Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ದೂಳಿನಿಂದ ಮುಕ್ತವಾದ ನಗರ ವಿಜಯಪುರ :ಶಾಸಕ ಯತ್ನಾಳ
(ರಾಜ್ಯ ) ಜಿಲ್ಲೆ

ದೂಳಿನಿಂದ ಮುಕ್ತವಾದ ನಗರ ವಿಜಯಪುರ :ಶಾಸಕ ಯತ್ನಾಳ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ದೂಳಿನಿಂದ ಮುಕ್ತವಾದ ನಗರ ವಿಜಯಪುರ ನಗರ ಎಂಬುವುದು ಹೆಮ್ಮೆಯ ವಿಷಯ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ವಾರ್ಡ ನಂ.೩೫ ರ ವ್ಯಾಪ್ತಿಯ ಮಹಾತ್ಮ ಗಾಂಧಿ ಕಾಲೊನಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಜೂರಾದ ರೂ.೪೮೨.೯೦ ಲಕ್ಷ ಮೊತ್ತದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನರ ಸಹಕಾರದಿಂದ ವಿಜಯಪುರ ನಗರ ನಿರೀಕ್ಷೆ ಮೀರಿ ಅಭಿವೃದ್ಧಿ ಕಂಡಿದ್ದು, ದೂಳಿನಿಂದ ಮುಕ್ತವಾಗಿ, ದೇಶದಲ್ಲಿ ಒಳ್ಳೆಯ ಗಾಳಿ ಬಿಸುವ ನಗರಗಳ ಪಟ್ಟಿಯಲ್ಲಿ ೬ನೇ ಸ್ಥಾನದಲ್ಲಿರುವುದೇ ಸಾಕ್ಷಿ ಎಂದರು.
ಬಡ ಮಕ್ಕಳ ಅನುಕೂಲಕ್ಕಾಗಿ ಸುಮಾರು ಸುಮಾರು ರೂ. ೫ ಕೋಟಿ ಖರ್ಚು ಮಾಡಿ, ಅತ್ಯುತ್ತಮವಾದ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಇದು ನಿಮ್ಮ ಆಸ್ತಿಯಾಗಿದ್ದು, ಹಾಳು ಮಾಡದೆ ನಿಮ್ಮ ಮನೆಯಷ್ಟೇ ಸರಿಯಾಗಿ ಸ್ವಚ್ಛತೆಯೊಂದಿಗೆ ವಾಸ ಮಾಡಬೇಕು. ನೀವು ಹೋದ ಮೇಲೆ ಬೇರೆ ಬಡ ಮಕ್ಕಳಿಗೂ ಅನುಕೂಲ ಆಗಬೇಕು ಎಂದು ಕಿವಿಮಾತು ಹೇಳಿದರು.
ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ತಮ್ಮ ಜನಪ್ರತಿನಿಧಿ ಹೇಗಿರಬೇಕು, ಯಾರು ನಮ್ಮ ಹಿತ ಕಾಪಾಡುತ್ತಾರೆ, ಅಭಿವೃದ್ಧಿ ಕೆಲಸ ಮಾಡುತ್ತಾರೆಯೇ ಅಂತವರನ್ನು ಆಯ್ಕೆ ಮಾಡಲು ಮತ ಹಾಕಲು ನಿರ್ಧರಿಸಿದರೆ, ನಿಶ್ಚಿತವಾಗಿಯೂ ಭಾರತ ದೊಡ್ಡ ಶಕ್ತಿಯಾಗಿ ನಿಲ್ಲುತ್ತದೆ. ಪಾಕಿಸ್ತಾನದಲ್ಲೂ ಸಹ ಮೋದಿಯಂತಹ ಪ್ರಧಾನಿ ಬೇಕು ಎನ್ನುತ್ತಾರೆ. ಜಗತ್ತಿನಲ್ಲಿ ನಮ್ಮ ದೇಶಕ್ಕೆ ಬಹಳ ಗೌರವ ಬರುವಂತೆ ಮಾಡಿದ್ದು, ಜಗದ್ಗುರು ಆಗುವ ನಿಟ್ಟಿನಲ್ಲಿ ಭಾರತ ಸಾಗಿದೆ ಎಂದರು.
ಇದೇ ವೇಳೆ ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಲೊನಿಯ ನಿವಾಸಿಗಳ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಕುರಿಯವರ, ಪ್ರೇಮಾನಂದ ಬಿರಾದಾರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಮಾನವರ, ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಪ್ಪ ಆಶಾಪೂರ, ಗುತ್ತಿಗೆದಾರ ಶಂಕರಗೌಡ ಹೊಸಮನಿ ಸೇರಿದಂತೆ ಮತ್ತಿತರರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!
    In (ರಾಜ್ಯ ) ಜಿಲ್ಲೆ
  • ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಎತ್ತರ ಹೆಚ್ಚಳ ೩ ವರ್ಷದಲ್ಲಿ ಪೂರ್ಣಗೊಳಿಸಲು ಬದ್ಧ
    In (ರಾಜ್ಯ ) ಜಿಲ್ಲೆ
  • ೧ ರಿಂದ ೫ ವರೆಗೆ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಲಿ
    In (ರಾಜ್ಯ ) ಜಿಲ್ಲೆ
  • 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹ.ಮ.ಪೂಜಾರ
    In ವಿಶೇಷ ಲೇಖನ
  • ಶೇ.೭೭.೬೮ ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣ
    In (ರಾಜ್ಯ ) ಜಿಲ್ಲೆ
  • ಮಾದಕ ವಸ್ತುಗಳಿಂದ ಶರೀರದ ಮೇಲೆ ನೇರ ಪರಿಣಾಮ :ಪಿಎಸೈ ಸಚೀನ
    In (ರಾಜ್ಯ ) ಜಿಲ್ಲೆ
  • ಗ್ರಾಮದೇವತಾ ಜಾತ್ರಾಮಹೋತ್ಸವದಲ್ಲಿ ಗೀಗೀ ಪದಗಳ ಸಂಭ್ರಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.