ಇಂಡಿ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಕಾಸುಗೌಡ ಬಿರಾದಾರ ಅವರು ತಮ್ಮ ಅಪಾರ ಬೆಂಬಲಿಗರೊAದಿಗೆ ಮೆರವಣಿಗೆ ನಡೆಸಿ ಮಿನಿ ವಿಧಾನಸೌಧಕ್ಕೆ ತೆರಳಿ ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ ಇವರಿಗೆ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ೧೦ ಗಂಟೆಗೆ ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಅಂಬಾಭವಾನಿ ಮತ್ತು ಇನ್ನಿತರ ದೇವಸ್ಥಾನ ತೆರಳಿ ಆರ್ಶೀವಾದ ಪಡೆದು ಶಿವಾಜಿ ವೃತ್ತದ ಮೂಲಕ ಬೃಹತ್ ಮೆರವಣೆಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಜನರಿಗೆ ಉತ್ತಮ ಆಡಳಿತ ಹಾಗೂ ಜನಪರ ಆಡಳಿತ ನೀಡಬೇಕಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ಎಲ್ಲರ ಇಚ್ಛೆ. ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ ಮತಯಾಚಿಸುತ್ತೇವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಇಂಡಿ ಮತ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅರಳಲಿದೆ. ಮೇ ೧೩ ರಂದು ಬಿಜೆಪಿ ಬಾವುಟ ಹಾರಲಿದೆ ಎಂದು ಅಭ್ಯರ್ಥಿ ಕಾಸುಗೌಡ ಬಿರಾದಾರ ಹೇಳಿದರು.
ಮೆರವಣಿಗೆಯಲ್ಲಿ ಉತ್ತರಾಖಂಡದ ಶಿಕ್ಷಣ ಸಚಿವ ಧ್ಯಾನಚಂದ ರಾವತ, ಉತ್ತರ ಪ್ರದೇಶದ ಗಿರಿಧರಲಾಲ ತಿವಾರಿ, ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ, ಅಣ್ಣಪ್ಪ ಖೈನೂರ, ಶೀಲವಂತ ಉಮರಾಣಿ, ಶಂಕರಗೌಡ ಪಾಟೀಲ, ದಯಾಸಾಗರ ಪಾಟೀಲ, ಮಲ್ಲಿಕಾರ್ಜುನ ಕಿವಡೆ, ಶಿವರುದ್ರ ಬಾಗಲಕೊಟ, ಅನೀಲ ಜಮಾದಾರ, ರಾಜಶೇಖರ ಯರಗಲ್ಲ, ಪುರಸಭೆ ಸದಸ್ಯರಾದ ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಮುತ್ತು ದೇಸಾಯಿ, ಬಾಬುಗೌಡ ಬಿರಾದಾರ, ಹಣಮಂತಗೌಡ ಪಾಟೀಲ, ರಾಜಕುಮಾರ ಸಗಾಯ, ರವಿ ವಗ್ಗೆ, ಯಲ್ಲಪ್ಪ ಹದರಿ ಮತ್ತಿತರಿದ್ದರು. ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸಿದವು.
Subscribe to Updates
Get the latest creative news from FooBar about art, design and business.
ಇಂಡಿ: ಬೆಂಬಲಿಗರೊ0ದಿಗೆ ಮೆರವಣಿಗೆಯಲ್ಲಿ ಕಾಸುಗೌಡ ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ
Related Posts
Add A Comment