ಅವರು ತುಂಬ ನೋವಲ್ಲಿದ್ದಾರೆ. ಆ ನೋವು ಮರೆಯಲು ಅವರಿಗೆ ನೀವು ಮತ ಹಾಕಿದರೆ ಶಾಸಕರಾಗಿ ನಿರಂತರವಾಗಿ ಕೆಲಸ ಮಾಡಿ ತಮ್ಮ ಋಣ ತೀರಿಸಿ ನೆಮ್ಮದಿ ಹೊಂದಲಿದ್ದಾರೆ ಎಂದರು.
ಮುಖಂಡರಾದ ಸುರೇಶಗೌಡ ಪಾಟೀಲ, ಆರ್.ಡಿ.ಹಕ್ಕೆ, ಸುರೇಶ ಗೊಣಸಗಿ, ಶಹಜಾನ್ ಮುಲ್ಲಾ, ಸಾಹೇಬಗೌಡ ಬಿರಾದಾರ, ಬಸು ಹತ್ತಳ್ಳಿ, ಕಾಮೇಶ ಪಾಟೀಲ, ಜಿ.ಎಸ್.ಪವಾರ್, ಸಾಮಾಜಿಕ ತಾಣದ ಪ್ರಕಾಶಗೌಡ ಪಾಟೀಲ, ಸಂತೋಷ ಪಾಟೀಲ, ಪ್ರಸಾದ ಚವ್ಹಾಣ, ಕೃಷ್ಣಾ ಕಾಮಟೆ, ರಾಜು ಸಿಂಘೆ, ಮಲ್ಲು ಜತ್ತಿ, ಮಲ್ಲು ಬನಸೋಡೆ, ಮಲಕಣ್ಣ ಕೋಳಿ, ರಾಮನಗೌಡ ಬಿರಾದಾರ ಇದ್ದರು.
ಗ್ರಾಮದ ಹಿರಿಯರಾದ ಹಣಮಂತ ಬಳಗಾನೂರ, ಗ್ರಾಪಂ ಸದಸ್ಯ ವಿಠ್ಠಲಗೌಡ ಬಿರಾದಾರ, ಮಲಕನಗೌಡ ಪಾಟೀಲ, ಅಶೋಕ ಬಳ್ಳೊಳ್ಳಿ, ಅಂಕಲಗಿ ಮುತ್ಯಾ, ದುಂಡಪ್ಪ ಕೋಳಿ, ಮಹಾಂತೇಶ ಗುಡ್ಡದ, ರೇವಣಸಿದ್ಧ, ಪರುಶರಾಮ ಕನಮಡಿ, ಶ್ರೀಮಂತ ನಿಂಬೋಣಿ, ಅಮಸಿದ್ಧ ಬಿರಾದಾರ, ಸುಭಾಶ ಮೋರೆ, ಮಲ್ಲಿಕಾರ್ಜುನ ಮೊಳಕೆ, ನಾಗೇಶ ಬನಪೊರೆ ಅನೇಕರಿದ್ದರು.
ಸೇರ್ಪಡೆ: ಇದೇ ಸಂದರ್ಭದಲ್ಲಿ ಜೆಡಿಎಸ್ ತೊರೆದ ಶ್ರೀಶೈಲ ಜವಳಗಿ, ರಮೇಶ, ಶಿವಾಜಿ ಸುರ್ವೆ, ಚನ್ನಬಸಪ್ಪ ಝಳಕಿ, ನೇತಾಜಿ ಸುರ್ವೆ, ಹಣಮಂತ ಝಳಕಿ, ಭೀಮಣ್ಣ ಕುಂಬಾರ, ಮಲ್ಲಿಕಾರ್ಜುನ ಬಿರಾದಾರ, ಮಾದಣ್ಣ ಬಿರಾದಾರ, ಮಧು ನರಸಂಬಿ ಕಾಂಗ್ರೆಸ್ ಪಕ್ಷ ಸೇರಿದರು.
Subscribe to Updates
Get the latest creative news from FooBar about art, design and business.
ಜಿಗಜೀವಣಿಗಿಗೆ ಎಲ್ಲ ಪಕ್ಷಗಳಿಂದ ಅನ್ಯಾಯ; ಇದನ್ನು ಸರಿದೂಗಿಸಲು ಬದ್ಧ :ಕಟಕದೊಂಡ
Related Posts
Add A Comment