ಸಿಂದಗಿ: ಕಾಲದ ಕದಡದ ನೆನಪುಗಳ ಪ್ರತಿಬಿಂಬವೇ ಭಾವಚಿತ್ರಗಳು. ಆ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಲು ನೀಡುವ ಸಿಹಿ ನೆನಪುಗಳೇ ಭಾವಚಿತ್ರ ಎಂದು ಛಾಯಾಗ್ರಾಹಕ ರವಿ ಕುಂಟೋಜಿ ಹೇಳಿದರು.
ಪಟ್ಟಣದ ಸಂಗಮೇಶ್ವರ ದೇವಾಸ್ಥಾನದಲ್ಲಿ ಸಿಂದಗಿ ಛಾಯಾಗ್ರಾಹಕರ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನವನ್ನು ಆಚರಣೆ ಮಾಡಿ ಮಾತನಾಡಿದ ಅವರು, ಈಗ ಪೋಟೋ ತೆಗೆಯಬೇಕೆಂದರೆ ಅತಿ ಸುಲಭದ ಕಾರ್ಯ. ಕೈಯಲ್ಲಿದ್ದ ಸ್ಮಾರ್ಟ್ ಫೋನ್ ಹಿಡಿದು ನೂರಾರು ಪೋಟೋ ತೆಗೆಯಬಹುದು. ಆದರೆ ಹಿಂದೊಮ್ಮೆ ಪೋಟೋ ತೆಗೆಯಿಸಿಕೊಳ್ಳುವುದು ಹಬ್ಬದ ಸಂಭ್ರಮ ಎಂದರು.
ಈ ವೇಳೆ ಛಾಯಾಗ್ರಾಹಕರಾದ ಸಂದೀಪ ಪಾಟೀಲ, ಗುರು ಚಬನೂರ, ಅಲೋಕ ರೋಡಗಿ, ಗಂಗಾಧರ ಬಡಿಗೇರ, ಪರಶುರಾಮ ಗುಳ್ಳೂರು, ಶಂಕರ ಬಮ್ಮನಹಳ್ಳಿ, ಪುಟ್ಟು ಸಂಗಮ, ರಾಜೂ ಯಂಕಂಚಿ, ಹಾಜಿಲಾಲ, ವಿಶ್ವನಾಥ ಹಿರೇಮಠ, ಕೇದಾರ ಕುಂಟೋಜಿ, ಸುನೀಲ ಅಮರಗೊಂಡ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

