ತಿಕೋಟಾ: ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಒಳ್ಳೆಯ ಸೌಕರ್ಯ ಒದಗಿಸಿದರೆ ಉತ್ತಮ ಸಾಧನೆ ಮಾಡುತ್ತಾರೆ ಎಂದು ಮುಂಬೈ ಮೂಲದ ತಪಸಿದಾಸ, ತುಳಸಿದಾಸ ಮತ್ತು ವೃಜದಾಸ ಚಾರಿಟೇಬಲ್ ಟ್ರಸ್ಟನ ಸಂಯೋಜಕ ವಿಶ್ವನಾಥ ಸಿಂದಗಿ ಹೇಳಿದರು.
ತಾಲ್ಲೂಕಿನ ಬಾಬಾನಗರ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಟ್ರಸ್ಟ್ ವತಿಯಿಂದ ನೀಡಿದ ಸ್ಮಾರ್ಟ ಬೋರ್ಡ್ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಉತ್ತಮವಾಗಿ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಮಾಡುವ ಸಾಧನೆಯೇ ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಐ.ರುದ್ರಗೌಡರ, ಎಸ್.ಬಿ.ಬಿರಾದಾರ, ಬಿ.ಎಸ್.ಕುಮಟಗಿ, ಎಸ್.ಐ.ಬಾಗಲಕೋಟ, ಎ.ಎಂ.ಚಮಕೇರೆ, ಜೆ.ಎನ್.ಬಾಗಲಕೋಟ, ಅಮೃತಾ ಪತ್ತಾರ, ಗ್ರಾಮ ಪಂಚಾಯತ ಸದಸ್ಯರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

