ಕೊಲ್ಹಾರ: 2023 ವಿಧಾನಸಭಾ ಚುನಾವಣೆ ಹಿನ್ನೆಲೆ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಎಸ್.ಕೆ.ಬೆಳ್ಳುಬ್ಬಿಯವರ ನಾಯಕತ್ವ ಹಾಗೂ ಬಿಜೆಪಿ ಪಕ್ಷದ ತತ್ವಸಿದ್ದಾಂತ ಮೆಚ್ಚಿಕೊಂಡು ಕೊಲ್ಹಾರ ತಾಲ್ಲೂಕಿನ ಕೂಡಗಿ ಗ್ರಾಮದ ಅಪಾರ ಸಂಖ್ಯೆಯ ವಿವಿಧ ಸಮಾಜಗಳ ಗುರುಹಿರಿಯರು ಹಾಗೂ ಯುವಕರು ಬೆಳ್ಳುಬ್ಬಿಯವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಬೆಂಬಲ ಸೂಚಿಸಿದರು. ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿ ಜೈಕಾರ ಹಾಕಿದರು.