ಕಲಕೇರಿ: ಸಮೀಪದ ಆಲಗೂರ ಗ್ರಾಮದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ( ಕುದುರಿ ಸಾಲೋಡಗಿ)ಗ್ರಾಮದ ವಿವಿಧೆಡೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ನಂತರ ಮಾರುತಿ ದೇವಸ್ಥಾನದಲ್ಲಿ ಸಭೆ ನಡೆಸಿ ಮಾತನಾಡಿದ ರಾಜುಗೌಡ ಪಾಟೀಲ್ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳು ಬಂಡಾಯದ ಬೇಗುದಿಯಲ್ಲಿ ಒದ್ದಾಡುತ್ತಿವೆ. ಕ್ಷೇತ್ರದಲ್ಲಿ ಜೆಡಿಎಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಎಷ್ಟೆ ಪ್ರಯತ್ನಿಸಿದರು ಈಬಾರಿ ಜಾತ್ಯತೀತವಾಗಿ ನನಗೆ ಕ್ಷೇತ್ರದ ಜನತೆ ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೆ ಏ.18ರಂದು ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಜೆಡಿಎಸ್ ಮುಖಂಡ ಸಾಯಬಣ್ಣ ಬಾಗೇವಾಡಿ. ಮುನ್ನಾ ಮಳಖೇಡ, ಮಡು ಸಾಹುಕಾರ್, ಕಾಸಿಂ ನಾಯ್ಕೋಡಿ. ರಮೇಶ್ ಹೆಂಡಿ. ಶರಣು ಧರಿ. ಶಂಕರಗೌಡ ಪಾಟೀಲ. ಕಂಠೆಪ್ಪ ಮು ಜನ್ನಪ್ಪಗೋಳ. ಮಡಿವಾಳಪ್ಪ ಮಾಗಣಗೇರಿ. ಲಕ್ಷ್ಮಣ ವಾಲಿಕಾರ. ಮಲ್ಲಿಕಾರ್ಜುನ ತಮ್ಮಣ್ಣಗೋಳ. ಸಂತೋಷ್ ತಮ್ಮಣ್ಣಗೋಳ. ಕೆಂಚಪ್ಪ ಜನ್ನಪ್ಪಗೋಳ. ರಘುವೀರ್ ವರ್ಧಮಾನ. ಮಹಿಬೂಬ ದಲಾಲ. ಪೀರಮೊಹ್ಮದ ಚಬನೂರ. ಈರಪ್ಪ ವಠಾರ. ಮಡಿವಾಳಪ್ಪ ಬಾವೂರ. ಚೇತನ್ ಹೂಗಾರ ಸೇರಿದಂತೆ ಅನೇಕ ಕಾಯ೯ಕತ೯ರಿದ್ದರು.
Related Posts
Add A Comment