ವಿಜಯಪುರ: ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಬಲೇಶ್ವರದಲ್ಲಿ ನಾಮಪತ್ರ ಸಲ್ಲಿಸಿದರು.
ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಅವರು, ನೀರಾವರಿ ಇಲಾಖೆ ಕಛೇರಿಗೆ ತೆರಳಿ ಚುನಾವಣಾಧಿಕಾರಿ ಮಂಜುನಾಥ ಅವರಿಗೆ ಎರಡು ಸೆಟ್ ಗಳಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ದಳವಾಯಿ, ಭೂತಾಳಸಿದ್ಧ ಒಡೆಯರ, ಈರಗೊಂಡ ಬಿರಾದಾರ, ಪುತಳಿಬಾಯಿ ರಾಮು ರಾಠೋಡ, ತಮ್ಮಣ್ಣ ಹಂಗರಗಿ, ಸಿದ್ದು ಗೌಡನವರ, ಮುತ್ತಪ್ಪ ಶಿವಣ್ಣವರ, ಸೋಮನಾಥ ಬಾಗಲಕೋಟ
ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಎಂ. ಬಿ. ಪಾಟೀಲ ಅವರು ಪತ್ನಿ ಆಶಾ, ಪುತ್ರ ಬಸನಗೌಡ ಎಂ. ಪಾಟೀಲ, ಸಹೋದರ ಸುನೀಲಗೌಡ ಪಾಟೀಲ ಮತ್ತು ಅವರ ಪತ್ನಿ ರೇಣುಕಾ ಹಾಗೂ ಸಹೋದರಿನ ಕಲ್ಪನಾ ಪಾಟೀಲ ಜೊತೆಗೂಡಿ ಬಬಲೇಶ್ವರ ಪಟ್ಟಣದಲ್ಲಿರುವ ಶ್ರೀ ಗುರುಪಾದೇಶ್ವರ ಮತ್ತು ಶ್ರೀ ಶಾಂತವೀರ ಮಹಾಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಅಲ್ಲದೇ, ಆಲಗೂರ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು ಆಶೀರ್ವಾದ ಪಡೆದರು. ಅಲ್ಲದೇ, ತಮ್ಮ ತಾಯಿ ಕಮಲಾಬಾಯಿ ಬಿ. ಪಾಟೀಲ ಅವರಿಂದ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್.ಟಿ.1 ರೈತ ಮಹಿಳೆ ಪುತಳಿಬಾಯಿ ರಾಮು ರಾಠೋಡ ಅವರು ಈ ಮುಂಚೆ ಇಚ್ಛೆಸಿದಂತೆ ಸ್ವಯಂ ಪ್ರೇರಿತರಾಗಿ ಎಂ.ಬಿ.ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಲು ಮತ್ತು ಚುನಾವಣೆ ಖರ್ಚಿಗಾಗಿ ರೂ. 50 ಸಾವಿರ ಹಣದ ಚೆಕ್ ನ್ನು ಎಂ.ಬಿ.ಪಾಟೀಲರಿಗೆ ನೀಡಿ, ಭಾರಿ ಅಂತರದಿಂದ ಗೆಲುವು ಸಾಧಿಸಲಿ ಎಂದು ಆಶೀರ್ವದಿಸಿದರು.
ಎಂ.ಬಿ.ಪಾಟೀಲ ಅವರು 6ನೇ ಬಾರಿಗೆ ಶಾಸಕರಾಗಿ ಆಯ್ಕೆ ಬಯಸಿದ್ದು, ಸರಳವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು ಗಮನ ಸೆಳೆಯಿತು.