ಕೊನೆಯ ಘಳಿಗೆಯಲ್ಲಿ ತಪ್ಪಿದ ಟಿಕೆಟ್ | ಸ್ವಾಮೀಜಿ ಒತ್ತಡ | ಕುಮಾರಸ್ವಾಮಿಯವರಿಂದ ಅನ್ಯಾಯ
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಶೂನ್ಯದಿಂದ ಸಂಘಟನೆ ಮಾಡಿ ಇಂದು ಗೆಲ್ಲುವ ಹಂತಕ್ಕೆ ತಂದು ನಿಲ್ಲಿಸಿದ ನನಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷದ ಬಿಫಾರಂ ತಪ್ಪಿಸಿ ಅವಕಾಶವಾದ ರಾಜಕಾರಣ ಮಾಡಿದ್ದಾರೆ ಎಂದು ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಪರಮಾನಂದ ಟಣಕೇದಾರ ಆರೋಪಿಸಿದರು.
ಗುರುವಾರ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವನಬಾಗೇವಾಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟಲು ನಾನು ಲಕ್ಷಾಂತರ ರೂ ಸಂಬಳದ ಸರಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಹಲವು ತಿಂಗಳುಗಳಿAದ ಪಕ್ಷ ಸಂಘಟನೆ ಮಾಡಿದ್ದೆ. ಪಕ್ಷದ ಟಿಕೆಟ್ ಕುರಿತು ನಮ್ಮ ನಾಯಕರಾದ ಕುಮಾರಸ್ವಾಮಿ ಮತ್ತು ಬಂಡೆಪ್ಪ ಕಾಶಂಪೂರ ಅವರೊಂದಿಗೆ ಮಾತನಾಡಿ ಖಚಿತ ಪಡಿಸಿಕೊಂಡಿದ್ದೆ. ಅವರೂ ಸಹ ಯಾವ ಕಾರಣಕ್ಕೂ ಕೊನೆಯ ಹಂತದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಭರವಸೆಯನ್ನೂ ಸಹ ಕೊಟ್ಟಿದ್ದರು. ಆದರೀಗ ಭಿಫಾರಂ ಕೊಡುವುದಾಗಿ ಹೇಳಿ ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡು ಬಿಫಾರಂನ್ನು ಸ್ವಾಮೀಜಿಯೊಬ್ಬರ ತೀವ್ರ ಒತ್ತಡದಿಂದಾಗಿ ಅಪ್ಪುಗೌಡ ಪಾಟೀಲ, ಮನಗೂಳಿ ಅವರಿಗೆ ಕೊಡುತ್ತಿರುವುದಾಗಿ ತಿಳಿಸಿ ನನಗೆ ಅನ್ಯಾಯವೆಸಗಿದರು ಎಂದು ನೋವಿನಿಂದ ನುಡಿದರು.
ನಾನು ನಿಯತ್ತಾಗಿ ದುಡಿದ ದುಡ್ಡಿನಿಂದ ಹಲವಾರು ತಿಂಗಳು ಹಳ್ಳಿಹಳ್ಳಿ ಸುತ್ತಿ ಪಕ್ಷ ಸಂಘಟನೆ ಮಾಡಿದ್ದೆ. ಇದೇ ಮೊದಲ ಬಾರಿ ಕ್ಷೇತ್ರದಿಂದ ನಮ್ಮ ಹಾಲುಮತ ಸಮಾಜಕ್ಕೆ ಒಳ್ಳೆಯ ಅವಕಾಶ ಒದಗಿ ಬಂದಿತ್ತು. ಈಗ ನನ್ನ ತಟ್ಟೆಯಲ್ಲಿದ್ದ ಅನ್ನ ಕಿತ್ತುಕೊಂಡು ಬೇರೆಯವರಿಗೆ ಕೊಟ್ಟು ನನಗೆ ಪಕ್ಷದ ಮುಖಂಡರು ಅನ್ಯಾಯವೆಸಗಿದ್ದಾರೆ. ಇದಕ್ಕೆ ಕ್ಷೇತ್ರದಲ್ಲಿ ತಕ್ಕ ಪರಿಣಾಮ ಅನುಭವಿಸುತ್ತಾರೆ. ಈ ಬೆಳವಣಿಗೆಯಿಂದ ಕ್ಷೇತ್ರದಾದ್ಯಂತ ನಮ್ಮ ಹಾಲುಮತ ಸಮುದಾಯ ಆಕ್ರೋಶಗೊಂಡಿದೆ. ಸಮುದಾಯದ ಹಿರಿಯರು ನಮ್ಮ ಸಮಾಜದ ಅನ್ನ ಕಿತ್ತುಕೊಂಡ ಪಕ್ಷಕ್ಕೆ ಬೆಂಬಲ ಕೊಡಬಾರದೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಕುರಿತು ಹಿರಿಯರ, ಬೆಂಬಲಿಗರ ಸಭೆ ಕರೆದು ಚರ್ಚಿಸಿ ಏ.೨೪ಕ್ಕೆ ನನ್ನ ನಿರ್ಧಾರ ಪಕಟಿಸುವೆ. ಅಲ್ಲದೇ ಅಂದೇ ಎಲ್ಲ ಪದಾಧಿಕಾರಿಗಳೊಂದಿಗೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಪರಮಾನಂದ ಟಣಕೇದಾರ ಸ್ಪಷ್ಟಪಡಿಸಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಹಣಮಂತ ಜೋತೆಪ್ಪಗೋಳ, ಡಕೊಲ್ಹಾರ ತಾಲ್ಲೂಕು ಅಧ್ಯಕ್ಷ ಬಶೀರ ಗಿರಗಾಂವ, ಬಸವನಬಾಗೇವಾಡಿ ತಾಲೂಕಾಧ್ಯಕ್ಷ ಮುದುಕಣ್ಣ ಹೊರ್ತಿ ಹಾಗೂ ಹಾಲುಮತ ಸಮಾಜದ ಮುಖಂಡ ಶಿವರಾಯ ಕಲಬುರ್ಗಿ ಸೇರಿದಂತೆ ಹಲವರಿದ್ದರು.
ಅಪ್ಪುಗೌಡ ರಿಗೆ ನನ್ನ ಬೆಂಬಲವಿಲ್ಲ
ನನ್ನಿಂದ ಜೆಡಿಎಸ್ ಟಿಕೆಟ್ ಕಿತ್ತುಕೊಂಡ ಅಪ್ಪುಗೌಡ ಪಾಟೀಲರಿಗೆ ನಾನು ಯಾವುದೇ ಕಾರಣಕ್ಕೂ ಬೆಂಬಲ ನೀಡುತ್ತಿಲ್ಲ ಎಂದು ಜೆಡಿಎಸ್ ಟಿಕೆಟ್ ವಂಚಿತ ಪರಮಾನಂದ ಟಣಕೇದಾರ ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಬಳಿ ಬಿಫಾರಂಗಾಗಿ ನಾನೂ ಮತ್ತು ಅಪ್ಪುಗೌಡ ಪಾಟೀಲರು ಜೊತೆಗಿದ್ದಾಗ ತೆಗೆದ ಸಹಜ ಫೋಟೊವನ್ನೇ ಕೆಲವರು ಉದ್ದೇಶಪೂರ್ವಕವಾಗಿ ವೈರಲ್ ಮಾಡಿ, ನಾನು ಅಪ್ಪುಗೌಡ ಅವರಿಗೆ ಬೆಂಬಲಿಸಲು ಕುಮಾರಸ್ವಾಮಿ ಅವರೆದುರು ಒಪ್ಪಿಕೊಂಡಿದ್ದೇನೆAದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕೆ ದೂರವಾದ ಸಂಗತಿ. ನಾನು ಅಪ್ಪುಗೌಡರಿಗೆ ನನ್ನ ಬೆಂಬಲ ಕೊಡುತ್ತೇನೆಂದು ಎಲ್ಲಿಯೂ ಒಪ್ಪಿಕೊಂಡಿಲ್ಲ. ಕೊಡುವುದೂ ಇಲ್ಲ. ಯಾರಿಗೆ ಬೆಂಬಲಿಸಬೇಕೆAದುದನ್ನು ಹಿರಿಯರು, ಬೆಂಬಲಿಗರೊಂದಿಗೆ ಚರ್ಚಿಸಿ ಏ.೨೪ರಂದು ಪ್ರಕಟಿಸುವುದಾಗಿ ಟಣಕೇದಾರ ತಿಳಿಸಿದರು.