ಸಿಂದಗಿ ಪಟ್ಟಣದ ವಿವಿಧೆಡೆ ರಕ್ಷಾ ಬಂಧನ ಆಚರಣೆ
ಸಿಂದಗಿ: ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಬಾಂಧವ್ಯಕ್ಕೂ ಒಂದೊಂದು ಹಬ್ಬದ ನಂಟಿದೆ. ಅದರಂತೆ ಸಹೋದರ- ಸಹೋದರಿಯರ ಸಂಬಂಧ, ಪ್ರೀತಿಯ ಪ್ರತೀಕವಾದ ಹಬ್ಬ ರಕ್ಷಾ ಬಂಧನ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಹೇಳಿದರು.
ಪಟ್ಟಣದ ನಾಗೂರ ಬಡಾವಣೆಯಲ್ಲಿರುವ ವಿದ್ಯಾನಿಕೇತನ ಹಾಗೂ ಪ್ರೇರಣಾ ಪ್ರಾಥಮಿಕ ಹಾಗೂ ರಾಂಪುರ ಪಿಎ ರಸ್ತೆಯ ಪ್ರೇರಣಾ ಪಬ್ಲಿಕ್ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ರಾಖಿ ಕಟ್ಟಿ ಸಹೋದರತ್ವ ಸಾರುವ ಸಂಭ್ರಮದ ರಕ್ಷಾ ಬಂಧನ ಆಚರಿಸಿ ಮಾತನಾಡಿದ ಅವರು, ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯಂದು ಆಚರಿಸಲ್ಪಡುವ ಈ ಹಬ್ಬವನ್ನು ಸಾಕಷ್ಟು ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅದಲ್ಲದೇ ಸಮಾಜದಲ್ಲಿ ಹೆಣ್ಣುಮಕ್ಕಳ ರಕ್ಷಣೆಯನ್ನು ಪ್ರತಿಬಿಂಬಿಸುವ ರಾಖಿವಾಗಿದೆ ಎಂದರು.
ಈ ವೇಳೆ ಸಂಸ್ಥೆಯ ಪ್ರೇರಣಾ ಪ್ರೌಢಶಾಲೆಯ ಮುಖ್ಯಗುರುಮಾತೆ ಎಸ್.ಬಿ.ಅಸ್ಕಿ, ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ, ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಸತೀಶ ಕುಲಕರ್ಣಿ, ಶಿಲ್ಪಾ ಪಾಟೀಲ ಸೇರಿದಂತೆ ಶಾಲೆಯ ಬೋಧಕ-ಬೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ಶ್ರೀಗುರು ಕೃಪಾ ಶಾಲೆ:
ಸಿಂದಗಿ ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ರಾಖಿ ಕಟ್ಟಿ ಸಹೋದರತ್ವ ಸಾರುವ ಸಂಭ್ರಮದ ರಕ್ಷಾ ಬಂಧನ ಆಚರಿಸಿದರು.
ಸಹೋದರತ್ವ ಸಾರುವ ರಕ್ಷಾ ಬಂಧನ ಶತಮಾನಗಳ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿದೆ ಎಂದು ಶಾಲೆಯ ಮುಖ್ಯಗುರುಮಾತೆ ಹೇಮಾ ಪೊದ್ದಾರ ಹೇಳಿದರು.
ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಳೆಯಲ್ಲಿ ವಿದ್ಯಾರ್ಥಿಗಳು ರಾಖಿ ಕಟ್ಟಿ ಸಹೋದರತ್ವ ಸಾರುವ ಸಂಭ್ರಮದ ರಕ್ಷಾ ಬಂಧನ ಆಚರಿಸಿ ಮಾತನಾಡಿದ ಅವರು, ರಕ್ಷಾ ಬಂಧನ ಹಬ್ಬವು ಸಹೋದರ ಸಹೋದರಿಯರ ನಡುವಿನ ಪವಿತ್ರ ಸಬಂಧವನ್ನು ಸಂಕೇತಿಸುವ ಹಬ್ಬವಾಗಿದೆ ಎಂದರು.
ಈ ವೇಳೆ ಶೃತಿ ಕುಲಕರ್ಣಿ, ಪ್ರಸನ್ನ ಕುಲಕರ್ಣಿ, ಹರೀಶ ಪೊದ್ದಾರ, ಸಂಸ್ಥೆಯ ಆಡಳಿತಾಧಿಕಾರಿ ಎಚ್.ಜಿ.ಪೊದ್ದಾರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಜ್ಞಾನ ಭಾರತಿ ಶಾಲೆ:
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಸೋಮವಾರದಂದು ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಾನಿಧ್ಯವನ್ನು ನಾಗರತ್ನ ರಾಜಯೋಗಿ ವೀರಾಜೇಂದ್ರ ಶ್ರೀಗಳು ವಹಿಸಿ ಮಾತನಾಡಿದರು.
ಈ ವೇಳೆ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸತೀಶ ಹಿರೇಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರವಿಂದ ಡೋಣುರ, ಪತ್ರಕರ್ತ ಸುದರ್ಶನ ಜಂಗಣ್ಣಿ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಉದ್ಯಮಿ ಪ್ರಶಾಂತ ಬಿರಾದಾರ, ಶಿಕ್ಷಕ ಬುಳ್ಳಪ್ಪ ಡಿ, ಮಾಳು ಹೊಸುರ, ಪ್ರೇಮಾ ನಾಯಕ್, ಜಗದೀಶ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ರಕ್ಷಾ ಬಂಧನದಲ್ಲಿ ಭಾಗವಹಿಸಿದ್ದರು.

