ವಿಜಯಪುರ: ಸ್ವಾತಂತ್ರ‍್ಯ ಹೋರಾಟ ಅಖಂಡ ಭಾರತದ ಕಲ್ಪನೆ ತಂದುಕೊಟ್ಟಿದ್ದು, ಸ್ವಾತಂತ್ರ‍್ಯ ಕೇವಲ ಅಹಿಂಸೆಯಿಂದ ಬಂದದ್ದಲ್ಲ, ಶಸ್ತ್ರಾಸ್ತ್ರ ಹೋರಾಟಗಳ ಫಲ. ಅದುವೇ ನಮ್ಮಯ ಸ್ವಾತಂತ್ರ‍್ಯ ಎಂದು ವಿಶ್ರಾಂತ ಉಪನಿರ್ದೇಶಕ ಎಸ್.ಎಂ ಕಣಬೂರ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಸಾಪ ಜಿಲ್ಲಾ, ತಾಲೂಕಾ ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಜರುಗಿದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಚಿಂತನಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಇಂದಿನ ರಾಜಕೀಯ ಕೆಲವರ ಸ್ವತ್ತಾಗಿದ್ದು, ಇಂದಿನ ಶಿಕ್ಷಣ, ಆರೋಗ್ಯ ಕೇವಲ ಉಳ್ಳವರ ಪಾಲಾಗಿದ್ದು, ಮುಂಬರುವ ಸ್ವಾತಂತ್ರ‍್ಯದ ಶತಮಾನೋತ್ಸವದ ಒಳಗಾಗಿ ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸೌಲಭ್ಯಗಳು ಎಲ್ಲರಿಗೂ ಸಿಗುವಂತಾಗಬೇಕು ಎಂದರು.
“ಸ್ವಾತಂತ್ರ‍್ಯದ ಅಮೃತ ಮಹೋತ್ಸವ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ ಮಾಧವ ಗುಡಿಯವರು ಮಾತನಾಡುತ್ತಾ, ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕ ಸವಿನೆನಪಿಗಾಗಿ ಹಾಗೂ ದೇಶದ ಸ್ವಾತಂತ್ರ‍್ಯ ಹೋರಾಟಕ್ಕಾಗಿ ತ್ಯಾಗ ಬಲಿದಾನಗಳನ್ನು ನೀಡಿದ ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸುವ ಮೂಲಕ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಮಹತ್ವವನ್ನು ತಿಳಿಸುತ್ತಾ, “ಹರ್ ಘರ್ ತಿರಂಗಾ” ಎಂಬ ವಿಶೇಷ ಕಾರ್ಯಕ್ರಮ ಎಲ್ಲರ ಮನೆಯ ಮಹಡಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶಪ್ರೇಮವನ್ನು ಮೆರೆದ ಸಂಗತಿ ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದ್ದು, ನಾವೆಲ್ಲರೂ ಇಂದು ಸ್ವಾತಂತ್ರ‍್ಯ ಹೋರಾಟಗಾರರ ಜೀವನ ಹಾಗೂ ಸಾಧನೆಗಳನ್ನು ಅರ್ಥೈಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಮುಂದಿನ ಯುವ ಪೀಳಿಗೆಗೆ ತಿಳಿಸಿ ಕೊಡಬೇಕಾದದ್ದು ಅತ್ಯಂತ ಅವಶ್ಯಕ ಎಂದರು. ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸರಕಾರಿ ಬಾಲಕಿಯರ ಪ.ಪೂ ಕಾಲೇಜಿನ ಉಪನ್ಯಾಸಕ ಆರ್.ಸಿ ಹಿರೇಮಠ ಮಾತನಾಡುತ್ತಾ ಸ್ವಾತಂತ್ರ‍್ಯದ ಹೋರಾಟ ಪ್ರಾರಂಭವಾಗಿದ್ದು ಕರ್ನಾಟಕದಿಂದ ಎಂಬುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆ ಎಂದರು. ಕರ್ನಾಟಕದಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟದ ಮೇಲೆ ಬಾಲಗಂಗಾಧರ ತಿಲಕರ ಪ್ರಭಾವ ವಿಶೇಷವಾಗಿತ್ತು ಎಂದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ಅವರು ವಹಿಸಿದ್ದು ನಾಡಿನ ಹೆಮ್ಮೆಯ ವಿಷಯ ಎಂದರು. ಗಂಗಾಧರರಾವ್ ದೇಶಪಾಂಡೆ, ಆರ್ ಆರ್ ದಿವಾಕರ್, ಕೌಜಲಗಿ ಹನುಮಂತರಾಯರು ಶ್ರೀನಿವಾಸರಾಯ ಕೌಜಲಗಿ, ಮುರಿಗೆಪ್ಪ ಸುಗಂಧಿ, ಉಮಾದೇವಿ ಕುಂದಾಪುರ, ಡಾ ಎನ್.ಎಸ್ ಹಡಿ೯ಕರ್, ಮುಂತಾದವರು ನಾಡಿನ ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದು ಕನ್ನಡಿಗರಾದ ನಮಗೆ ಹೆಮ್ಮೆ ಎಂದರು.
ಜಿಲ್ಲಾಧ್ಯಕ್ಷ ಹಾಸಿಂಪಿರ್ ವಾಲಿಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀಮತಿ ಕಮಲಾ ಮುರಾಳ, ಹುಸೇನ್ ಬಾಗಾಯತ್, ವಿ.ಜಿ ಸಿಂಪಿ, ಲಕ್ಷ್ಮಿ ಅವಟಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಅರ್ಜುನ ಲಮಾಣಿ, ಅಶೋಕ ಚನಬಸಗೋಳ, ಎಸ್ ಜಿ ಮುಚ್ಚಂಡಿ, ದತ್ತಾತ್ರೇಯ ವಡವಡಗಿ, ಎಂ.ಡಿ ಪಾಟೀಲ ( ಗಾಂಧಿಗೌಡರು) ಲಕ್ಷ್ಮಣ ಹಿರೇಕುರುಬರ, ಎಸ್ ಎಸ್ ಹಾವಿನಾಳ, ಸಿದ್ದು ಹತ್ತಳ್ಳಿ ಮಹಿಬೂಬ್ ಹುಸೇನ್ ಹಳ್ಳೂರ ಇವರೆಲ್ಲರನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವಿಸಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಮೆಹತಾಬ ಕಾಗವಾಡ ಪ್ರಾರ್ಥಿಸಿ ಸ್ವಾಗತಿಸಿದರು,
ವಿಜಯಪುರ ತಾಲೂಕ ಕಸಾಪ ಅಧ್ಯಕ್ಷ ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಮಮತಾ ಮುಳಸಾವಳಗಿ ನಿರೂಪಿಸಿದರು, ಮಹದೇವಸ್ವಾಮಿ ನಾಗಠಾಣ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ ಜಿ.ಡಿ ಕೊಟ್ನಾಳ, ಸುಭಾಷ್ ಕನ್ನೂರ, ರವಿ ಕಿತ್ತೂರ, ವಿಠಲರಾವ ಖಾಡೆ, ಅಹಮದ್ ವಾಲಿಕಾರ, ರಾಜೇಸಾಬ ಶಿವನಗುತ್ತಿ, ಜಿ ಎಸ್ ಬಳ್ಳೂರ, ಹಣಮಂತ ಕೊಣದಿ, ಅಲ್ಲಾಭಕ್ಷ ವಾಲಿಕಾರ, ಧರೆಪ್ಪ ಬಿರಾದಾರ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಶಾಂತಾ ವಿಭೂತಿ, ಎಸ್ ಎಸ್ ಹಿರೇಕುರುಬರ, ನಾನಾಗೌಡ ಪಾಟೀಲ, ಬಿ.ಎಸ್ ಮಠ, ಶ್ರೀಕಾಂತ ನಾಡಗೌಡ, ಉಮೇಶ ಕಟಬರ, ಅಮರೇಶ ವಗ್ಗರ, ಸಿದ್ರಾಮಪ್ಪ ಜಂಗಮಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

