ಆಲಮೇಲ: ಪಟ್ಟಣದ ಐ.ಕೆರಾಯಲ್ ಪ್ರಾಥಮಿಕ ಶಾಲೆಯಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ದ್ವಜಾರೋಹಣವನ್ನು ಸಂಸ್ಥೆಯ ಉಪಾಧ್ಯಕ್ಷ ಶೌಕತಲಿ ಸುಂಬಡ ನೆರವೇರಿಸಿದರು.
ಮುಖ್ಯಅತಿಥಿಗಳಾಗಿ ಡಾ.ರಮೇಶ ಕತ್ತಿ ಮಾತನಾಡಿ, ‘ಐಕ್ಯತೆ ಮತ್ತು ಸರ್ವಧರ್ಮಿಯರ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ ಭಾರತವು ಮುಂದಿದೆ ಎಂದರು.
ಅತಿಥಿಗಳಾಗಿ ಪತ್ರಕರ್ತ ಅಬ್ದುಲಗನಿ ದೇವರಮನಿ, ಪಾಲಕ ಪ್ರತಿನಿಧಿ ಶಂಕರಗೌಡ ಪಾಟೀಲ, ಕಾಸೀರಾಯ ಬಿರಾದಾರ ಮೊದಲಾದವರು ವೇದಿಕೆಯಲ್ಲಿದ್ದರು.
ಮುಖ್ಯಗುರುಗಳಾದ ಸಂತೋಷ ಚೆಂಗಟ್ಟಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಿಕ್ಷಕಿ ಸಂಜನಾ ಬೇನೂರ, ಮೇಧಾರಾಣಿ, ರಕ್ಷಿತಾ ಅಂಬೂರೆ, ಚೆನ್ನಬಸಮ್ಮ ಮೊದಲಾದವರು ಉಪಸ್ಥಿತರಿದ್ದರು.
ಕು.ವಿದ್ಯಾ ಬಿರಾದಾರ ನಿರೂಪಿಸಿದರು. ಕು.ಸುಷ್ಮಿತಾ ಕರಂಡೆ ಸ್ವಾಗತಿಸಿದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Subscribe to Updates
Get the latest creative news from FooBar about art, design and business.
Related Posts
Add A Comment

