ಶಿಗಣಾಪುರ(ಚಡಚಣ): ನಾನು ಅಭಿವೃದ್ಧಿ ಪರ ಶಾಸಕನಾಗಿ ನಿಮ್ಮ ನೆನಪಲ್ಲಿ ಉಳಿಯಬೇಕು ಎಂದು ಕೊಂಡವನಾದ್ದರಿಂದ ನಿಮ್ಮ ಎಲ್ಲ ಅನಾನುಕೂಲಗಳನ್ನು ಅನುಕೂಲಗಳನ್ನಾಗಿ ಬದಲಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಹೇಳಿದರು.
ಗುರುವಾರ ಗ್ರಾಮದಲ್ಲಿ ನಡೆದ ಚುನಾಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮತದಾರರು ಕೆಟ್ಟಿಲ್ಲ, ನಾಯಕರು ಕೆಟ್ಟಿದ್ದಾರೆ. ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯ, ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಶಿಗಣಾಪುರ ಗ್ರಾಮದ ಯಾರೇ ಬಂದರೂ ಅವರ ಕಾರ್ಯ ಮಾಡಿಕೊಡುವೆ. ಸಬ್ಸಿಡಿ, ಕೃಷಿ ಹೊಂಡ, ಅನೇಕ ಸೌಲಭ್ಯಗಳನ್ನು ನಿಮಗೆ ನೀಡುತ್ತೇನೆ. ಸಾಮಾನ್ಯನೇ ಬಂದರೂ ಅವರ ಕೆಲಸ ಮಾಡಿಕೊಡುವೆ ಎಂದು ಕಟಕದೊಂಡ ಹೇಳಿದರು.
‘ನೀವು ಶಾಸಕರಾದರೆ ಗ್ರಾಮದ ಕೆರೆ ಹೂಳೆತ್ತುವುದು ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಬೇಕು’ ಎಂದು ಸಾಮಾಜಿಕ ತಾಣದ ಜಿಲ್ಲಾ ಮುಖ್ಯಸ್ಥ ಹಾಗೂ ಗ್ರಾಮದ ಮುಖಂಡ ಪ್ರಕಾಶ ಪಾಟೀಲ ಪ್ರಾಸ್ತಾವಿಕ ಮಾತನಾಡುತ್ತ ಮನವಿ ಮಾಡಿದರು.
ಬಿಜೆಪಿ ಅತಿ ಭ್ರಷ್ಟ, ಕೋಮುವಾದಿ ಪಕ್ಷವಾಗಿದೆ. ಜೆಡಿಎಸ್‌ನ ಸದ್ಯದ ಶಾಸಕರೂ ನಿರುಪಯೋಗಿಯಾಗಿದ್ದಾರೆ. ಇದಕ್ಕೆ ಬೇಸತ್ತು ಎಂ.ಆರ್.ಪಾಟೀಲರು ಅವರನ್ನು ತೊರೆದು ಕಾಂಗ್ರೆಸ್ ಸೇರಿದ್ದು ಬಲ ಬಂದಿದೆ. ಈ ನಾಲ್ಕು ಹಳ್ಳಿಗಳು ಭಾಗಶಃ ಜನ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಪ್ರಕಾಶ್ ಹೇಳಿದರು.
ಮಹೇಶ ಬಿರಾದಾರ, ಶಾಂತಪ್ಪ ಹೊಟಗಿ ರೈತಾಪಿ ಜನರ ಹಿತ ಕಾಪಾಡಬೇಕು ಎಂದು ಹೇಳಿದರು.
ಮುಖಂಡರಾದ ಎಂ.ಆರ್. ಪಾಟೀಲ, ಪ್ರಸಾದ ಚವ್ಹಾಣ, ಮಲ್ಲು ಜತ್ತಿ, ತಾಪಂ ಮಾಜಿ ಅಧ್ಯಕ್ಷ ಭೀಮನಗೌಡ ಬಿರಾದಾರ, ಸಾಹೇಬಗೌಡ, ಕಾಮೇಶ ಪಾಟೀಲ, ಪಕ್ಷದ ಎಸ್.ಎಸಿ. ಘಟಕದ ಜಿಲ್ಲಾ ಉಪಾಧ್ಯಕ್ಷ ರಾಜು ಸಿಂಘೆ, ರವಿ ಜಾಧವ, ಶಶಿ ಸಾತಲಗಾಂವ, ಮುದುಕಣ್ಣ ಕೋಳಿ, ಸುರೇಶ ಗೊಣಸಗಿ, ಮುದುಕಪ್ಪ ಕೋಳಿ, ಗ್ರಾಪಂ ಅಧ್ಯಕ್ಷ ಚಂದ್ರಕಾಂತ ನಂದಗೊಂಡ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment