ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ವಿಜಯಪುರ: ಇತ್ತೀಚೆಗೆ ಬಾರಿ ಸುದ್ದಿಯಲ್ಲಿರುವ ಕೊಲ್ಕತ್ತಾದ ವೈದ್ಯ ಮೇಲಾಗಿರುವ ಅತ್ಯಾಚಾರ ಘಟನೆ ನಮ್ಮೆಲ್ಲರಿಗೂ ಅತ್ಯಂತ ನೋವಿನ, ದುಃಖದ ಸಂಗತಿಯಾಗಿದೆ. ಕೊಲ್ಕತ್ತಾ ವೈದ್ಯೆಯ ಮೇಲಾಗಿರುವ ಅತ್ಯಾಚಾರ ಅತ್ಯಂತ ಭಯಾನಕರ ಇಂತಹ ಘಟನೆಗಳು ತಡೆಗಟ್ಟುವ ಕ್ರಮಗಳಾಗಬೇಕು ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.
ನಗರದ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ ಮತ್ತು ಲೈಂಗಿಕ ದೌರ್ಜನ್ಯ್ ತಡೆಗಟ್ಟುವ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಮೇಣದಬತ್ತಿ ಹಚ್ಚಿ ಕಪ್ಪು ಬಟ್ಟೆ ಧರಿಸಿ ಜಾಗೃತಿ ಮೂಡಿಸಲಾಯಿತು. ಇತ್ತೀಚೆಗೆ ಕೊಲ್ಕತ್ತಾದ ವೈದ್ಯ ಮೇಲಾಗಿರುವ ಅತ್ಯಾಚಾರ ಘಟನೆ ಇದರ ಬೆನ್ನಲ್ಲಿಯೇ ಮಹಾರಾಷ್ಟ್ರದ ಚಿಕ್ಕ ಮಕ್ಕಳ ಮೇಲೆ ಎಸಗಿರುವ ಕ್ರೂರ ಕೃತ್ಯದ ಮೇಲೆ ಮಾತನಾಡಲು ಅಸಹ್ಯವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂತಹ ಲೈಂಗಿಕ ದೌರ್ಜನ್ಯ ಘಟನೆಗಳನ್ನು ತಡೆಗಟ್ಟುವಲ್ಲಿ ಸಂಘಟನೆಗಳು ಮತ್ತು ಅಧಿಕಾರಿವರ್ಗ ಅರಿವು ಮೂಡಿಸಬೇಕು ಎಲ್ಲೆಡೆ ಮಹಿಳಾ ಸಬಲೀಕರಣ ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವ ಘಟಕಗಳನ್ನು ರಚನೆ ಮಹಿಳೆಯರಿಗೆ ಸೂಕ್ತವಾದ ವಾತಾವರಣ ಅಂದರೆ ಶೌಚಾಲಯ, ಸ್ಯಾನಿಟರಿ ಪ್ಯಾಡ್ , ಶುಚಿಯಾದ ಶೌಚಾಲಯ, ಶುದ್ಧವಾದ ಕಾರ್ಯ ಸ್ಥಳವಿರಬೇಕು. ಈ ರೀತಿಯ ಕೃತ್ಯಗಳು ಆಗುತ್ತಿರುವುದಕ್ಕೆ ಮುಖ್ಯ ಕಾರಣಗಳು ಮಹಿಳೆಯರನ್ನು ಗೌರವದಿಂದ ಕಾಣದೆ ಇರುವುದು. ಇಂತಹ ಚಟುವಟಿಕೆಗಳನ್ನು ಕೇವಲ ಪ್ರತಿಭಟನೆ ಹೋರಾಟ ಮಾಡುವುದರಿಂದ ಮಾತ್ರ ಸಾಧ್ಯವಲ್ಲ ಮೊದಲು ನಾವು ಮಹಿಳೆಯರನ್ನು ನೋಡುವ ದೃಷ್ಟಿಕೋನ ಸರಿಯಾಗಿರಬೇಕು ಅವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೊ.ಎಸ್.ಡಿ.ಪಾಟೋಲ, ಮಹಿಳಾ ಸಬಲೀಕರಣ ಘಟಕದ ಮುಖ್ಯಸ್ಥ ಪ್ರೊ.ವಿದ್ಯಾ ಪಾಟೀಲ, ಲೈಂಗಿಕ ದೌರ್ಜನ್ಯ ತಡೆಗಟ್ಟುವ ಘಟಕದ ಮುಖ್ಯಸ್ಥ ಪ್ರೊ.ಆರ್.ಡಿ.ಜೋಶಿ, ಪ್ರೊ.ಪವನ್ ಮಹೇಂದ್ರಕ್, ಡಾ.ಅಮಿತ ತೇರದಾಳೆ, ಡಾ.ಗಿರಿಜಾ ನಿಂಬಾಳ, ಪ್ರೊ.ಬಿಲಾಲ ಪಾನಿಬಂದ, ಡಾ.ತರನ್ನುಮ್ ಜಬೀನ ಖಾನ, ಪ್ರೊ.ಸಿ.ಎನ್ ಕುನ್ನೂರ, ಶ್ರೀಮತಿ ಸವಿತಾ ಕನಕರೆಡ್ಡಿ, ಪ್ರೊ.ಶ್ವೇತಾ ಸವನೂರ ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

