ಇ0ಡಿ: ನನ್ನ ಎರಡು ಅಧಿಕಾರದ ಅವಧಿಯಲ್ಲಿ ಇಂಡಿ ಕ್ಷೇತ್ರದಲ್ಲಿ ಅಗಾಧವಾದ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ ಜಿಲ್ಲಾ ಕೇಂದ್ರವನ್ನು ಮಾಡುವ ಉತ್ಸುಕತೆ ನನ್ನಲ್ಲಿದ ಇಂಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಅದಕ್ಕಾಗಿ ನಿಮ್ಮೆಲ್ಲರ ಬೆಂಬಲ-ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಇಂಡಿ ಕ್ಷೇತ್ರದ ಕಾಂಗೈ ಅಭ್ಯರ್ಥಿ ಯತಮತ್ರಾಯಗೌಡ ಪಾಟೀಲ ಅವರು ಭುಂಯ್ಯಾರ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದರು.
ಭುಯ್ಯಾರ ಗ್ರಾಮದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಭುಂಯ್ಯಾರ, ನಾಗರಹಳ್ಳಿ, ರೋಡಗಿ, ಖೇಡಗಿ, ಹಿರೇಬೇವನೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಜನರ ಬೇಡಿಕೆಗೆ ತಕ್ಕಂತೆ ರಸ್ತೆ, ಕುಡಿಯುವ ನೀರು, ಸಹಕಾರ ತತ್ವದಡಿ ರೈತರಿಗೆ ಅನೂಕೂಲವಾಗುಮತ ನೆನೆಗುದಿಗೆ ಬಿದ್ದ ಮರಗೂರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿದ್ದು, ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ, ಸಾಕಷ್ಟು ಕ್ಷೇತ್ರಕ್ಕೆ ಅನುದಾನ ತಂದ ತೃಪ್ತಿ ನನಗಿದೆ ಎಂದರು.
ಭುಯ್ಯಾರ ಗ್ರಾಮದಿಂದಲೂ ೨-೩ ಬಾರಿ ವಿಧಾನಸಭೆ ಪ್ರವೇಶ ಸಿಕ್ಕಿದ್ದು, ಅದು ಕಾಂಗ್ರೆಸ್‌ಕ್ಕೆ ಶಿಂಗಪ್ಪ ಗೋಳಸಾರ, ಬಿದಾಚಾರ್ಯ ಜಹಾಗೀರದಾರ, ಲಾಳಸಂಗಿ, ಹೊನವಾಡ ಅವರ ಆಡಳಿತ ವೈಖರಿ ಎಲ್ಲರಿಗೂ ಗೊತ್ತಿದೆ. ಈ ಭಾಗಗಳಲ್ಲಿ ಇನ್ನು ಕೆಲವು ಕಾರ್ಯ ಆಗಬೇಕಿದೆ ಅವುಗಳನ್ನು ಮುಂದಿನ ಅವಧಿಯಲ್ಲಿ ಮಾಡುವ ಭರವಸೆಯನ್ನು ಮತದಾರರಿಗೆ ನೀಡಿದರು.
ಬರದ ಹಣೆಪಟ್ಟಿಯನ್ನು ಕಂಡ ಇಂಡಿ ತಾಲೂಕನ್ನು ಬರದಿಂದ ಮುಕ್ತಗೊಳಿಸಲು ನೀರಾವರಿಯ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವೆ, ಯುವಕರಿಗೆ ಈ ಕ್ಷೇತ್ರದಲ್ಲಿ ಔದ್ಯೋಗಿಕ ಕ್ರಾಂತಿಗೆ ನಾನು ಪ್ರಯತ್ನಿಸಬೇಕಿದೆ, ಇಂಡಿ ಜಿಲ್ಲಾ ಕೇಂದ್ರವನ್ನು ಮಾಡುವ ಬಗ್ಗೆ, ನಗರಸಭೆ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಬೆಲೆ ನೀಡಿ ಸಾಧನೆ ಮಾಡಬೇಕೆಂಬ ಬಯಕೆ ಇಟ್ಟುಕೊಂಡು ತಮ್ಮಲ್ಲಿ ಮತ ಕೇಳಲು ಬಂದಿರುವ, ಬರುವ ಮೇ ೧೦ ರಂದು ನನಗೆ ಮತ ನೀಡಿ ಆಯ್ಕೆ ಮಾಡಿ ಎಂದರು. ಕಾಂಗೈ ಗ್ಯಾರುಟಿಕಾರ್ಡ್ ನಿಶ್ಚಿತವಾಗಿ ಜಾರಿಗೆ ತರುವ ಭರವಸೆಯನ್ನು ಯಾಮಾರಗೌಡ ಪಾಟೀಲ ನೀಡಿದರು.
