ರೈತ ಚಿಂತನಾ ಸಭೆ ಹಾಗೂ ಜಂಬಗಿ ಗ್ರಾಮ ಘಟಕ ಉದ್ಘಾಟನಾ ಸಮಾರಂಭ
ವಿಜಯಪುರ :ದೇಶದಲ್ಲಿ ಬಹುಸಂಖ್ಯಾತರಾಗಿರುವ ರೈತರು ದಿನನಿತ್ಯ ಅನೇಕ ತೊಂದರೆಗಳೊಂದಿಗೆ ಕೃಷಿ ಮಾಡುತ್ತಾ ಸಕಲ ಮಾನವ ಕುಲಕ್ಕೆ ಯಾವುದೇ ಫಲಾಪೇಕ್ಷೆ ಇಲ್ಲದೇ ಅನ್ನ ನೀಡುತ್ತಾ ತನ್ನ ಜೀವನವನ್ನು ಯಾವುದೇ ಆಡಂಬರವಿಲ್ಲದೇ ಸರಳ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದು, ಇಂದಿನ ಆಧುನಿಕ ಯುಗದ ತುಟ್ಟಿ ಜಗತ್ತಿನಲ್ಲಿ ಬದುಕು ನಡೆಯುವುದು ದುಸ್ತರವಾಗಿದೆ, ಅನ್ನದಾತನ ಹೆಸರಲ್ಲಿ ಚುನಾವಣೆಯಲ್ಲಿ ಗೆದ್ದು ಬಂದಿರುವ ಜನಪ್ರತಿನಿಧಿಗಳು ರೈತರ ಪರ ಧ್ವನಿ ಎತ್ತುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಸಂಗಮೇಶ ಸಗರ ಅವರು ರೈತ ಚಿಂತನಾ ಸಭೆ ಹಾಗೂ ಜಂಬಗಿ ಗ್ರಾಮ ಘಟಕ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ ಮಾತನಾಡುತ್ತಾ, ರೈತ ಸಂಘದಿಂದ ಜಿಲ್ಲೆಯಲ್ಲಿ ಅನೇಕ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತೇವೆ, ಇದರಿಂದಾಗಿ ಅನೇಕ ರೈತರಿಗೆ ಅನುಕೂಲಗಳಾಗಿ ಪ್ರತಿನಿತ್ಯ ನೂರಾರು ಜನ ರೈತರು ಸಂಗಟನೆಗೆ ಬರುತ್ತಿದ್ದಾರೆ, ಮುಂಬರುವ ಮಾರ್ಚ ತಿಂಗಳ ಒಳಗಾಗಿ ಲಕ್ಷ ಜನ ರೈತರನ್ನು ಸಂಘಟನೆಗೆ ಕರೆ ತಂದು, ಜಿಲ್ಲೆಯಲ್ಲಿ ದೊಡ್ಡ ರೈತ ಶಕ್ತಿಯಾಗಿ ಮಾಡುವ ಯೋಜನೆ ಕೂಡಾ ಮಾಡುತ್ತಿದ್ದೇವೆ, ರೈತರಿಗೆ ಸರಕಾರದ ಯೋಜನೆಗಳ ಮಾಹಿತಿ ನೀಡುದರೊಂದಿಗೆ ಹೊಸ ಹೊಸ ತಂತ್ರಾಜ್ಞಾನಗಳ ಮಾಹಿತಿ ನೀಡಿ, ಕಾರ್ಯಾಗಾರಗಳನ್ನು ಮಾಡಿ ತರಬೇತಿ ನೀಡಿ ರೈತರ ಆತ್ಮಹತ್ಯೆ ತಡೆಗಟ್ಟಿ, ರೈತರ ಆದಾಯವನ್ನು ದ್ವೀಗುಣ ಮಾಡಿ ರೈತರನ್ನು ಸ್ವಾವಲಂಬಿ ಮಾಡುವುದೇ ಸಂಘದ ಉದ್ದೇಶ ಎಂದರು.
ಈ ವೇಳೆ ವಿಜಯಪುರ ತಾಲೂಕಾ ಅಧ್ಯಕ್ಷರಾದ ಮಹದೇವಪ್ಪ ತೇಲಿ, ಹಿರಿಯರಾದ ಬಸವಂತರಾಯ ದೇಶಮುಖ, ಉಪನ್ಯಾಸಕರಾದ ಜಕರಾಯ ಪುಜಾರಿ, ಕೆ.ವಿ.ಜಿ.ಬಿ ಬ್ಯಾಂಕಿನ ಮುಖ್ಯಸ್ಥರಾದ ಸುನೀಲಕುಮಾರ ಚವ್ಹಾಣ ಮಾತನಾಡಿದರು, ಸಂಗಮೆಶ ಗುದಳೆ ನಿರೂಪಿಸಿದರು, ರಾಜಶೇಖರ ಮಾಳಿ ಸ್ವಾಗತಿಸಿದರು, ರಾಮಸಿಂಗ ರಜಪುತ ವಂದಿಸಿದರು.
ಈ ವೇಳೆ ಗುರುಬಸಯ್ಯ ಹಿರೇಮಠ ದಿವ್ಯ ಸಾನಿಧ್ಯ ವಹಿಸಿದರು, ಶಿದ್ರಾಮಯ್ಯ ಆಲಗೋಡ, ಮಲ್ಲಿಕಾರ್ಜುನ ಮುತ್ಯಾ, ಹಾಜಿಮಲಂಗ ಮುಲ್ಲಾ, ವಿಜಯಪುರ ತಾಲೂಕಾ ಉಪಾಧ್ಯಕ್ಷರಾದ ಪ್ರಕಾಶ ತೇಲಿ, ಬಸವರಾಜ ಗಾಣಗೇರ, ಅನ್ವೇಶ ಜಮಖಂಡಿ, ಬಸವರಾಜ ಮಸೂತಿ, ರಾಜಾಸಾ ನದಾಫ, ಆತ್ಮಾನಂದ ಬೈರೊಡಗಿ, ಬಸವರಾಜ ಕಕ್ಕಳಮೇಲಿ, ಶ್ರೀಶೈಲ ಮಸೂತಿ, ಮಲ್ಲಿಕಾರ್ಜುನ ಔರಸಂಘ, ಸಂಗೋಂಡ ಕಡಕೋಳ, ಮಲ್ಲಿಕಾರ್ಜುನ ಕಾಪ್ಸೆ, ಹಾಜಿಮಲಂಗ ಮುಲ್ಲಾ, ಸಂಗಮನಾಥ ದಿಂಡವಾರ ಸೇರಿದಂತೆ ಅನೇಕರು ಇದ್ದರು.

