ದೇವರಹಿಪ್ಪರಗಿ: ರಾಘವೇಂದ್ರ ಸ್ವಾಮಿಗಳ ೩೫೩ನೇ ಮಧ್ಯಾರಾಧನೆ ಮಹೋತ್ಸವ ಭಕ್ತಿಭಾವದಿಂದ ಅದ್ಧೂರಿಯಾಗಿ ಜರುಗಿತು.
ಪಟ್ಟಣದ ವಿಠ್ಠಲಮಂದಿರದಲ್ಲಿ ಕಳೆದ ೨ ದಿನಗಳಿಂದ ಆರಂಭಗೊಂಡ ಆರಾಧನಾ ಮಹೋತ್ಸವದಲ್ಲಿ ಮೊದಲದಿನ ಪೂರ್ವಾರಾಧನೆ, ಎರಡನೆಯ ದಿನ ಮಧ್ಯಾರಾಧನೆ ಜರುಗಿದ್ದು, ನಾಳೆ ಉತ್ತರಾಧನೆ ಜರುಗಲಿದೆ. ಪ್ರತಿದಿನ ಬೆಳಿಗ್ಗೆ ರಾಯರ ಮಹಾಪೂಜೆ, ಅಷ್ಠೋತ್ತರ ಸಾಂಗವಾಗಿ ಜರುಗಿ ನಂತರ ತೀರ್ಥ, ಮಹಾಪ್ರಸಾದ ವಿತರಣೆಯಾಗುತ್ತಿದ್ದು. ರಾತ್ರಿ ರಾಯರ ಕುರಿತು ಭಕ್ತಿಗೀತೆಗಳ ಭಜನೆ ಜರುಗಲ್ಪಡುತ್ತಿವೆ.
ರಾಯರ ಆರಾಧನೆ ಅಂಗವಾಗಿ ಪ್ರತಿವರ್ಷ ಮೊದಲದಿನ ಪೂರ್ವಾರಾಧನೆ ಅಂಗವಾಗಿ ಶ್ರೀನಿವಾಸ ಪಾಟೀಲ(ವರ್ಕಾನಳ್ಳಿ) ಎರಡನೆಯ ದಿನ ಮಧ್ಯಾರಾಧನೆಯಂದು ಡಾ.ಆರ್.ಆರ್.ನಾಯಿಕ್ ಮೂರನೆಯ ದಿನ ಎಂ.ಆರ್.ಪುರೋಹಿತ(ಮಣೂರ) ಪೂಜಾವಿಧಿವಿಧಾನ ಹಾಗೂ ಮಹಾಪ್ರಸಾದ ನೆರವೇರಿಸುತ್ತಾರೆ.
ಮಹೋತ್ಸವದಲ್ಲಿ ವೈದ್ಯರುಗಳಾದ ಆರ್.ಆರ್.ನಾಯಿಕ್, ಸತೀಶ ನಾಡಗೌಡ, ಚಿದಂಬರ ಸೇವಾ ಸಮಿತಿಯ ಶ್ರೀಧರ ನಾಡಗೌಡ, ವೆಂಕಟೇಶ ಕುಲಕರ್ಣಿ, ಶ್ರೀನಿವಾಸ ಪಾಟೀಲ. ಸುಧೀರ ಪಾಟೀಲ, ಶ್ರೀಪಾದಭಟ್ ಜೋಷಿ, ಗುರುರಾಜ್ ಕುಲಕರ್ಣಿ, ನರೇಂದ್ರ ನಾಡಗೌಡ, ಪ್ರಲ್ಹಾದ ಕುಲಕರ್ಣಿ, ಪ್ರಭಾಕರ ಕುಲಕರ್ಣಿ, ಅಶೋಕಭಟ್ ಜೋಷಿ, ಪ್ರವೀಣ ಕುಲಕರ್ಣಿ, ಉಮಾಕಾಂತ ನಾಡಗೌಡ, ರಾಘವೇಂದ್ರ ಕುಲಕರ್ಣಿ, ಆನಂದ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಕೃಷ್ಣಾಜೀ ಕುಲಕರ್ಣಿ, ಅಶೋಕ ಕುಲಕರ್ಣಿ, ಸಂಗೀತಾ ನಾಯಿಕ್, ಮಾಧುರಿ ನಾಡಗೌಡ, ವಿಜಯಲಕ್ಷ್ಮಿ ಕುಲಕರ್ಣಿ, ರೇಖಾ ನಾಡಗೌಡ, ಸುಜಾತಾ ನಾಡಗೌಡ, ಅಂಬಿಕಾ ಕುಲಕರ್ಣಿ, ಅನೀತಾ ಕುಲಕರ್ಣಿ, ಶ್ರೀದೇವಿ ಜೋಷಿ, ಉಮಾಬಾಯಿ ಕುಲಕರ್ಣಿ, ಶಶಿಕಲಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

