Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಚಿಕ್ಕಪಡಸಲಗಿಯಲ್ಲಿ ಮಾರುತಿ ದೇವರ ನೀರಓಕುಳಿ ಸಂಪನ್ನ

ಸಾಮಾಜಿಕ ಸಮಾನತೆ, ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದ ಜ್ಯೋತಿಬಾ ಫುಲೆ

ಏ.೧೫ ರಿಂದ ವಿಜಯಪುರದಲ್ಲಿ ಚಿತ್ರಕಲಾ ಪ್ರದರ್ಶನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಠಾಧಿಪತಿಗಳಿಗೆ ಮನೋನಿಗ್ರಹ ಮೂಲವಾಗಬೇಕು
(ರಾಜ್ಯ ) ಜಿಲ್ಲೆ

ಮಠಾಧಿಪತಿಗಳಿಗೆ ಮನೋನಿಗ್ರಹ ಮೂಲವಾಗಬೇಕು

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಸಂತ ಮಹಾಂತರ ಬದುಕು ಉರಿಯುವ ಕರ್ಪುರದಂತಾಗಬೇಕು. ಮಠಾಧಿಪತಿಗಳಿಗೆ ಮನೋನಿಗ್ರಹ ಮೂಲವಾಗಬೇಕು. ಜಪ ತಪ ಮೌನ ಅನುಷ್ಠಾನಗಳು ಮನುಷ್ಯನನ್ನು ದೈವತ್ವಕ್ಕೇರಿಸುತ್ತವೆ. ಆಗ ಅಧ್ಯಾತ್ಮದ ಹಾದಿ ಸುಗಮವಾಗುತ್ತದೆ ಎಂದು ಗುಣದಾಳ ಹಿರೇಮಠದ ಪೂಜ್ಯ ಡಾ ವಿವೇಕಾನಂದ ದೇವರು ಅಭಿಪ್ರಾಯಪಟ್ಟರು.
ಬಬಲೇಶ್ವರ ತಾಲೂಕಿನ ಹರಳಯ್ಯನಗುಂಡ ಕ್ಷೇತ್ರದಲ್ಲಿ ಚಿಕ್ಕಗಲಗಲಿಯ ಸಾಯಿಬಾಬಾ ಆಶ್ರಮದ ಪೀಠಾಧಿಪತಿ ಶರಣ ಚಮನಸಾಬ ಬಾಬಾ ಕೈಕೊಂಡ ಮೌನ ಅನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಮಂತ್ರಘೋಷ ನೆರವೇರಿಸಿ ಮಾತನಾಡುತ್ತಾ , ಅನುಷ್ಠಾನಕ್ಕೆ ದಿವ್ಯ ಶಕ್ತಿ ಇದೆ. ಕಠಿಣ ಪರಿಶ್ರಮಕ್ಕೆ ಕರ್ತೃತ್ವ ಶಕ್ತಿ ಪ್ರಾಪ್ತಿಯಾಗುತ್ತದೆ. ಈ ಶಕ್ತಿ ಸಮಾಜಕ್ಕೆ ವಿನಿಯೋಗವಾಗಲಿ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಚಿಕ್ಕಲಕಿ ಭಗೀರಥ ಪೀಠದ ಪೂಜ್ಯ ಶಿವಾನಂದ ಸ್ವಾಮೀಜಿ, ಪ್ರಪಂಚದಲ್ಲಿದ್ದು ಪಾರಮಾರ್ಥ ಸಾಧಿಸುವುದು ಸಾಮಾನ್ಯ ಕೆಲಸವಲ್ಲ. ಸತ್ಯ ಶುದ್ಧ ಬದುಕು ಸಾಧಿಸುತ್ತ ಅಧ್ಯಾತ್ಮವಾದಿಯಾಗಿ ಭಾವೈಕ್ಯದ ಸಂತನೆನಿಸಿಕೊಂಡಿರುವ ಚಮನಸಾಬ ಬಾಬಾರು, ನೊಂದು ಬೆಂದವರ ಕಣ್ಣೀರೊರೆಸುವ ಕರುಣಾಮಯಿಯಾಗಿದ್ದಾರೆ. ಅಧ್ಯಾತ್ಮವಾದಿಗಳಿಗೆ ಆದರ್ಶರಾಗಿದ್ದಾರೆ. ಈ ಅನುಷ್ಠಾನದಿಂದ ಸಮಾಜಕ್ಕೆ ಒಳಿತಾಗಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿರಸಂಗಿ ಲಿಂಗರಾಜ ದೇಸಾಯಿ ಟ್ರಸ್ಟಿ ಜಿ ಪಂ ಮಾಜಿ ಸದಸ್ಯ ಬಾಪುಗೌಡ ಪಾಟೀಲ (ಶೇಗುಣಸಿ) ಉತ್ತರ ಕರ್ನಾಟಕದಲ್ಲಿ ಮಠಗಳು ಸದೃಢವಾಗಿಲ್ಲ. ಭಕ್ತರು ತನು – ಮನ – ಧನಗಳಿಂದ ಮಠಗಳನ್ನು ಕಟ್ಟಬೇಕು. ತನ್ಮೂಲಕ ಮಠಾಧಿಪತಿಗಳು ಸಮಾಜ ಸುಧಾರಣೆಗೆ ಕಂಕಣಬದ್ಧರಾಗಿ ದುಡಿಯಬೇಕು. ಎಂದು ಹೇಳಿದರು.
ಪ್ರವಚನಕಾರ ಮೃತ್ಯುಂಜಯ ಹಿರೇಮಠ , ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ( ಪಡಗಾನೂರು) ಮಕ್ತುಮಸಾಬ ಮಂಟೂರ ಮಾತನಾಡಿದರು.
ವೇದಿಕೆಯಲ್ಲಿ ಚಿಕ್ಕಹಂಚಿನಾಳದ ಪೂಜ್ಯ ಶಾಂತಾನಂದ ಸ್ವಾಮೀಜಿ, ಹರಳಯ್ಯಗುಂಡದ ಸ್ವಾಮೀಜಿ, ಬಸಯ್ಯಸ್ವಾಮಿ ಹೀರೆಮಠ (ಬಿದರಿ), ಪಾಂಡು ಬಿರಾದಾರ, ರಾಜೇಸಾಬ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಸಾಯಿಬಾಬಾ ಆಶ್ರಮದ ಯಾಸಿನ ಬಾಬಾ ಸ್ವಾಗತಿಸಿದರು. ರಾಚಯ್ಯಸ್ವಾಮಿ ಪೂಜಾರಿ ನಿರೂಪಿಸಿದರು. ಸಂಗಣ್ಣ ಮುದ್ನೂರ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಚಿಕ್ಕಪಡಸಲಗಿಯಲ್ಲಿ ಮಾರುತಿ ದೇವರ ನೀರಓಕುಳಿ ಸಂಪನ್ನ

