ಮುದ್ದೇಬಿಹಾಳ: ಈ ಬಾರಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ವಿಜಯೋತ್ಸವ ಆಚರಿಸುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂದು ಮಾಜಿ ಸಚಿವ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಹೇಳಿದರು.
ಪಟ್ಟಣದ ಹುಡ್ಕೋದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳನ್ನು ಕಾಂಗ್ರೇಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಕಾಂಗ್ರೇಸ್ ಪಕ್ಷದ ಅಭಿಮಾನ ಎಲ್ಲೆಡೆ ಮೊಳಗುತ್ತಿರುವುದು ಸಂತಸ ತಂದಿದೆ. ದುಡ್ಡಿನಿಂದ ಯಾರನ್ನು ಬೇಕಾದರೂ ಕೊಂಡುಕೊಳ್ಳುತ್ತೇನೆ ಎಂದು ಅಹಂಕಾರದಿAದ ದರ್ಪ ತೋರಿಸುವವರಿಗೆ ಮತಕ್ಷೇತ್ರದ ಜನತೆ ಈ ಬಾರಿ ತಕ್ಕ ಉತ್ತರ ನೀಡಲು ಸಿದ್ಧರಾಗಿ ಕುಳಿತಿದ್ದಾರೆ. ಮೇ10 ರ ದಿನಾಂಕಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ನನ್ನ ಇತಿಹಾಸದಲ್ಲಿಯೇ ಕಾಣದ ಮತಗಳು ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೇಸ್ ಪಕ್ಷದ ಸೇರ್ಪಡೆಗೊಂಡ ಜೆಡಿಎಸ್ ಪಕ್ಷದ ಪದಾಧಿಕಾರಿಗಳಾದ ಕೃಷ್ಣ ರಾಠೋಡ, ಪ್ರಶಾಂತ ಕಾಳೆ, ಶಂಕರ್ ಮುರಾಳ, ಹುಸೇನ್ ಭಾಷಾ ಪಿಂಜಾರ, ರುದ್ರೇಶ ಮುರಾಳ ಮಾತನಾಡಿ, ಅಪ್ಪಾಜಿ ನಾಡಗೌಡರ ಸನ್ನಡತೆಯ ರಾಜಕಾರಣಕ್ಕೆ ಮನಸೋತು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದ್ದೇವೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಹಗಲಿರುಳು ಶ್ರಮಿಸುವದಾಗಿ ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಹಿರಿಯ ಮುಖಂಡರಾದ ಶಿವಶಂಕರಗೌಡ ಹಿರೇಗೌಡರ, ಪುರಸಭೆ ಸದಸ್ಯರಾದ ಮಹೆಬೂಬ ಗೊಳಸಂಗಿ, ವಿರೇಶ ಹಡಲಗೇರಿ, ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ ರಫೀಕ ಶಿರೋಳ, ಅಪ್ಪು ದೇಗಿನಾಳ, ರುದ್ರಗೌಡ ಅಂಗಡಗೇರಿ, ಶಿಖಂದರ ಜಾನ್ವೇಕರ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment