ಅಫಜಲಪುರ: ಕೊನೆ ಉಸಿರಿನ ತನಕ ರಣಾಂಗಣದಲ್ಲಿಹೋರಾಟ ಮಾಡಿ ತನ್ನ ರಾಜ್ಯ ಮತ್ತು ಜನರನ್ನು ಕಾಪಾಡಿದ ಧೀರ ರಜಪೂತ ಅರಸ ಮಹಾರಾಣಾ ಪ್ರತಾಪ್ ಚರಿತ್ರೆ ಎಲ್ಲರಿಗೂ ತಿಳಿಯುವಂತಾಗಬೇಕೆಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ಸಿಂಗ್ ಹೇಳಿದರು.
ಅವರು ತಾಲೂಕಿನ ದಣ್ಣೂರ ಗ್ರಾಮದಲ್ಲಿ ರಜಪೂತ ಸಮಾಜದವರು ನಿರ್ಮಿಸಿದ ಮಹಾರಾಣಾ ಪ್ರತಾಪ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡುತ್ತಾ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಪೈಕಿ ಮಹಾರಾಣಾ ಪ್ರತಾಪ್ ಸಿಂಹ ಬಹಳ ಶ್ರೇಷ್ಠ ಮತ್ತು ಅಗ್ರಗಣ್ಯ ಸ್ಥಾನದಲ್ಲಿದ್ದಾರೆ. ಅವರ ಆದರ್ಶಗಳ ಪಾಲನೆ ಮಾಡುವ ಮೂಲಕ ಅವರನ್ನು ಸದಾ ಸ್ಮರಿಸುವ ಕೆಲಸ ಆಗಬೇಕೆಂದು ನಮ್ಮ ಸರ್ಕಾರ ಸಮಾಜದ ಹಿತ ಕಾಯುವ ಕೆಲಸ ಮಾಡುತ್ತಿದೆ. ರಜಪೂತ ಸಮಾಜಕ್ಕೆ ಬೇಕಾದ ಸೌಲಭ್ಯಗಳಿಗಾಗಿ ಸಮಾಜಬಾಂಧವರು ಮುಖ್ಯಮಂತ್ರಿಗಳ ಬಳಿ ನಿಯೋಗ ಬಂದರೆ ಸೌಲಭ್ಯಗಳ ಈಡೇರಿಕೆಗಾಗಿ ಕೆಲಸ ಮಾಡಲಾಗುತ್ತದೆ ಎಂದರು.
ಶಾಸಕ ಎಂ.ವೈ ಪಾಟೀಲ ಮಾತನಾಡುತ್ತಾ, ತಾಲೂಕಿನಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕೂಡ ಇರುವಷ್ಟು ಜನ ಒಗ್ಗಟ್ಟಿನಿಂದ ಇದ್ದು ತಮ್ಮತನ ತೋರಿರುವ ರಜಪೂತ ಸಮಾಜ ಎಲ್ಲರಿಗೂ ಮಾದರಿಯಾಗಿದ್ದೀರಿ. ನಿಮ್ಮ ಸಮಾಜದ ಏಳಿಗೆಗೆ ನಾನು ಬದ್ದನಾಗಿದ್ದೇನೆ. ಸಮಾಜದ ಬೇಡಿಕೆಗಳಿಗೆ ಸ್ಪಂದಿಸಿ ಅವುಗಳಿಗೆ ಹಂತಹಂತವಾಗಿ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಮಾಜಿ ಜಿ ಪಂ ಅಧ್ಯಕ್ಷ ನಿತೀನ ಗುತ್ತೇದಾರ, ಸಮಾಜವಾದಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ, ರಜಪೂತ ಸಮಾಜದ ರಾಜ್ಯಾಧ್ಯಕ್ಷ ಬಾಲಾಸಿಂಗ್, ಅನ್ನಪೂರ್ಣಸಿಂಗ್, ನರಸಿಂಗಪ್ರಸಾದ ತಿವಾರಿ, ಶಂಕರಸಿಂಗ ರಜಪೂತ, ಭವಾನಿಸಿಂಗ ಠಾಕೂರ, ಈಶ್ವರಸಿಂಗ ಠಾಕೂರ, ಅನಿತಾಸಿಂಗ ಠಾಕೂರ, ಹನುಮಾನಸಿಂಗ ರಜಪೂತ, ಸಂಜೀವಸಿಂಗ ಠಾಕೂರ, ಕಿಶೋರಸಿಂಗ, ಯಲ್ಲಣ್ಣಗೌಡ ಪಾಟೀಲ, ಶಂಕರಸಿಂಗ ಕಣ್ಣೂರ, ಶಿವಶರಣಪ್ಪ ಹಿರಾಪೂರ, ವಿಜುಗೌಡ ಬಿರಾದಾರ, ದಶರಥಸಿಂಗ ಠಾಕೂರ, ಪೃತ್ವಿರಾಜ ತಿವಾರಿ, ಜಗದೀಶ ಠಾಕೂರ, ಶಂಕರಸಿಂಗ ಹಳೆಮನಿ, ಅಮರಸಿಂಗ ರಜಪೂತ ಸೇರಿದಂತೆ ಗ್ರಾಮಸ್ಥರು ಇದ್ದರು. ವಿಜಯಶ್ರೀ ಹಿರೇಮಠ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