ಸಾಮಾಜಿಕ ಸಮಾನತೆ, ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದ ಜ್ಯೋತಿಬಾ ಫುಲೆ

ಏ.೧೫ ರಿಂದ ವಿಜಯಪುರದಲ್ಲಿ ಚಿತ್ರಕಲಾ ಪ್ರದರ್ಶನ

ಎಂಎಚ್ಎಂ ಪಪೂ ಕಾಲೇಜಿಗೆ ಶೇ,98.77 ಅಮೋಘ ಫಲಿತಾಂಶ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಚಿಕ್ಕಪಡಸಲಗಿಯಲ್ಲಿ ಮಾರುತಿ ದೇವರ ನೀರಓಕುಳಿ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ಸಮಾನತೆ, ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದ ಜ್ಯೋತಿಬಾ ಫುಲೆ
    In (ರಾಜ್ಯ ) ಜಿಲ್ಲೆ
  • ಏ.೧೫ ರಿಂದ ವಿಜಯಪುರದಲ್ಲಿ ಚಿತ್ರಕಲಾ ಪ್ರದರ್ಶನ
    In (ರಾಜ್ಯ ) ಜಿಲ್ಲೆ
  • ಎಂಎಚ್ಎಂ ಪಪೂ ಕಾಲೇಜಿಗೆ ಶೇ,98.77 ಅಮೋಘ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೊಂದಲದ ವ್ಯವಸ್ಥೆ ನಿರ್ಮಾಣ
    In (ರಾಜ್ಯ ) ಜಿಲ್ಲೆ
  • ಬ್ಯಾಂಕ್‌ಗಳಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಿಸಲು ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಬಡತನದಲ್ಲಿ ಅರಳಿದ ಪ್ರತಿಭೆ ನೀಲಮ್ಮ ಬಿಸನಾಳ
    In (ರಾಜ್ಯ ) ಜಿಲ್ಲೆ
  • ೪೨ ಸಾವಿರ ರೂ ಮೌಲ್ಯದ ೧೪ ಕ್ಲಿಂಟಲ್ ಅಕ್ಕಿವಶ
    In (ರಾಜ್ಯ ) ಜಿಲ್ಲೆ
  • ನಿರಂತರ ರಕ್ತದಾನದಿಂದ ಆರೋಗ್ಯ ಉತ್ತಮ :ಡಾ.ಶಿವಾನಂದ
    In (ರಾಜ್ಯ ) ಜಿಲ್ಲೆ
  • ರಾಜ್ಯದಲ್ಲಿ ಸಿದ್ದಸಿರಿ ಸೌಹಾರ್ಧ ನಂ.೧ ಸ್ಥಾನ :ಶಾಸಕ ಯತ್ನಾಳ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.