ಮುದ್ದೇಬಿಹಾಳ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹಳ ದೊಡ್ಡ ಮಟ್ಟದ ಹಿನ್ನೆಡೆ ಏನೂ ಆಗಿಲ್ಲ. ಪ್ರತೀ ಬೂತ್ ಗೆ ಕೇವಲ ೨೦ ಮತಗಳ ಅಂತರವಾಗಿದ್ದು ಈ ಬಾರಿ ಅತೀ ಹೆಚ್ಚು ಮತಗಳನ್ನು ಕಾಂಗ್ರೇಸ್ ಪಕ್ಷ ಪಡೆಯುವ ವಿಶ್ವಾಸ ಇದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಹೇಳಿದರು.
ಬೆಂಗಳೂರಿನ ಡಿ.ಕೆ.ಶಿವಕುಮಾರ ಅವರ ಗೃಹ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಬಿ-ಫಾರಂ ಪಡೆದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನನ್ನ ಇತಿಹಾಸದಲ್ಲಿಯೇ ಯಾವುದೇ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಇಷ್ಟೊಂದು ಬೆಂಬಲ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಊಹೆಗೂ ಮೀರಿ ಮತಕ್ಷೇತ್ರದ ಜನತೆ ಬೆಂಬಲಿಸುತ್ತಿರುವುದು ನೋಡಿದರೆ ದುರಾಡಳಿತಕ್ಕೆ ಜನತೆ ರೋಸಿ ಹೋಗಿರುವುದು ಕಾಣುತ್ತಿದೆ. ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಬರೀ ಸೋಲಿಸುವದಷ್ಟೇ ಅಲ್ಲದೇ ಹೀನಾಯವಾಗಿ ಸೋಲಿಸಲು ಕಾತುರದಿಂದ ಕಾಯುತ್ತಿದ್ದಾರೆ. ಎಂದರು.
ಕೆಪಿಸಿಸಿ ಅಧ್ಯಕ್ಷರಿಂದ ಸಿ.ಎಸ್.ನಾಡಗೌಡರಿಗೆ ಬಿಫಾರ್‌ಂ ವಿತರಣೆ
Related Posts
Add A Comment