ಇಂಡಿ: ನಗರದ ಮೂರು ಕೆರೆಗಳಿಗೆ ನೀರು ತುಂಬಿಸಿ, ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಹಿರೇ ಇಂಡಿ ಸುತ್ತಮುತ್ತಲಿನ ರೈತರು ಗುರುವಾರ ತಹಸೀಲ್ದಾರ ಬಿ.ಎಸ್. ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಕಾಸುಗೌಡ ಬಿರಾದಾರ, ಅಶೋಕ ಅಕಲಾದಿ ದೇವೆಂದ್ರ ಕುಂಬಾರ, ಮಲ್ಲು ಗುಡ್ಲ ಮಾತನಾಡಿ, ಈಗಾಗಲೆ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಬಿಟ್ಟಿದ್ದು, ಅದೇ ಕಾಲುವೆ ಮುಖಾಂತರವೇ ಹಿರೇ ಇಂಡಿ ಕೆರೆ ತುಂಬಿಸಬೇಕು. ಅಲ್ಲದೆ ಬಡಿಗೇರ ಕೆರೆ, ಮೋನಪ್ಪ ತಾಂಡಾ ಕೆರೆಗಳನ್ನು ಭುಯ್ಯಾರ ಲಿಫ್ಟ ಇರಿಗೇಶನ್ ಮೂಲಕ ತುಂಬಿಸಬೇಕೆಂದು ಆಗ್ರಹಿಸಿದರು.
ಸಂತೋಶ ಲಾಳಸಂಗಿ, ಬಸು ಕುಂಟೋಜಿ ಮಾತನಾಡಿ ಮಳೆಗಾಲವಿದ್ದರೂ ನಮ್ಮ ಭಾಗದಲ್ಲಿ ಸಮರ್ಪಕ ಮಳೆಯಾಗುತ್ತಿಲ್ಲ. ಕಾಲುವೆ, ನದಿಗಳ ಮೂಲಕ ಕೆರೆಗಳನ್ನಾದರೂ ತುಂಬಿದರೆ ಅಂತರ್ಜಲಮಟ್ಟ ಹೆಚ್ಚಾಗಿ ಭಾವಿ, ಕೊಳವೆ ಭಾವಿಗಳಿಗೆ ನೀರಾಗುತ್ತದೆ. ಇದರಿಂದ ರೈತರಿಗೆ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ನೀರಾವರಿ ಇಲಖೆಯ ಅಧಿಕಾರಿಗಳು ಹಾಗೂ ಶಾಸಕರು, ಸಚಿವರು ನೀರು ತುಂಬಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಅಶೋಕ ಅಕಲಾದಿ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ರ್ಶರೀಶೈಲ ಪೂಜಾರಿ, ಮಾಳು ಪೂಜಾರಿ, ಮಲ್ಲು ಗುಡ್ಲ, ಶಾಂತು ಲಾಳಸಂಗಿ, ಕಾಂತು ಹೊಟಗಿ, ಸಂತೋಶ ಲಾಳಸಂಗಿ, ಬಸು ಕುಂಟೋಜಿ, ಮಲ್ಲಪ್ಪ ಲಾಳಸಂಗಿ, ತುಕಾರಾಮ ತಾಂಬೆ, ಶಾಂತು ನಾಟೀಕಾರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

