ದೇವರಹಿಪ್ಪರಗಿ: ಕಾಂಗ್ರೆಸ್ ಪಕ್ಷದ ಎಲ್ಲ ಆಕಾಂಕ್ಷಿಗಳ ಬೆಂಬಲ ಹಾಗೂ ಸಹಕಾರದಿಂದ ಬರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಸುಣಗಾರ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವರಹಿಪ್ಪರಗಿ ಮತಕ್ಷೇತ್ರದ ಆಕಾಂಕ್ಷಿಗಳಲ್ಲಿ ಯಾವುದೇ ಭಿನ್ನಮತವಿಲ್ಲ. ಇದನ್ನು ನಾವೆಲ್ಲ ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಈಗ ನನಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸ್ಪರ್ಧೆಗೆ ಅವಕಾಶ ದೊರೆತಿದೆ. ಈ ಅವಕಾಶವನ್ನು ನಾವು ಸದುಪಯೋಗ ಪಡೆಸಿಕೊಳ್ಳುತ್ತೇವೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ನೀಡಿದ ಭ್ರಷ್ಟಾಚಾರರಹಿತ ಆಡಳಿತ ಹಾಗೂ ಜನಪ್ರೀಯ ಯೋಜನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಪ್ರಣಾಳಿಕೆಗಳು, ಗ್ಯಾರಂಟಿ ಕಾರ್ಡ ಭರವಸೆಗಳು ಜನರನ್ನು ಸೆಳೆಯುವಲ್ಲಿ ಸಫಲವಾಗಿವೆ ಎಂದು ಹೇಳುತ್ತಾ, ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಾಗುವುದು. ನಂತರ ದಿ:೧೯ ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ನಾಯಕರು ಹಾಗೂ ಕ್ಷೇತ್ರದ ಎಲ್ಲ ಆಕಾಂಕ್ಷಿಗಳ ಉಪಸ್ಥಿತಿಯಲ್ಲಿ ಮತ್ತೋಮ್ಮೆ ನಾಮಪತ್ರ ಸಲ್ಲಿಸಲಾಗುವುದು. ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಪ್ರತಿಸ್ಪರ್ಧಿಯಲ್ಲ. ಎಲ್ಲ ನಾಯಕರ ನಾಯಕತ್ವದಡಿ ಪ್ರಚಾರ ಕೈಗೊಂಡು ಚುನಾವಣೆಯಲ್ಲಿ ನಿಚ್ಚಳವಾಗಿ ಗೆಲ್ಲುವ ವಿಶ್ವಾಸವಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಮಾತ್ರ ಎದುರಾಳಿ. ಬಿಜೆಪಿಯದ್ದು ಮೂರನೇ ಸ್ಥಾನ. ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಬೇಸತ್ತು ಪ್ರಮುಖರೆಲ್ಲ ಕಾಂಗ್ರೆಸ್ ಪಕ್ಷದತ್ತ ಧಾವಿಸುತ್ತಿರುವುದು ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಏರುವ ದ್ಯೋತಕವಾಗಿದೆ. ಜೊತೆಗೆ ಕಾಂಗ್ರೆಸ್ಸಿನ ಭರವಸೆಗಳು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿವೆ ಎಂದರು.
ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಪಾಟೀಲ(ಸಾತಿಹಾಳ), ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಿಂಗನಗೌಡ ಪಾಟೀಲ(ಹರನಾಳ), ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ನಾಯಿಕ್, ಅಶೋಕಗೌಡ ಪಾಟೀಲ, ಎಸ್.ವ್ಹಿ.ಪಾಟೀಲ, ಪರಶುರಾಮ ದಿಂಡವಾರ, ರಾಜಕುಮಾರ ಸಿಂದಗೇರಿ, ಪ್ರಕಾಶ ಗುಡಿಮನಿ, ಗುರುರಾಜ್ ಆಕಳವಾಡಿ, ರಮೇಶ ಗುಬ್ಬೇವಾಡ, ಎಂ.ಎA.ಪಟೇಲ, ಬಸನಗೌಡ ಚಟ್ಟರಕಿ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ ಭರವಸೆಗಳು ಜನರನ್ನು ಸೆಳೆಯುವಲ್ಲಿ ಸಫಲ :ಸುಣಗಾರ
Related Posts
Add A Comment