ಗ್ರಾಮದ ಅನೇಕರು ಭಾಜಪ ಮತ್ತು ಜೆಡಿಎಸ್ ತೊರೆದು ಶಾಸಕ ಯತಮ ತಾಯಗೌಡ ಪಾಟೀಲ ಅವರ ಯೊಜನೆ ಹಾಗೂ ಅಭಿವೃದ್ಧಿ ಕಾರ್ಯ ನೋಡಿ ಅವರ ಮುಂದೆಯೇ ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಶಿಮಗೆಪ್ಪ ಅಜಗೊಂಡ, ಶಂಕರ ಹೊನವಾಡ, ಗಡ್ಡಪ್ಪ ಮಲ್ಲಪ್ಪ ನಾಟೀಕಾರ, ಮಹಾದೇವಪ್ಪ ನಾಯ್ಕಡಿ, ಸೈಪನಸಾಪ ಮುಲ್ಲಾ, ಮಹಾದೇವ ಗೋಳಸಾರ, ರಮೇತ ಗೊಳಸಾರ, ಶಂಕರ ಹೊಟಗೊಂಡ, ಲಾಲಸಾಬ ಮುಲ್ಲಾ, ನಿರ್ಮಲಾ ತಳಕೇರಿ, ನ್ಯಾಯವಾದಿ ಬಿಕೆ ಪಾಟೀಲ, ಜಟ್ಟೆಪ್ಪಣ್ಣ ರವಳಿ, ಅನೇಕ ಗ್ರಾಮದ ಹಿರಿಯರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹುಚ್ಚಪ್ಪ ತಳವಾರ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು.
ಶಾಸಕರ ಅನುದಾನದಲ್ಲಿ ಸಿದ್ಧಗೊಂಡ ಶ್ರೀ ಮೆಕಟೇಶ್ವರ ದೇವಸ್ಥಾನಕ್ಕೆ ತೆರಳಿ ಮುಂದೆ ಆಗಬೇಕಾದ ಕಾರ್ಯ ವಿಕ್ಷಣೆಯನ್ನು ಮಾಡಿದ ಯನಮತ್ರಾಯಗೌಡರು ಕಾಂಗೈ ಬಗ್ಗೆ ಮುನಿಸಿಕೊಂಡಿದ್ದ ದಿ.ಶಿಮಗೆಪ್ಪ ಗೊಳಸಾರ ಅವರ ಪತ್ರ ಗಡ್ಡಪ್ಪ ಗೋಳಸಾರ ಅವರ ಮನೆಗೆ ತೆರಳಿ ಅವರೊಂದಿಗೆ ಚರ್ಚಿಸಿ ಕಾಂಗೈ ಗೆಲುವಿಗೆ ಸ್ಪಂದಿಸಿ ಎಂದರು. ಶ್ರೀ ಕರಿಮಲ್ಲೇಶ್ವರ, ಶ್ರೀ ಗಂಗೇರಾಯ ದೇವಸ್ಥಾನಕ್ಕೆ ತೆರಳಿ ದೇವರ ಆಶಿರ್ವಾದ ಪಡೆದರು.
ಇದಕ್ಕೂ ಪೂರ್ವದಲ್ಲಿ ನಾಗರಹಳ್ಳಿ, ರೋಡಗಿ, ಖೇಡಗಿ, ಹಾಗೂ ನಂತರದಲ್ಲಿ ಹಿರೇಬೇವನೂರದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಇಲ್ಲಿಯೂ ಅನೇಕರು ಭಾಜಪ ಮತ್ತು ಜೆಡಿಎಸ್ ತೊರೆದು ಶಾಸಕ ಯಪಮಾಗೌಡ ಪಾಟೀಲ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗೆ ನನ್ನನ್ನು ಆಯ್ಕೆ ಮಾಡಿ: ಯಶವಂತ್ರಾಯಗೌಡ
Related Posts
Add A Comment