ವಿಜಯಪುರ: ಕಾಂಗ್ರೆಸ್ ಪಕ್ಷವು ೭೦ ವರ್ಷ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರೂ ದಲಿತರು ಮತ್ತು ಹಿಂದುಳಿದ ವರ್ಗಗಳ ಏಳ್ಗೆಗಾಗಿ ಯಾವುದೇ ಯೋಜನೆಗಳನ್ನು ರೂಪಿಸದೆ ಅವರನ್ನು ಕೇವಲ ಓಟಿಗಾಗಿ ಬಳಸಿಕೊಂಡು ದುರುಪಯೋಗ ಮಾಡಿಕೊಂಡಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ವಕ್ತಾರ ಸುರೇಶ ಬಿರಾದಾರ ಆರೋಪಿಸಿದರು.
ಶನಿವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವಂತಹ ಸಂವಿಧಾನವನ್ನು ರಚಿಸಿದ ಅಂಬೇಡ್ಕರ ಅವರನ್ನು ಆಗ ಕಾಂಗ್ರೆಸ್ ಪಕ್ಷ ಹೀನಾಯವಾಗಿ ನಡೆಸಿಕೊಂಡಿತು. ಎರಡು ಸಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅಂಬೇಡ್ಕರ ಅವರನ್ನು ಕಾಂಗ್ರೆಸ್ ಪಕ್ಷವು ಕಮ್ಯೂನಿಷ್ಟರ ನೆರವಿನೊಂದಿಗೆ ಸೋಲಿಸಿತು. ಅವರು ತೀರಿಕೊಂಡಾಗ ಅವರ ಅಂತ್ಯಕ್ರಿಯೆ ನೆರವೇರಿಸಲು ಅಂದಿನ ಪ್ರಧಾನಿ ನೆಹರು ಅವರು ಸ್ಥಳ ಒದಗಿಸದೇ ಅನ್ಯಾಯ ಮಾಡಿದರು. ಹೀಗಿರುವಾಗ ಕಾಂಗ್ರೆಸ್ ಪಕ್ಷವು ಈಗ ಅಂಬೇಡ್ಕರ್ ಹೆಸರು ಹೇಳಿ ದಲಿತರ ಮತಯಾಚಿಸುತ್ತಿದೆ. ಕಾರಣ ದಲಿತರು ಯಾವುದೇ ಕಾರಣಕ್ಕೂ ಕಾಂಗೆಸ್ ಪಕ್ಷವನ್ನು ನಂಬದೇ, ಅದನ್ನು ತಿರಸ್ಕರಿಸಿ, ಬಿಜೆಪಿಯನ್ನು ಬೆಂಬಲಿಸಿ ರಾಜ್ಯದಲ್ಲಿ ಮತ್ತೊಮ್ಮೆ ಸರಕಾರ ರಚಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು.
ಮಹಾನಗರ ಪಾಲಿಕೆ ಮಾಜಿ ಉಪಮಹಾಪೌರ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿ ಅನುಕೂಲ ಮಾಡಿಕೊಟ್ಟಿದೆ. ಬೊಮ್ಮಾಯಿ ಸರಕಾರ ದಲಿತರಿಗೆ ಆಯಾ ಜಾತಿಯ ಜನಸಂಖ್ಯೆಗನುಗುಣವಾಗಿ ಒಳ ಮೀಸಲಾಗಿ ಕಲ್ಪಿಸಿ ಅನುಕೂಲ ಮಾಡಿಕೊಟ್ಟಿದೆ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಡಾ.ಬಿ.ಆರ್.ಅಂಬೇಡ್ಕರ ಅವರಿಗೆ ‘ಭಾರತ ರತ್ನ’ ಅತ್ಯುನ್ನತ ಪ್ರಶಸ್ತಿ ನೀಡದೇ ನೆಹರು ಕುಟುಂಬದವರಿಗೆ ನೀಡಿತು. ಕಾಂಗ್ರೆಸ್‌ನ್ನು ಅಂಬೇಡ್ಕರ್ ಅವರು ಸುಡುವ ಮನೆ ಎಂದೇ ಕರೆದಿದ್ದರು. ಕಾಂಗ್ರೆಸ್‌ನಿAದ ದಲಿತರ ಅಭಿವೃದ್ಧಿ, ಅವರನ್ನು ಮೇಲೆತ್ತುವ ಕೆಲಸ ಸಾಧ್ಯವಿಲ್ಲ ಎಂದಿದ್ದರು. ಕಾರಣ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ ಪಕ್ಷದ ಅನ್ಯಾಯದ ಕುರಿತು ಜಿಲ್ಲೆಯ ದಲಿತರ ಮನೆಗಳಿಗೆ ತೆರೆಳಿ ಮನವರಿಕೆ ಮಾಡಿಕೊಡಲಾಗುವುದು ಎಂದರಲ್ಲದೇ ದಲಿತರು ಒಟ್ಟಾಗಿ ಬಿಜೆಪಿಯನ್ನು ಬೆಂಬಲಿಸಬೇಕೆAದು ಕರೆ ನೀಡಿದರು.
ಮಾಧ್ಯಮ ಸಂಚಾಲಕ ವಿಜಯ ಜೋಷಿ, ನಗರ ವಕ್ತಾರ ರಾಕೇಶ ಕುಲಕರ್ಣಿ ಇದ್ದರು.
Subscribe to Updates
Get the latest creative news from FooBar about art, design and business.
ಕಾಂಗ್ರೆಸ್ ನಿಂದ ದಲಿತರ ದುರುಪಯೋಗ :ಡಾ.ಅಂಬೇಡ್ಕರ ರಿಗೆ ಅವಮಾನ :ಆರೋಪ
Related Posts
Add A Comment