ವಿಶ್ವ ಛಾಯಾಗ್ರಹಣ ದಿನಾಚರಣೆ | ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ
ವಿಜಯಪುರ: ನಮ್ಮ ಪರಂಪರೆ, ವಿಶ್ವದ ಐತಿಹಾಸಿಕ ಕ್ಷಣಗಳ ಇತಿಹಾಸ, ತಲೆ ತಲೆ ಮಾರುಗಳ ದಾಖಲಿಕರಣವನ್ನು ತಮ್ಮ ಕ್ಯಾಮರಾಗಳ ಮುಖಾಂತರ ಸೆರೆ ಹಿಡಿದು ಇಡಿ ಜಗತ್ತಿಗೆ ತೋರಿಸುವಲ್ಲಿ ಛಾಯಾಗ್ರಾಹಕರು ಸಾಕ್ಷಿಯಾಗಿಸಿದ್ದಾರೆ. ಇವರೆಲ್ಲ ನಮ್ಮ ಸಾಂಸ್ಕೃತಿಕ ರಾಯಭಾರಿಗಳೆಂದರೆ ತಪ್ಪಲ್ಲ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಪ್ರಾಯಪಟ್ಟರು.
ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಬುಧವಾರ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ “ವಿಶ್ವ ಛಾಯಾಗ್ರಹಣ ದಿನಾಚರಣೆಯ” ಅಂಗವಾಗಿ ಹಮ್ಮಿಕೊಂಡ ಛಾಯಾಗ್ರಹಣ ಕ್ಷೇತ್ರದ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಪ್ರದರ್ಶನದಲ್ಲಿ ಹಲವಾರು ವಿಭಿನ್ನ ವಿಷಯಗಳ ಅದ್ಬುತ ದೃಶ್ಯಕಾವ್ಯವನ್ನು ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ. ಸರಕಾರ ಛಾಯಾಗ್ರಾಹಕರಿಗೆ ಎಲ್ಲ ರೀತಿಯ ಆರ್ಥಿಕ ಸೌಲಭ್ಯ ನೀಡಿ ಅವರಿಗೂ ನೆಮ್ಮದಿಯ ಜೀವನ ಸಾಗಿಸುವ ಹಾಗೆ ಮಾಡಬೇಕು. ಸರಕಾರದಿಂದ ಸಿಗುವ ಸವಲತ್ತುಗಳನ್ನು ಛಾಯಾಗ್ರಾಹಕರಿಗೆ ದೊರಕಿಸಿಕೊಡಲು ತಾವೂ ಸಹ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಗಮೇಶ ಬಬಲೇಶ್ವರ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದೀಪಕ್ ಆರ್. ಚವ್ಹಾಣ ಮಾತನಾಡಿ, ಇವತ್ತು ಜಗತ್ತಿನಲ್ಲಿ ಛಾಯಾಗ್ರಹಣ ಕ್ಷೇತ್ರ ಕೇವಲ ಉದ್ಯೋಗದ ದೃಷ್ಠಿಯಿಂದ ನೋಡದೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಕೂಡ ಅದರ ಉಪಯೋಗ ಮಹತ್ವದ್ದಾಗಿದೆ. ಅತ್ಯಂತ ಸೂಕ್ಮ ಕ್ಯಾಮರಾಗಳ ಮೂಲಕ ದೇಹದ ವಿವಿಧ ಭಾಗಗಳ ರೋಗ ಪ್ತತೆ ಮಾಡಲು ಮತ್ತು ಅದರ ಪರಿಹಾರಕ್ಕೂ ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾಮರಾ ಉಪಯೋಗ ಮಾಡಲಾಗುತ್ತಿದೆ, ಜೊತೆಯಲ್ಲಿ ಜೀವನದ ಆತ್ಮೀಯ ಸಂಬಂಧದ ಅಪರೂಪದ ಕ್ಷಣಗಳನ್ನು ಸೆರೆಹಿಡಿದು ಶಾಶ್ವತವಾಗಿ ಸಂಗ್ರಹಯೋಗ್ಯ ಕೆಲಸ ಮಾಡುತ್ತಿದೆ ಇಂಥ ಕಾರ್ಯ ಮಾಡುತ್ತಿರುವ ಛಾಯಾಗ್ರಾಹಕರು ನಾಡಿನ ಶೇಷ್ಠರ ಸಾಲಿನಲ್ಲಿ ನಿಲುವ ಎಲ್ಲ ಅರ್ಹತೆಗಳು ಇವರಲ್ಲಿದೆ. ನಾವು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಮಾತನಾಡಿ, ಛಾಯಾಗ್ರಾಹಕರು ಶಿಸ್ತು, ಸಂಯಮ ದಿಂದ ಜೀವನ ನಡೆಸಲು ಉಪಯೋಗವಾಗುವಂತಹ ಹಲವಾರು ವಿಚಾರಗಳನ್ನು ತಿಳಿಸಿದರು.
ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ ನಾಗರಾಜ ಟಿ. ಸಿ. ಮತ್ತು ರವಿಕಿರಣ ಅವರು ಛಾಯಾಗ್ರಾಹಕ ವೃತ್ತಿಯಲ್ಲಿ ಸುಮಾರು ವರ್ಷ ಸಾಗಿದ್ದೆವೆ, ಸರಕಾರ ನಮ್ಮನ್ನು ಗುರುತಿಸುವಲ್ಲಿ ಮರೆತಿದೆ. ಎಲ್ಲರಿಗೂ ಸಿಗುವ ಸೌಲಭ್ಯ ನಮಗೂ ಸಿಗುವಂತಾಗಲಿ, ಸರಕಾರದಿಂದ ಛಾಯಾಗ್ರಾಹಕರಿಗೂ ಮಾಶಾಸನ ದೊರೆಯುಂತೆ ಆದೇಶ ಮಾಡಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ವಸ್ತುಪ್ರದರ್ಶನದ ಬಗ್ಗೆ ಮಾಹಿತಿ ನೀಡಿ ಪ್ರದರ್ಶನದ ಪ್ರಚಾರ ಅಭಿಯಾನ ಕ್ಕೆ ಚಾಲನೆ ನೀಡಿ, ಎಲ್ಲ ಛಾಯಾಗ್ರಾಹಕರು ಪ್ರದರ್ಶನದ ಲಾಭ ಪಡೆಯಲು ತಿಳಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ, ನಾವು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಂಘಟನೆ ಗಟ್ಟಿಗೊಳಿಸಬೇಕಾಗಿದೆ. ನಮ್ಮ ವೃತ್ತಿ ಸುಮಾರು 187ವರ್ಷಗಳಷ್ಟು ಹಳೆಯದಾಗಿದೆ. ಈ ರಂಗಕ್ಕೆ ಸರ್ಕಾರ ಅಕಾಡೆಮಿ ರಚನೆ ಮಾಡದೆ, ನಮ್ಮ ಛಾಯಾಗ್ರಾಹಕರನ್ನು ಗುರುತಿಸದೇ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ನಾವೆಲ್ಲರೂ ಸಂಘವನ್ನು ಬಲಿಷ್ಠಗೊಳಿಸಿ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ರಚನೆ ಮಾಡುವಂತೆ ಒತ್ತಾಯಿಸುವುದು ಅನಿವಾರ್ಯವಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲೆಯ ಹಿರಿಯ ಛಾಯಾಗ್ರಾಹಕರುಗಳಾದ ವಿಜಯಪುರದ ರವೀಂದ್ರ ಪೂಜಾರಿ, ಮಹೇಶ ಬಾಗಿ, ವಿವೇಕಾನಂದ ಅಕ್ಕಿ, ಸಿಂದಗಿಯ ಚಂದ್ರಕಾಂತ (ಪುಟ್ಟು) ಸಂಗಮ, ಇಂಡಿಯ ಮಹಮ್ಮದ್ ಇಸಾಕ್ ಲಾಳಸಂಗಿ, ಆಲಮೇಲದ ಪ್ರಭಾಕರ ನೆಲವಡೆ, ದೇವರ ಹಿಪ್ಪರಗಿಯ ಶಶೀಧರ ಆಲಗೂರ ಅವರ ಸೇವೆಯನ್ನು ಗುರುತಿಸಿ ಜಿಲ್ಲಾ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ದ್ವಿತಿಯ ಪಿಯೂಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಛಾಯಾಗ್ರಾಹಕರ ಮಕ್ಕಳಾದ ಐಶ್ವರ್ಯ ಹಣಮಂತಸಿಂಗ್ ರಜಪೂತ, ಭವಾನಿ ನೇಮಿನಾಥ ನೇಜ, ಪ್ರಜ್ವಲ ಶೇಖಪ್ಪಾ ನ್ಯಾಮಗೊಂಡ, ಪ್ರಿಯಾ ಪಂಡಿತ್ ಬಿರಾದಾರ, ಸಚೀನ ಮೌನೇಶ ಬಡಿಗೇರ ಇವರಿಗೆ ಗೌರವಧನ, ಪ್ರಮಾಣಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಛಾಯಾಗ್ರಾಹಕರ ಸಂಘದ ವಿವಿದ ತಾಲೂಕು ಅಧ್ಯಕ್ಷರಾದ ಜಂಗಲಿಬಾಷಾ ಮುಜಾವರ ಸಂಗಯ್ಯ ಮಠಪತಿ, ಸಿದ್ದು ಕುದುರೆ, ಶಿವರುದ್ರಯ್ಯ ಹಿರೇಮಠ, ಪರಶುರಾಮ ಗುಳ್ಳೂರ ಹಾಗೂ ಹಿರಿಯ ಛಾಯಾಗ್ರಾಹಕ ಮಡಿವಾಳಪ್ಪಾ ಪಾಟೀಲ ಇದ್ದರು.
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳಾದ ಸತೀಶಕುಮಾರ ಕಲಾಲ, ಪ್ರಶಾಂತ್ ಪಟ್ಟಣಶೆಟ್ಟಿ, ರಾಜುಸಿಂಗ್ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ್ ಕುಂಬಾರ, ಹಿರಿಯ ಕಲಾವಿದರಾದ ಪಿ.ಎಸ್.ಕಡೆಮನಿ, ಬಿ.ಎಸ್. ಪಾಟೀಲ, ಪಿಂಟು ಕರ್ವಾ, ಉಮೇಶ ಹಿರೇದೆಸಾಯಿ, ಕಿರಣ ಸುಭಾಸ ಅಕ್ಕಿ, ಸಮೀರ ಅಥಣಿ, ಸದಾನಂಧ ದಾರಫಳ, ಆನಂದ ಮಹಾಂತಮಠ, ರಮೇಶ ಮೈದರಗಿ, ಶಶಿಕುಮಾರ ಕುಂಬಾರ. ಕಿಶೋರ ಖಂಡಾಗಳೆ, ಬಾಳು ಕಲಾಲ, ಚಂದ್ರಶೇಖರ ವಡ್ಡರ, ಸುನೀಲಗೌಡ ಬಿರಾದಾರ, ಗೌಡಪ್ಪಗೌಡ ಬಿರಾದಾರ, ಸುಗುರೇಶ ಗುಲ್ಫಿ, ಅನಂತ ಭೋಸಲೆ, ಸುಭಾಶ ಪವಾರ, ಸಂಗನಗೌದ ಬಿರಾದಾರ. ಸದಾಶಿವ ಪವಾರ, ಗಣೇಶ ಶಿಂದೆ, ಪುಟ್ಟು ಕುಲಕರ್ಣಿ, ಇಕಬಾಲ ಕಲಾದಗಿ, ಅಕ್ಷಯ ಪೋತೆ ಸೇರಿದಂತೆ ಅನೇಕರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸುರೇಶ ಬಿಜಾಪುರ ನೆರವೇರಿಸಿದರು.

” ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿ ನಮ್ಮ ಸಂಘವನ್ನೂ ಸೇರ್ಪಡಿಸಿ ನಮಗೂ ಎಲ್ಲ ರೀತಿಯ ಕಲಾವಿದರಿಗೆ ಸಿಗುವ ಮೂಲಸೌಕರ್ಯ ಕಲ್ಪಿಸಬೇಕೆಂಬುದು ನಮ್ಮ ಸಂಘದ ಒತ್ತಾಯವಾಗಿದೆ.”
– ರಮೇಶ ಚವ್ಹಾಣ
ಅಧ್ಯಕ್ಷರು, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ

