ವಿಜಯಪುರ: ಲಿಂಗಾಯತರನ್ನು ಬಿಜೆಪಿ ಎಂದೂ ಕಡೆಗಣಿಸಿಲ್ಲ, ಬಿಜೆಪಿ ಲಿಂಗಾಯತ ವಿರೋಧಿ ಎಂದರೆ ಹೇಗೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅವರಿಗೆ ಎಲ್ಲ ರೀತಿಯಿಂದ ಅಧಿಕಾರ ನೀಡಿದೆ. ಮಾನ, ಮರ್ಯಾದೆ, ಸ್ವಾಭಿಮಾನ ಇದ್ದವರು ಕಾಂಗ್ರೆಸ್‌ಗೆ ಹೋಗುವುದಿಲ್ಲ. ಲಿಂಗಾಯತ ಮತಗಳಿಂದ ಶಾಸಕರಾಗಿದ್ದೀರಿ, ಮುಖ್ಯಮಂತ್ರಿಯಾಗಿದ್ದೀರಿ, ಎಲ್ಲ ಅಧಿಕಾರವನ್ನು ಪಕ್ಷ ಕೊಟ್ಟಿದೆ. ಆದರೆ ಸದ್ಯ ಬಿಜೆಪಿ ಲಿಂಗಾಯತ ವಿರೋಧಿ ಎನ್ನುವುದು ಸರಿಯಲ್ಲ. ನನ್ನನ್ನೂ ಉಚ್ಚಾಟನೆ ಮಾಡಲಾಗಿತ್ತು. ನಾನು ಯಾವತ್ತೂ ಪಕ್ಷವನ್ನು ವಿರೋಧಿಸಿ ಮಾತನಾಡಲಿಲ್ಲ. ಸದ್ಯ ಕೆಲವೊಂದು ವಿಷಯ ಬಹಿರಂಗ ಪಡಿಸುತ್ತೇನೆ ಎಂದು ಶೆಟ್ಟರ್ ಹೇಳಿಕೆ ನೀಡುವುದು ಬ್ಲಾö್ಯಕ್ ಮೇಲೆ ಅಷ್ಟೇ ಎಂದರು.
ಕೆ.ಎಸ್. ಈಶ್ವರಪ್ಪ ಅವರಿಗೂ ಟಕೆಟ್ ನಿರಾಕರಣೆ ಮಾಡಲಾಗಿದೆ. ಆದರೆ ಅವರು ಪಕ್ಷ ಸಂಘಟನೆ ಮಾಡಲು ಮುಂದಾಗಿಲ್ಲವೇ ? ಈಶ್ವರಪ್ಪ ಅವರನ್ನು ಅನುಕರಣೆ ಮಾಡಬೇಕು ಎಂದರು.
ಕೋಮುವಾದಿ, ವಿದೇಶಿ ಹಣವನ್ನು ಬಳಕೆ ಮಾಡಿ ಮುಸ್ಲಿಂ ರಾಷ್ಟçವನ್ನಾಗಿಸುವ ಗುರಿ ಹೊಂದಿರುವ ಎಸ್‌ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಜೊತೆ ಹೋಗುವುದೆಂದರೆ ಏನರ್ಥ ? ಎಂದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿಯಾಗಿ ಸಾಕಷ್ಟು ಅಧಿಕಾರ ಅನುಭವಿಸಿದವರೆಲ್ಲ ಪಕ್ಷ ಬಿಟ್ಟು ಹೋರಟಿದ್ದು ಸರಿಯಲ್ಲ. ಇಷ್ಟು ದಿನ ಎಲ್ಲ ಅಧಿಕಾರ ಅನುಭವಿಸಿ ಈಗ ಅನ್ಯಾಯ ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದೇ ನ್ಯಾಯವೇ ? ಎಂದ ಅವರು, ಮರಳಿ ಬಿಜೆಪಿಗೆ ಬರಬೇಕು ಎಂದು ಕೋರಿದರು.
ಎಲ್ಲಿ ಅನ್ಯಾಯ. ನನಗೂ ಅನ್ಯಾಯವಾಗಿದೆ. ಆದಾಗ್ಯೂ. ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದರು.
ಬಿಜೆಪಿಯನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಸ್ತುತ 2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗುತ್ತದೆ. ಅನ್ಯ ರೀತಿಯಲ್ಲಿ ಪಕ್ಷದಿಂದ ಸ್ಪರ್ಧಿಸಿದವರ ಠೇವಣಿ ಜಪ್ತಿಯಾಗುತ್ತದೆ. ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೆ ಬರುತ್ತದೆ ಎಂದರು.
ಹನೀ ನೀರಾವರಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರವಾಗಿದೆ ಎಂದು ಹೇಳಿರುವ ನೆಹರೂ ಓಲೇಕಾರ್ ಅವರು ಆಗೇಕೆ ಸುಮ್ಮನಿದ್ದರು ? ಈಗ ಟಿಕೆಟ್ ಸಿಗದೇ ಹೋದಾಗ ಈ ಮಾತು ವ್ಯಕ್ತವಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ನೆರೆ ಬಂದಾಗ ರಾಜ್ಯ ಸರ್ಕಾರ ಸ್ಪಂದನೆ ಮಾಡದೇ ಹೋದ ಸಂದರ್ಭದಲ್ಲಿ, ವಿಜಯಪುರ ಸೇರಿದಂತೆ ಹಲವಾರು ಮಹಾನಗರ ಪಾಲಿಕೆಗೆ ಅನುದಾನ ಕಡಿತಗೊಳಿಸಿದಾಗ ಜನರ ಧ್ವನಿಯಾಗಿ ನಾನು ಆಳುವ ಪಕ್ಷದಲ್ಲಿಯೇ ಇದ್ದರೂ ಅದನ್ನು ಹೊರಹಾಕಿದ್ದೆ, ಸರ್ಕಾರದ ವೈಫಲ್ಯಗಳನ್ನು ಟೀಕಿಸಿದ್ದೆ, ಆದರೆ ಈಗ ಕೆಲವರು ಟಿಕೆಟ್ ಸಿಗಲಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ ಎಂದರು.
ಹಿಂದುತ್ವದ ಮೇಲೆ ಇದ್ದರೆ ಮಾತ್ರ ಗೆಲುವು ಸಾಧ್ಯ. ಮೀಸಲಾತಿ ಹೆಚ್ಚು ಮಾಡಿದವರು ಬಿಜೆಪಿಯವರು. ಸೂರ್ಯ ಚಂದ್ರರಿರುವವರೆಗೂ ಮೀಸಲಾತಿ ತೆಗೆಯಲಿಕ್ಕೆ ಸಾಧ್ಯವಿಲ್ಲ ಎಂದರು.
ನಾನು ಸರಳವಾಗಿ ಈ ಬಾರಿ ಪ್ರಚಾರ ಮಾಡುವೆ, ಬ್ಯಾಡಗಿ, ಬಾಗಲಕೋಟೆ ಸೇರಿದಂತೆ ಹಲವಾರು ಭಾಗಗಳಲ್ಲಿ ಪಕ್ಷದ ಪರ ಪ್ರಚಾರ ಮಾಡಲು ಹೋಗುತ್ತಿದ್ದೇನೆ. ಅಬ್ಬರದ ಪ್ರಚಾರ ಮಾಡುವುದಿಲ್ಲ, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ ಎಂದರು.
ವಿಡಿಎ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಕಿರಣ ಪಾಟೀಲ, ವಿವೇಕಾನಂದ ಡಬ್ಬಿ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
Related Posts
Add A Comment