ದೇವರಹಿಪ್ಪರಗಿ: ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸಾಂಸ್ಕೃತಿಕ ಕಲೆಗಳ ಅನಾವರಣಕ್ಕೆ ಪ್ರತಿಭಾ ಕಲೋತ್ಸವ ಸಹಕಾರಿಯಾಗಬಲ್ಲದು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಿಂದಗಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ದೇ.ಹಿಪ್ಪರಗಿ ಅಡಿಯಲ್ಲಿ ಬುಧವಾರ ಜರುಗಿದ ದೇವರಹಿಪ್ಪರಗಿ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಪಠ್ಯಗಳ ಕಲಿಕೆಯ ಜೊತೆಗೆ ಹೊಸದಾದ ಜೀವನ ಕೌಶಲ್ಯಗಳನ್ನು ಹೊಂದಲು ಇದು ಉತ್ತಮ ವೇದಿಕೆಯಾಗಿದೆ ಎಂದರು.
ಖ್ಯಾತ ವಕೀಲ ಎ.ಎಮ್.ತಾಂಬೋಳಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಲೋತ್ಸವ ಅವಕಾಶ ಒದಗಿಸುತ್ತದೆ. ಜೊತೆಗೆ ಮಕ್ಕಳ ವ್ಯಕ್ತಿತ್ವ ರೂಪಿಸಲು ಶಿಕ್ಷಕರಿಗೆ ಹಾಗೂ ಪಾಲಕರಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುತ್ತದೆ ಎಂದರು.
ಮಹಿಳಾ ಪಿಎಸ್‌ಐ ಪಿ.ಎಸ್.ಚೌರ ಮಾತನಾಡಿ, ಸರ್ಕಾರದ ಈ ಕಾರ್ಯಕ್ರಮ ಉತ್ತಮವಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಉತ್ತಮ ವೇದಿಕೆಯಾಗುತ್ತವೆ ಎಂದರು. ನಂತರ ಮಕ್ಕಳಿಂದ ಕಂಠಪಾಠ, ಕವ್ವಾಲಿ, ಕ್ವೀಜ್, ಛದ್ಮವೇಷ, ಕಥೆ ಹೇಳುವುದು, ಮಿಮಿಕ್ರಿ, ದೇಶಭಕ್ತಿ ಗೀತೆಗಳು ಮೂಡಿಬಂದವು.
ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಪಟ್ಟಣ ಪಂಚಾಯಿತಿ ಸದಸ್ಯ ಬಶೀರ್‌ಅಹ್ಮದ್ ಕಸಾಬ್, ಯುವಕಾಂಗ್ರೆಸ್ ಘಟಕದ ಅಧ್ಯಕ್ಷ ಮುನೀರ್ ಅಹ್ಮದ್ ಬಿಜಾಪೂರ, ಅಂಜುಮನ್ ಇಸ್ಲಾಮ್ ಕಮೀಟಿ ಉಪಾಧ್ಯಕ್ಷ ಮಹಮ್ಮದ್ ಪಾನಪರೋಷ್, ಕಾರ್ಯದರ್ಶಿ ಅಬ್ದುಲ್‌ಸತ್ತಾರ ಉಪರಘರ್, ಎಸ್‌ಡಿಎಮ್‌ಸಿ ಅಧ್ಯಕ್ಷ ಮುಸ್ತಫಾ ಮುಲ್ಲಾ, ಸದಸ್ಯ ಅಮೀರ್ ಮಕಾಂದಾರ, ಸಿಆರ್‌ಪಿ ಎಫ್.ಎನ್.ನಧಾಫ್, ಮುಖ್ಯಶಿಕ್ಷಕ ಮಹಮ್ಮದ್‌ರಫೀಕ್ ತಾಂಬೋಳಿ, ಹೈದರಸಾಬ್ ಮುಲ್ಲಾ, ಯಾಸೀನ್ ಗರಡಿಮನಿ, ನವಾಜ್, ಆರ್.ಎಮ್.ಹಳ್ಳಿ, ಎಂ.ಎ.ಹೆಬ್ಬಾಳ, ಮಕಬೂಲ್ ಬಾಗವಾನ್, ಮುರ್ತುಜಾ ತಾಂಬೋಳಿ ಸೇರಿದಂತೆ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರತಿಭಾ ಕಲೋತ್ಸವ ಸಹಕಾರಿ :ಸಿಂದಗಿ
Related Posts
Add A Comment

