ವಿಜಯಪುರ: ನಗರ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಅವರ ಪರವಾಗಿ, ಪುತ್ರ ರಾಮನಗೌಡ ಪಾಟೀಲ ಅವರು ಸೋಮವಾರ ನಗರದ ವಿವಿಧೆಡೆ ಸಂಚರಿಸಿ ಪ್ರಚಾರ ನಡೆಸಿ, ಮತಯಾಚಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ತಂದೆ ಕಳೆದ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರೆ. ದೂಳಾಪುರವಾಗಿದ್ದ ನಗರವನ್ನು ಸ್ಮಾರ್ಟ್ ಸಿಟಿ ಆಗಿ ಹೊಳೆಯುವಂತೆ ಮಾಡಿದ್ದಾರೆ. ಅವರ ವಿರೊಧಿಗಳು ಕೂಡ ಇದನ್ನು ಒಪ್ಪುತ್ತಾರೆ. ಗುಣಮಟ್ಟದ ಆಂತರಿಕ ಹಾಗೂ ಮುಖ್ಯ ರಸ್ತೆಗಳ ಅಭಿವೃದ್ಧಿ, ಒಳಚರಂಡಿ ನಿರ್ಮಾಣ, ಝಿಮ್, ಚಿಲ್ಡ್ರನ್ ಪಾರ್ಕ್, ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಮೂಲಭೂತ ಸೌಕರ್ಯಗಳ ಜೊತೆಗೆ ವೈನ್ ಪಾರ್ಕ್, ಜವಳಿ ಪಾರ್ಕ್, ಜಿಟಿಟಿಸಿ ಕಾಲೇಜು ಮಂಜೂರು ಮಾಡಿಸಿದ್ದಾರೆ. ಇನ್ನೂ ಹಲವು ಕನಸುಗಳನ್ನು ಹೊತ್ತಿಕೊಂಡಿದ್ದು, ತಾವುಗಳು ಆಶೀರ್ವದಿಸುವ ಮೂಲಕ ಈಡೇರಿಸಲು ನೆರವಾಗಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಅಶೋಕ್ ತೊರವಿ, ಸಿದ್ದನಗೌಡ ಬಿರಾದಾರ, ತುಳಸಿರಾಮ್ ಸೂರ್ಯವಂಶಿ, ಚಂದ್ರಕಾAತ ಪತ್ತಾರ, ಭೀಮು ಮಾಶಾಳ, ಶಂಕರ ಹೂಗಾರ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು ಇದ್ದರು.
ಎಎಪಿ ತೊರೆದು ಬಿಜೆಪಿ ಸೇರಿದ ಮಹಿಳೆಯರು
ವಿಜಯಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರಚಾರ ಕಾರ್ಯಾಲಯದಲ್ಲಿ ಸೋಮವಾರ ಎಎಪಿ ಪಕ್ಷ ತೊರೆದು ಪ್ರಿಯಾಂಕಾ ಶೇರಖಾನೆ ನೇತೃತ್ವದಲ್ಲಿ ಹಲವು ಮಹಿಳೆಯರು ಬಿಜೆಪಿ ಸೇರ್ಪಡೆಗೊಂಡರು.