ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ವಿಜಯಪುರ: ಜೀವನದಲ್ಲಿ ಸಾಧಿಸಬೇಕಾದರೆ ಓದು ಅವಶ್ಯಕತೆ ಇದೆ ಅದಕ್ಕೆ ಗ್ರಂಥಾಲಯದ ಪೂರಕ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನಶೀಲರಾಗಬೇಕು ಎಂದು ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ ದೊಡ್ಡಮನಿ ಹೇಳಿದರು.
ನಗರದ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಂಯೋಜನೆಯಡಿ ಏರ್ಪಡಿಸಿದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗ್ರಂಥಾಲಯ ಪಿತಾಮಹರಾದ ಡಾ.ಎಸ್.ಆರ್.ರಂಗನಾಥ ಅವರನ್ನು ಸ್ಮರಿಸಬೇಕು. ಅದರಂತೆ ವಿದ್ಯಾರ್ಥಿಗಳ ಬದುಕಿಗೆ ಗ್ರಂಥಾಲಯ ಬಹಳಷ್ಟು ಅವಶ್ಯಕತೆ ಇದೆ. ಇಂದಿನ ವಿದ್ಯಾರ್ಥಿಗಳು ಓದುವುದುನ್ನು ಬಿಟ್ಟು ಅನ್ಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದಿನ ವಿದ್ಯಾರ್ಥಿಗಳು ಜೀವನದಲ್ಲಿ ಸಾಧಿಸಬೇಕಾದರೆ ಓದಿನಿಂದ ಮಾತ್ರ ಸಾಧ್ಯ ಆದ್ದರಿಂದ ಗ್ರಂಥಾಲಯದಲ್ಲಿ ನಿರಂತರವಾಗಿ ಅಧ್ಯಯನಶೀಲರಾಗಬೇಕು. ನಮ್ಮ ಬದುಕಿನಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಇಂತಹ ಗ್ರಂಥಾಲಯಗಳು ಸಹಾಯಕವಾಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ಅವಶ್ಯಕತೆ ಇದ್ದು, ಇಂತಹ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಮಾತನಾಡಿ, ಕಲಿಕೆಗೆ ಗ್ರಂಥಾಲಯ ಅವಶ್ಯಕ. ಆದರೆ ಗ್ರಂಥಾಲಯ ಕೇವಲ ಗ್ರಂಥಾಲಯವಾಗಿ ಉಳಿದಿವೆ. ವಿದ್ಯಾರ್ಥಿಗಳು ನಿರಂತವಾಗಿ ಓದುತ್ತಿಲ್ಲ. ಕೇವಲ ಮೊಬೈಲ್ ಗೀಳಿಗೆ ತುತ್ತಾಗುತ್ತಿದ್ದಾರೆ. ನಮ್ಮ ಮಹಾವಿದಾಲಯದಲ್ಲಿ ಅತ್ಯಧಿಕ ತಂತ್ರಜ್ಞಾನಾಧಾರಿತ, ಸುಸಜ್ಜಿತವಾದ ಗ್ರಂಥಾಲಯವಿದೆ ಅದನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಇಂದಿನ ಅಧುನಿಕ ಯುಗದಲ್ಲಿ ಅತ್ಯಧಿಕ ತಂತ್ರಜ್ಞಾನ ಆಧರಿತವಾದ ಗ್ರಂಥಾಲಯವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ತುಂಬಾ ಸಹಾಯಕಾರಿಯಾಗಿದೆ ಎಂದು ಹೇಳಿದರು.
ಪುಸ್ತಕಗಳು ನಮಗೆ ಉತ್ತಮ ಸನ್ಮಾರ್ಗಮಿತ್ರ ಅದ್ದರಿಂದ ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ನಿರಂತರವಾಗಿ ಓದಿನಲ್ಲಿ ಸಕ್ರೀಯ ಹೆಚ್ಚಿನ ಸಮಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮತ್ತು ಬೋಧಕ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಗ್ರಂಥಪಾಲಕಿಯರಾದ ಶ್ರೀಮತಿ ಕವಿತಾ ಕನಕರೆಡ್ಡಿ, ಡಾ.ಅನೀಲ ಪಾಟೀಲ, ಡಾ.ಶ್ರೀಶೈಲ ಉಂಕಿ, ಡಾ.ಸ್ವಾತಿ ಪಾಟೀಲ, ಡಾ.ಉಷಾದೇವಿ ಹಿರೇಮಠ, ಪ್ರೊ.ರೂಪಾ ಮೋಟಗಿ, ಶ್ರೀಮತಿ ಕಾಶಿಬಾಯಿ.ಬಿರಾದಾರ, ಮಲಿಕ್.ಎಲ್,ಜಮಾದಾರ, ಎಲ್.ಎಸ್,ಪೂಜಾರಿ. ಎಸ್,ಹೆಚ್.ಹೂಗಾರ, ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

